Advertisment

ತಂದೆ ನೆನೆದು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ!

author-image
Veena Gangani
ತಂದೆ ನೆನೆದು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ!
Advertisment
  • ಜನ ಮೆಚ್ಚಿದ ಕಾಮಿಡಿಯನ್​ ಅವಾರ್ಡ್ ಅನ್ನು ಮುಡಿಗೇರಿಸಿಕೊಂಡ ಚಂದ್ರಪ್ರಭ!
  • ಎಲ್ಲರನ್ನೂ ನಗಿಸೋ ಕಲಾವಿದರ ಹಿಂದೆ ಹೇಳಿಕೊಳ್ಳಲಾಗದಂತಹ ನೋವಿರುತ್ತದೆ
  • ಗಿಚ್ಚಿ ಗಿಲಿಗಿಲಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದಾರೆ

ವೀಕ್ಷಕರನ್ನು ನಕ್ಕು ನಗಿಸೋ ಕಲಾವಿದರ ಹಿಂದೆ ಅವರಿಗೆ ಹೇಳಿಕೊಳ್ಳಲಾಗದ ನೋವು ತುಂಬಿರುತ್ತೆ. ವೀಕ್ಷಕರನ್ನ ನಗಿಸುವ ಉದ್ದೇಶದಿಂದ ಆ ನೋವನ್ನ ಮರೆತು ಇಡೀ ಕರುನಾಡನ್ನ ನಕ್ಕು ನಗಿಸುತ್ತಾ ಇರುತ್ತಾರೆ ಅದರಲ್ಲೂ ಕಾಮಿಡಿ ಕಲಾವಿದರು. ಈ ಬಾರಿ ಜನ ಮೆಚ್ಚಿದ ಕಾಮಿಡಿಯನ್​ ಅವಾರ್ಡ್​ ಗೆದ್ದಿದ್ದು ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ.

Advertisment

publive-image

ಹೌದು ಅನುಬಂಧ ಅವಾರ್ಡ್​ ಕಾರ್ಯಕ್ರಮದಲ್ಲಿ ತಮ್ಮ ಪ್ರಶಸ್ತಿಯನ್ನು ಪಡೆದಕೊಂಡ ಕ್ಷಣ ಚಂದ್ರಪ್ರಭ ಅವರು ಭಾವುಕರಾಗಿದ್ದಾರೆ. ಇನ್ನೂ ಈ ಕುರಿತು ವೇದಿಕೆ ಮೇಲೆ ಮಾತಾಡಿದ ಹಾಸ್ಯನಟ ಚಂದ್ರಪ್ರಭ ಅವರು, ನನ್ನಪ್ಪ ಇದ್ದಾಗ ಅವರ ಜೊತೆ ಕೂತು ಮಾತಾಡಿದ್ದ ದಿನ ಇಲ್ಲಾ. ಅವರನ್ನು ವಿಚಾರಿಸಿಕೊಂಡ ದಿನವಿಲ್ಲ. ಇವತ್ತು ಅವರು ನನ್ನ ಜೊತೆ ಇಲ್ಲಾ. ಈ ಅವಾರ್ಡ್​ನ ನಾನು ನನ್ನಪ್ಪನಿಗೆ ಅರ್ಪಣೆ ಮಾಡುತ್ತೇನೆ.

ಇದನ್ನು ಓದಿ: ಈ ಪ್ರಾಣಿಯ ಹಾಲು ಕುಡಿದರೆ ಕ್ಷಣ ಮಾತ್ರದಲ್ಲೇ ಮತ್ತೇರಿ ತಲೆ ತಿರುಗಿ ಬಿಡುತ್ತೆ; ಯಾವುದು ಅದು? ರೋಚಕ ವಿಷ್ಯ ಇಲ್ಲಿದೆ!

publive-image

ಅಪ್ಪ ಇದ್ದಾಗ ಚೆನ್ನಾಗಿ ನೋಡಿಕೊಳ್ಳಿ. ಆ ಮೇಲೆ ಬೇಕು ಅಂದ್ರು ನಮ್ಮ ಜೊತೆಗೆ ಅವರು ಇರೋದಿಲ್ಲ. ಅಪ್ಪ ಇದಿದ್ದರೆ ಇವತ್ತು ಈ ಸ್ಥಾನದಲ್ಲಿ ಇರುತ್ತಿದ್ದರು. ತುಂಬಾ ಖುಷಿ ಪಡುತ್ತಿದ್ದರು ಅಂತಾ ತುಂಬಾನೆ ಭಾವುಕರಾಗಿದ್ದಾರೆ. ಒಬ್ಬ ಕಲಾವಿದ ಜೀವನ ಹೇಗಿರುತ್ತೆ ಅನ್ನೋದು ಅವನ ಸುತ್ತ ಮುತ್ತಲಿನ ಜನರಿಗೆ ಬಿಟ್ಟರೆ ಯಾರಿಗೂ ಗೊತ್ತಿರಲ್ಲ. ಚಂದ್ರಪ್ರಭ ಕೂಡ ಒಳ್ಳೆಯ ಕಲಾವಿದರು. ಅವರಿಗೆ ಈ ಪ್ರಶಸ್ತಿ ಬಂದಿರೋದು ನಿಜಕ್ಕೂ ಖುಷಿಯ ವಿಚಾರ. ಇನ್ನೂ ಕಿರುತೆರೆ ಜನಪ್ರಿಯ ಶೋ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಶೋನಲ್ಲಿ ತಮ್ಮ ಅಧ್ಬುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment