newsfirstkannada.com

×

ಕೊನೆಗೂ ಆಸ್ಪತ್ರೆಗೆ ಭೇಟಿ ಕೊಟ್ಟ ಚಂದ್ರಪ್ರಭಾ; ಗಿಚ್ಚಿ ಗಿಲಿಗಿಲಿ ಹಾಸ್ಯನಟ ಗುದ್ದೋಡಿದ ಮೇಲೆ ಅಸಲಿಗೆ ಆಗಿದ್ದೇನು?

Share :

Published September 8, 2023 at 8:44pm

    ಅಪಘಾತವಾದ ವೇಳೆ ನಟನಿಗೆ ಮಿಸ್‌ ಗೈಡ್ ಮಾಡಿದವರು ಯಾರು?

    ಚಿಕ್ಕಮಗಳೂರು ಪೊಲೀಸ್‌ ಠಾಣೆ ಮುಂದೆ ಚಂದ್ರಪ್ರಭಾ ಹೇಳಿದ್ದೇ ಬೇರೆ

    ಕನಿಷ್ಠ ಫೋನ್ ಮಾಡಿಯಾದ್ರೂ ಮಾತನಾಡಬೇಕಿತ್ತು ಎಂದ ಹಾಸ್ಯನಟ

ಗಿಚ್ಚಿ ಗಿಲಿಗಿಲಿ ಹಾಸ್ಯ ನಟ ಚಂದ್ರಪ್ರಭಾ ಈಗ ಅಕ್ಷರಶಃ ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ. ಏನೇನೋ ಕಥೆ ಕಟ್ಟಿ ಕ್ರೈಮ್ ಸೀನ್‌ನಿಂದ ಬಚಾವ್ ಆಗಲು ಯತ್ನಿಸಿದ್ದು ಈಗ ಬಟಾಬಯಾಲಾಗಿದೆ. ಸ್ವತಃ ಅವ್ರೇ ಇಂದು ಉಲ್ಟಾ ಹೊಡೆದಿದ್ದಾರೆ. ಇಷ್ಟೆಲ್ಲದರ ನಡುವೆ ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಚಂದ್ರಪ್ರಭಾ ಉಲ್ಟಾ ಹೊಡೆದಿದ್ದು ಏಕೆ? ಅಂದು ಅವರನ್ನ ಮಿಸ್‌ ಗೈಡ್ ಮಾಡಿದವರು ಯಾರು?

ಗಿಚ್ಚಿಗಿಲಿಗಿಲಿ ನಟ ಚಂದ್ರಪ್ರಭಾ ಘಟನೆಯಾದ ನಂತರ ಹೇಳಿದ್ದು ಒಂದಾದ್ರೆ, ನಂತರ ಚಿಕ್ಕಮಗಳೂರು ಪೊಲೀಸ್‌ ಠಾಣೆಯ ಮುಂದೆ ಹೇಳಿದ್ದು ಇನ್ನೊಂದು ಆಗಿದೆ. ಸೋಮವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಅಪಘಾತವಾದ ನಂತರ ಚಂದ್ರಪ್ರಭಾ ಇಡೀ ಘಟನೆಯ ಬಗ್ಗೆ ಮಂಗಳವಾರ, ಅದು ಸಂಜೆ ಏನಾಯ್ತು ಅಂತಾ ಮಾಧ್ಯಮಗಳಿಗೆ ಅವ್ರ ವಿಡಿಯೋ ಕಳುಹಿಸಿದ್ದರು. ಅಪಘಾತದ ಸಂದರ್ಭದಲ್ಲಿ ಏನೇನಾಯ್ತು ಅಂತಾ ಹೇಳಿಕೆ ನೀಡಿದ್ದಾರೆ.

