newsfirstkannada.com

Share :

23-05-2023

    ಜಡ್ಜ್​ಗೆ ಕಣ್ಣೀರು ತರಿಸಿದ ಗಿಚ್ಚಿ ಗಿಲಿಗಿಲಿ ಪ್ರತಿಭೆ

    ಪುಟ್ಟ ಪ್ರತಿಭೆ ಮಹಿತ ನಟನೆಗೆ ಫ್ಯಾನ್ಸ್​​ ಫಿದಾ

    ಮಹಿತಳ ನಟನೆ ನೋಡಿ ದಂಗಾದ ಜಡ್ಜ್

ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಅದ್ಭುತ ಶಕ್ತಿ ಇದ್ದೇ ಇರುತ್ತೆ. ಆ ಶಕ್ತಿ ಹೊರಗಡೆ ಬರಲು ಒಂದು ಒಳ್ಳೆಯ ಸಮಯ ಬರಬೇಕು ಅಷ್ಟೇ. ಹಾಗೇ ಪುಟ್ಟ ಹುಡುಗಿ ಮಹಿತ ಇದೀಗ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಕಮಾಲ್​ ಮಾಡುತ್ತಾ, ವೀಕ್ಷಕರ ಮನಸನ್ನು ಹಂತ ಹಂತವಾಗಿ ತನ್ನತ್ತ ಸೆಳೆಯುತ್ತಿದ್ದಾಳೆ. ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಪುಟ್ಟ ಪ್ರತಿಭೆ ಮಹಿತ ಎಮೋಷನಲ್ ಸ್ಕಿಟ್ ಮಾಡಿ ಎಲ್ಲರ ಕಣ್ಣಿನಲ್ಲಿ ನೀರು ಬರುವಂತೆ ಮಾಡಿದ್ದಾಳೆ. ಇದು ಪ್ರತಿ ಮನೆಯಲ್ಲೂ ನಡೆಯುವ ಕಥೆ ಇದಾಗಿದ್ದು, ಈ ಸ್ಕಿಟ್​​ನ ಪ್ರೋಮೋವನ್ನು ಕಲರ್ಸ್​ ಕನ್ನಡ ಅಫೀಶಿಯಲ್​ ಪೇಜ್​ನಲ್ಲಿ ಶೇರ್​​ ಮಾಡಿಕೊಳ್ಳಲಾಗಿದೆ. ಮಹಿತ ಜೊತೆಗೆ ಗಿಚ್ಚಿ ಗಿಲಿಗಿಲಿ ಸೀಸನ್​​​​ 1ರ ವಿನ್ನರ್​​​ ಶಿವ ಕುಮಾರ್​ ಕೂಡ ಸಾಥ್​​​ ನೀಡಿದ್ದಾರೆ.

ಗಂಡ, ಹೆಂಡತಿಯ ಆಸೆಯಂತೆ ಒಂದು ಸೈಟ್​​ ಅನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿರುತ್ತಾನೆ. ಆದರೆ ಅದೇ ಸಮಯಕ್ಕೆ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತೆ. ಆಗ ಮಗ ತನ್ನ ತಾಯಿಯನ್ನು ವೈದ್ಯರ ಬಳಿಕ ಕರೆದುಕೊಂಡು ಹೋಗುತ್ತಾನೆ. ವ್ಯೆದ್ಯರು ಹೇಳಿದ ಮಾತಿಗೆ ಮಗನಿಗೆ ಬರ ಸಿಡಿಲು ಬಡಿದಂತೆ ಆಗುತ್ತದೆ. ಕೂಡಲೇ ತಾಯಿಯ ಚಿಕಿತ್ಸೆಗಾಗಿ ಸೈಟ್​​​ ತೆಗೆದುಕೊಳ್ಳವುದನ್ನು ಮುಂದೂಡಿಕೆ ಮಾಡೋಣ ಎಂದು ನಿರ್ಧಾರ ಮಾಡುತ್ತಾನೆ. ತನ್ನ ತಾಯಿಗೆ ಲಂಗ್ಸ್​​ನಲ್ಲಿ ಸಮಸ್ಯೆ ಉಂಟಾಗಿದೆ. ಅದಕ್ಕೆ ಆಪರೇಷನ್ ಮಾಡಿಸಬೇಕು, ಹೀಗಾಗಿ ಎರಡು ವರ್ಷ ಬಿಟ್ಟು ಸೈಟ್​​ ತೆಗೆದುಕೊಳ್ಳೋಣ. ಸೈಟ್​​ ತೆಗೆದುಕೊಳ್ಳುವ ದುಡ್ಡಿನಲ್ಲೇ ಅಮ್ಮ ಆಪರೇಷನ್ ಮಾಡಿಸೋಣ ಎಂದು ಗಂಡ ಹೇಳುತ್ತಾನೆ. ಆಗ ಹೆಂಡತಿ ಕೋಪಗೊಂಡು ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಜೊತೆಗೆ ಇವತ್ತೋ ನಾಳೆ ಬಿದ್ದು ಹೋಗುವ ಮರ ಎಂದು ಹೇಳುತ್ತಾಳೆ. ಕೂಡಲೇ ಈ ಮಾತನ್ನು ಕೇಳಿದ ಗಂಡ ಜೋರಾಗಿ ಹೆಂಡತಿಯ ಕೆನ್ನೆಗೆ ಬಾರಿಸುತ್ತಾನೆ. ಹೀಗೆ ಅವರ ಮನೆಯಲ್ಲಿ ಜಗಳ ಮುಂದುವರೆಯುತ್ತದೆ.

