newsfirstkannada.com

×

ತಂದೆಯ ಕಷ್ಟಗಳನ್ನು ನೆನೆದು ಚಿಲ್ಲರ್ ಮಂಜು ಭಾವುಕ; ಎಲ್ಲರಲ್ಲೂ ಕಣ್ಣೀರು ತರಿಸಿದ ಮನಮಿಡಿಯೋ ಕ್ಷಣ

Share :

Published September 14, 2024 at 9:33am

    ವೀಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುವ ಕಲಾವಿದ

    ಒಂದು ಹೊತ್ತು ಊಟಕ್ಕೂ ನಾವೆಲ್ಲಾ ಕಷ್ಟ ಪಟ್ಟಿದ್ದೀವಿ ಸರ್​

    ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಚಿಲ್ಲರ್ ಮಂಜು

ಒಬ್ಬೊಬ್ಬ ಕಲಾವಿದನ ಹಿಂದೆ ಒಂದೊಂದು ಹೇಳಿಕೊಳ್ಳಲಾಗದಂತ ನೋವು ಇದ್ದೇ ಇರುತ್ತೆ. ದೊಡ್ಡ ಮಟ್ಟಕ್ಕೆ, ಉನ್ನತ ಸ್ಥಾನಕ್ಕೆ ಬೆಳೀಬೇಕು ಅಂದ್ರೆ ಅದರ ಹಿಂದೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅದರಲ್ಲೂ ಈಗಿನ ಕಾಲದ ಜನರಿಗೆ ನಗಿಸಬೇಕು ಅಂದ್ರೆ ಹರಸಾಹಸವೇ ಪಡಬೇಕು.

ಇದನ್ನೂ ಓದಿ: ನಾನಿನ್ನೂ ಆರೋಪಿ ಅಪರಾಧಿ ಅಲ್ಲ.. ಬಳ್ಳಾರಿ ಜೈಲಲ್ಲಿ ದರ್ಶನ್ ಮತ್ತೊಂದು ಕಿರಿಕ್‌; ಏನಂದ್ರು?

ತಮ್ಮ ಕಾಮಿಡಿ ಅಲ್ಲದೇ ಸಖತ್ ಪಂಚ್ ಮೂಲಕ ವೀಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುವ ಕಲಾವಿದರು ತೆರೆ ಹಿಂದೆ ಎಷ್ಟಲ್ಲಾ ಕಷ್ಟ ನೋವುಗಳನ್ನು ಅನುಭವಿಸುತ್ತಾರೆ ಅಂತ ಅವರಿಗೆ ಮಾತ್ರ ಗೊತ್ತಿರುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಲ್ಲರ್ ಮಂಜು ಅವರ ಮನಮಿಡಿಯೋ ಕಥೆಯಾಗಿದೆ. ಮಜಾಭಾರತ, ಗಿಚ್ಚಿ-ಗಿಲಿಗಿಲಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಜೊತೆಗೆ ತಮ್ಮ ಅದ್ಭುತ ಹಾಸ್ಯದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಚಿಲ್ಲರ್ ಮಂಜು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ವೇದಿಕೆ ಮೇಲೆ ನಿಂತುಕೊಂಡು ತಮ್ಮ ಅನುಭವದ ಬಗ್ಗೆ ಚಿಲ್ಲರ್ ಮಂಜು ಹಂಚಿಕೊಳ್ಳುತ್ತಿದ್ದರು. ಇದೇ ವೇಳೆ ವೇದಿಕೆ ಮೇಲೆ ಚಿಲ್ಲರ್ ಮಂಜು ಕುಟುಂಬಸ್ಥರು ಬಂದಿದ್ದಾರೆ. ಅದರಲ್ಲೂ ಚಿಲ್ಲರ್ ಮಂಜು ತಮ್ಮ ಪೋಷಕರನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಮಾತನಾಡಲು ಶುರು ಮಾಡಿದ ಚಿಲ್ಲರ್ ಮಂಜು, ಮೊದಲ ಬಾರಿಗೆ ನಮ್ಮ ಫ್ಯಾಮಿಲಿ ವೇದಿಕೆ ಮೇಲೆ ಬಂದಿದ್ದು. ನಮ್ಮ ಅಪ್ಪ ಇಷ್ಟ ಆಗಿರೋ ತರ ಯಾರು ನನಗೆ ಇಷ್ಟ ಆಗಿಲ್ಲ. ನಮ್ಮ ಅಪ್ಪ ಅಂದ್ರೆ ಸಿಕ್ಕಾಪಟ್ಟೆ ಪ್ರಾಣ.

ಒಂದು ಹೊತ್ತು ಊಟಕ್ಕೂ ನಾವೆಲ್ಲಾ ಕಷ್ಟ ಪಟ್ಟಿದ್ದೀವಿ. ಈಗ ಚೆನ್ನಾಗಿ ಊಟ ಮಾಡುವ ಹೊತ್ತಲ್ಲಿ ಯಾಕೆ ಈಯಪ್ಪ ಹೀಗೆ ಮಾಡ್ತಾನೆ. ನೆಮ್ಮದಿಯಾಗಿ ಒಂದು ಹೊತ್ತು ಊಟ ಮಾಡೋದಿಲ್ವಲ್ಲಾ ಅಂತ ಕಣ್ಣೀರು ಬರುತ್ತೆ ಎಂದಿದ್ದಾರೆ. ಆಗ ವೇದಿಕೆ ಅಕ್ಕ ಪಕ್ಕ ಕುಳಿತ ಸಹ ಕಲಾವಿದರು, ಜಡ್ಜಸ್​ಗಳು ಕೂಡ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ನೋಡಿದ ವೀಕ್ಷಕರು ಭಾವುಕರಾಗಿ ಕಾಮೆಂಟ್ಸ್ ಹಾಕಿದ್ದಾರೆ. ಚಿಲ್ಲರ್ ಮಾತು ಚಿಲ್ಲರ ಬದುಕು ಎಲ್ಲಾ ಒಂದೆ ಆಗಿದೆ, ಚಿಲ್ಲರ್ ಇಸ್​ ದ ಬ್ರ್ಯಾಂಡ್​ ಌಂಡ್​ ಚಿಲ್ಲರ್  ಇಸ್ ದ ಬೆಸ್ಟ್ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆಯ ಕಷ್ಟಗಳನ್ನು ನೆನೆದು ಚಿಲ್ಲರ್ ಮಂಜು ಭಾವುಕ; ಎಲ್ಲರಲ್ಲೂ ಕಣ್ಣೀರು ತರಿಸಿದ ಮನಮಿಡಿಯೋ ಕ್ಷಣ

https://newsfirstlive.com/wp-content/uploads/2024/09/manju.jpg

Load More