/newsfirstlive-kannada/media/post_attachments/wp-content/uploads/2023/11/Gill.jpg)
ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​​ ಲೀಗ್​​ ಹಂತದ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್​​ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುತ್ತಿರೋ ಟೀಂ ಇಂಡಿಯಾದ ಪರ ಓಪನರ್​ ಆಗಿ ಬಂದ ಶುಭ್ಮನ್​ ಗಿಲ್​​ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಗಿಲ್​ ನೆದರ್ಲ್ಯಾಂಡ್ ತಂಡದ ಬೌಲರ್​​ಗಳ ಬೆವರು ಇಳಿಸಿದರು.
ಇನ್ನಿಂಗ್ಸ್​ ಉದ್ಧಕ್ಕೂ ಬರೋಬ್ಬರಿ 160ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ ಗಿಲ್​​, ಕೇವಲ 30 ಬಾಲ್​​ನಲ್ಲಿ 51 ರನ್​ ಚಚ್ಚಿದ್ರು. ಬರೋಬ್ಬರಿ 4 ಸಿಕ್ಸರ್​​, ಬ್ಯಾಕ್​ ಟು ಬ್ಯಾಕ್​ 3 ಫೋರ್​​ ಸಿಡಿಸಿದ್ರು. ಗಿಲ್​ ಈ ಮೂಲಕ ವಿಶ್ವಕಪ್​ನಲ್ಲಿ ಮತ್ತೊಂದು ದಾಖಲೆ ಬರೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us