ನಟ ಚಂದ್ರಪ್ರಭಾ

ಇದು ಘಟನೆಯ ಬಗ್ಗೆ ಚಂದ್ರಪ್ರಭಾ ಹೀಗೆ ಹೇಳಿದ್ದರು. ಆದ್ರೆ, ಗಾಯಾಳು ಮಾಲ್ತೇಶ್‌ರ ಕುಟುಂಬ ಸದಸ್ಯರು ಹೇಳಿದ್ದೇ ಬೇರೇಯಾಗಿತ್ತು. ಕಾರಿನಲ್ಲಿ ಗುದ್ದಿದ ನಂತರ ಚಂದ್ರಪ್ರಭಾ ಆಸ್ಪತ್ರೆಗೆ ದಾಖಲಿಸುವ ಮಾನವೀಯತೆಯನ್ನು ತೋರಿಸಲಿಲ್ಲ. ಡಿಕ್ಕಿ ಹೊಡೆದು ಹಾಗೇ ಹೋಗಿದ್ದರು. ನಾವು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಬಂದಿದ್ದೇವೆ. ಮಾಲ್ತೇಶ್‌ ಪರಿಸ್ಥಿತಿ ಗಂಭೀರವಾಗಿದೆ ಅಂತಾ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಹೇಳಿದ್ದಾರೆ.

ಗಾಯಾಳು ಕುಟುಂಬಕ್ಕೆ ನೆರವಾಗುತ್ತೇನೆ 

ಚಂದ್ರಪ್ರಭಾಗೆ ಯಾರು ಮಿಸ್ ಗೈಡ್ ಮಾಡಿದರೋ ಏನೋ ಗೊತ್ತಿಲ್ಲ. ಕೊನೆಗೆ ತಾನು ಮಾಡಿದ ತಪ್ಪಿನ ಅರಿವಾಗಿ, ಇಂದು ಚಿಕ್ಕಮಗಳೂರು ಪೊಲೀಸ್‌ ಠಾಣೆಗೆ ಆಗಮಿಸಿದರು. ಪೊಲೀಸರ ಜೊತೆ ಮಾತುಕತೆ ನಡೆಸಿ, ಗಾಯಾಳು ಕುಟುಂಬಕ್ಕೆ ನೆರವಾಗೋದಾಗಿ ಹೇಳಿದರು. ಅಷ್ಟೇ ಅಲ್ಲ, ತಾನು ಈ ಹಿಂದೆ ಹೇಳಿದ್ದ ಸುಳ್ಳಗಳನ್ನ ಪರೋಕ್ಷವಾಗಿ ಒಪ್ಪಿಕೊಂಡು, ಕ್ಷಮಾಪಣೆ ಕೇಳಿದರು.

ನ್ಯೂಸ್‌ಫಸ್ಟ್‌ಗೆ ಬೈಟ್ ಕೊಡುವಾಗಲೇ, ಜಾಗದಲ್ಲಿಯೇ ಇದ್ದ ಹಲವರು ಚಂದ್ರಪ್ರಭಾಗೆ ಪ್ರಶ್ನೆ ಕೇಳಿದರು. ಇಲ್ಲಿಯವರೆಗೂ ಆಗಿರುವ ಖರ್ಚು ಯಾರು ಕೊಡೋದು? ಯಾರು ಅಂತಾ ಪ್ರಶ್ನಿಸಿದರು. ಇದಾದ ಬಳಿಕ ನಾನು ಆಸ್ಪತ್ರೆಗೆ ಹೋಗಿ ಗಾಯಾಳು ಕುಟುಂಬದ ಜೊತೆ ಮಾತನಾಡುತ್ತೇನೆ ಅಂತಾ ಚಂದ್ರಪ್ರಭಾ ಹೇಳಿದರು.

12 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಇಂತಹ ಘಟನೆ ನಡೆದು ಹೋಗಿದೆ.!

ಕಾರು ಅನ್ನು ನಾನೇ ಓಡಿಸುತ್ತಿದ್ದೆ. ಮೂಡಿಗೆರೆ ಅಕ್ಕಪಕ್ಕದಲ್ಲಿ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೆ. 12 ಗಂಟೆ ಸುಮಾರಿಗೆ ಇಂತಹದೊಂದು ಘಟನೆ ನಡೆದು ಹೋಗಿದೆ. ಕಾರು ಅಪಘಾತವಾಗಿದ್ದ ಹಿನ್ನೆಲೆ ಗಾಯಾಳುವನ್ನು ಪೊಲೀಸ್ ಸಿಬ್ಬಂದಿಯೊಬ್ಬರು, ಗಿಚ್ಚಿ ಗಿಲಿಗಿಲಿ ಕಲಾವಿದರೊಬ್ಬರು ಹಾಗೂ ನಾನು ಸೇರಿ ಆಸ್ಪತ್ರೆಗೆ ಬಿಟ್ಟು ಹೋಗಿದ್ದೇವೆ.

