ಅಪ್ಪ ಅಂದ್ರೆ ಒಂದು ಶಕ್ತಿ. ಅಪ್ಪ ಅಂದ್ರೆ ಒಂದು ನಂಬಿಕೆ. ಅಪ್ಪ ಅಂದ್ರೆ ಆಕಾಶ.
ಪ್ರೀತಿಯ ಅಪ್ಪಂದಿರನ್ನು ನೆನೆದ ಕಿರುತೆರೆಯರ ಸ್ಟಾರ್ ನಟ ಹಾಗೂ ನಟಿಯರು
ತಂದೆಯನ್ನು ನೆನೆದು ಭಾವುಕರಾದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ
ಅಪ್ಪ ಅಂದ್ರೆ ಒಂದು ಶಕ್ತಿ. ಅಪ್ಪ ಅಂದ್ರೆ ಒಂದು ನಂಬಿಕೆ. ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಗತ್ತು ಗಾಂಭೀರ್ಯ. ಪ್ರತಿಯೊಬ್ಬ ಮಗ ಅಥವಾ ಮಗಳಿಗೂ ಅಪ್ಪನೇ ಮೊದಲ ಹೀರೋ. ಇವತ್ತು ಅಪ್ಪಂದಿರ ದಿನಾಚರಣೆ. ಇಂಥಾ ವಿಶೇಷವಾದ ದಿನದಂದು ಕಿರುತೆರೆಯರ ಸ್ಟಾರ್ ನಟ ಹಾಗೂ ನಟಿಯರು ತಮ್ಮ ಅಪ್ಪಂದಿರನ್ನ ಸ್ಮರಿಸಿದ್ದಾರೆ.
ಹೀಗೆ ಕಿರುತೆರೆ ಜನಪ್ರಿಯ ಶೋ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ತಂದೆಯನ್ನು ನೆನೆದು ಭಾವುಕರಾದರು. ಈ ಕರಿತು ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಹಾಸ್ಯ ಕಲಾವಿದ ಚಂದ್ರಪ್ರಭ, ಅಪ್ಪಂದಿರ ದಿನಾಚರಣೆ ಕುರಿತು ಹಲವಾರು ಜನ ತಮ್ಮ ತಂದೆಯ ಜೊತೆ ಫೋಟೋಗಳನ್ನು ಶೇರ್ ಮಾಡ್ತಾರೆ. ಜೊತೆಗೆ ಸ್ಟೇಟಸ್ ಹಾಕುತ್ತಾರೆ. ಇದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ನನ್ನ ತಂದೆ ನಿಧನರಾಗಿ ಇಲ್ಲಿಗೆ 12 ವರ್ಷ ಆಯ್ತು. ನಾವು ನಮ್ಮ ತಂದೆ ಜೊತೆ ಖುಷಿಯಾಗಿ ಕಾಲ ಕಳೆಯಬೇಕು ಅಂತಾ ಅನಿಸುತ್ತಿದೆ. ನಮ್ಮ ತಂದೆ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಹೀಗಾಗಿ ಯಾರು ತಮ್ಮ ತಂದೆ ತಾಯಿಯರನ್ನು ಕಳೆದುಕೊಳ್ಳಬೇಡಿ. ಅಪ್ಪ ನಿನ್ನ ನೆನಪು ನಾನೂ ಇರೋ ತನಕ ಕಾಡ್ತಾನೇ ಇರುತ್ತೆ. ನನ್ನ ಮುಂದಿನ ಜನ್ಮ ಅಂತಾ ಇದ್ದರೆ ನೀವೆ ನನ್ನ ತಂದೆಯಾಗಿ ಬರಬೇಕು ಎಂದು ಕೇಳಿ ಕೊಳ್ಳುತ್ತೇನೆ ಎಂದು ಭಾವುಕರಾಗಿ ಮಾತಾಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