ಇದರ ಮಧ್ಯೆ ಮುಪ್ಪಾದ ತಾಯಿಯ ಪಾತ್ರದಲ್ಲಿ 5 ವರ್ಷದ ಪುಟ್ಟ ಬಾಲಕಿ ಮಹಿತ ಅದ್ಭುತವಾಗಿ ನಟನೆ ಮಾಡಿದ್ದಾಳೆ. ಗಂಡ ಹೆಂಡತಿ ಗಲಾಟೆ ಮಾಡಿಕೊಂಡು ಮಲಗಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ತಾಯಿಯು ಮಗನ ಬಳಿಕ ಬಂದು, ನೀವು ಇನ್ನು ಬಾಳಿ ಬದುಕಬೇಕಾದವರು. ನನ್ನ ವಿಚಾರಕ್ಕೆ ನೀವು ಗಲಾಟೆ ಮಾಡಿಕೊಳ್ಳಬೇಡಿ. ನಾನೂ ಈ ಮನೆ ಬಿಟ್ಟು ದೂರ ಹೋಗುತ್ತೇನೆ. ನನ್ನ ಪ್ರೀತಿ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತೇ ಮಗನೇ ಎಂದು ಹೇಳುತ್ತಾಳೆ. ಹೀಗೆ ತಾಯಿ ಎಲ್ಲಿಗೆ ಹೋಗುತ್ತಾಳೆ ಮುಂದೆ ಏನಾಗುತ್ತದೆ ಎಂದು ಮುಂದಿನ ಶೋನಲ್ಲಿ ಗೊತ್ತಾಗಲಿದೆ. ಹೀಗೆ ಪುಟ್ಟ ಬಾಲಕಿ ನಟನೆ ಮಾಡುತ್ತಿರುವುದನ್ನು ನೋಡಿದ ಸಹ ಕಲಾವಿದರು ಕಣ್ಣೀರು ಹಾಕಿದ್ದಾರೆ. ಜೊತೆಗೆ ಮಹಿತಳ ನಟನೆಗೆ ಮಾರು ಹೋಗಿದ್ದಾರೆ. ಇನ್ನು ಮಹಿತ ತನ್ನ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಫ್ಯಾನ್ಸ್​ಗಳ​ ಮನಸನ್ನು ಗೆದ್ದಿದ್ದಾಳೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಮಹಿತಾಳ ನಟನಗೆ ಬಹುಪರಾಕ್ ಹೇಳಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ ಮಹಿತಾಗೆ ‘ಸೂಪರ್ ಮಹಿತಾ ನೀವು ಯಾವ ಪಾತ್ರವನ್ನು ಮಾಡಿದರು ಚೆನ್ನಾಗಿ ಮಾಡ್ತಿಯಾ. ಇನ್ನೊಬ್ಬ ಫ್ಯಾನ್​​​ ಸೂಪರ್​​ ಪುಟ್ಟಿ.. ಎಂದು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More