ಅಪಘಾತವಾದ ಸಮಯದಲ್ಲಿ ಗಾಯಾಳು ಮದ್ಯಪಾನ ಮಾಡಿರಲಿಲ್ಲ. ನಾನೇ ಹೇಳಿರುವುದು ತಪ್ಪಾಗಿದೆ. ದಯವಿಟ್ಟು ಕ್ಷಮೆ ಇರಲಿ. ಆಸ್ಪತ್ರೆಯಲ್ಲಿರುವಾಗ ಅವರ ಹತ್ತಿರ ಹೋಗಿ ಮಾನವೀಯತೆ ದೃಷ್ಟಿಯಿಂದ ಮಾತನಾಡಬೇಕಿತ್ತು. ಪೋನ್​ನಲ್ಲೂ ಕೂಡ ಮಾತನಾಡಿಸಬೇಕಿತ್ತು. ಆದ್ರೆ ಅದನ್ನು ಮಾಡಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಸದ್ಯ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ್ದೇವೆ. ಕಾನೂನು ಪ್ರಕಾರ ಏನಿದೆ ಎಂಬುದಕ್ಕೆ ನಾನು ಬದ್ಧನಾಗಿದ್ದೇನೆ.

ಚಂದ್ರಪ್ರಭಾ, ಹಾಸ್ಯನಟ

ಹಾಸ್ಯನಟ ಚಂದ್ರಪ್ರಭಾ

ಮಾಧ್ಯಮದವರ ಜೊತೆ ಮಾತನಾಡುತ್ತಾ ಚಂದ್ರಪ್ರಭಾ ಕ್ಷಮೆ ಕೇಳಿ, ಕಣ್ಣೀರಿಟ್ಟರು. ಅಂದ್ಹಾಗೇ, ಈ ಅಪಘಾತ ನಡೆದದ್ದು ಸೋಮವಾರ ರಾತ್ರಿ. ಚಿಕ್ಕಮಗಳೂರು ನಗರ ಸರ್ಕಾರಿ ಬಸ್ ನಿಲ್ದಾಣದ ಬಳಿ ಚಂದ್ರಪ್ರಭಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ನಂತರ ಗಾಯಾಳು ಮಾಲ್ತೇಶ್‌ ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ, ಯಾವಾಗ ಗಾಯಾಳು ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಅಂತಾ ಗೊತ್ತಾಯ್ತೋ, ಆ ನಂತರ ಗಾಯಾಳುವನ್ನು ಹಾಸನದ ಸ್ಪರ್ಶ್‌ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.

ಸದ್ಯ ಘಟನೆಯ ಬಗ್ಗೆ ನಟ ಚಂದ್ರಪ್ರಭಾ ಕ್ಷಮೆ ಕೇಳಿದ್ದಾರೆ. ಹಾಸನ ನಗರದ ಸ್ಪರ್ಶ್ ಆಸ್ಪತ್ರೆಗೆ ಭೇಟಿ ನೀಡಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಾಲ್ತೇಶ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಲ್ತೇಶ್ ಕುಟುಂಬಸ್ಥರಿಗೆ ಧೈರ್ಯಯನ್ನು ಹೇಳಿದ್ದಾರೆ. ಗಾಯಾಳುಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಚಂದ್ರಪ್ರಭಾ ಕೂಡ ಮಾಡೋದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಆಸ್ಪತ್ರೆಗೆ ಭೇಟಿ ಕೊಟ್ಟ ಚಂದ್ರಪ್ರಭಾ; ಗಿಚ್ಚಿ ಗಿಲಿಗಿಲಿ ಹಾಸ್ಯನಟ ಗುದ್ದೋಡಿದ ಮೇಲೆ ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/09/Chandraprabha-1.jpg

Load More