newsfirstkannada.com

ಇಟಲಿ ಪ್ರಧಾನಿ ಮೆಲೋನಿ ಅನ್ನೇ ಬದಲಾಯಿಸಿದ ಮೋದಿ; ವಿಡಿಯೋ ವೈರಲ್‌!

Share :

Published June 14, 2024 at 10:01pm

Update June 14, 2024 at 11:19pm

    ಪ್ರಧಾನಿ ಮೋದಿಗೆ ಕೇವಲ ನಮಸ್ಕಾರ ಮಾಡಿದ ಇಟಲಿ PM

    3ನೇ ಬಾರಿಗೆ PM ಆದ ಬಳಿಕ ಇದೇ ಮೊದಲ ವಿದೇಶಿ ಪ್ರವಾಸ

    ರಿಷಿ ಸುನಕ್​​ರಂತೆ ಮೆಲೋನಿ, ಮೋದಿಯವರನ್ನ ಸ್ವಾಗತಿಸಲಿಲ್ಲ!

ನವದೆಹಲಿ: ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಇಟಲಿಯಲ್ಲಿ ನಡೆಯುತ್ತಿರುವ 50ನೇ G7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿಯವರು ಕಿಸ್, ಹಗ್ ಮಾಡದೇ ಕೇವಲ ನಮಸ್ಕಾರ ಎಂದು ಕೈ ಮುಗಿದಿದ್ದಾರೆ. ಸದ್ಯ ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಶಿಕ್ಷೆ ಹೇಗಿರಬೇಕಂತ ಮಾಜಿ ಸಚಿವ ಹೇಳಿದ್ರು?

G7 ಶೃಂಗಸಭೆಗೆ ಆಗಮಿಸಿದ ಇಂಗ್ಲೆಂಡ್​ನ ಪ್ರಧಾನಿ ರಿಷಿ ಸುನಕ್ ಅವರನ್ನು ಇಟಲಿಯ ಪ್ರಧಾನಿ ಮೆಲೋನಿಯವರು ಕಿಸ್ ಮಾಡಿ, ಹಗ್ ಮಾಡಿ ಹೃದಯ ತುಂಬಿ ಸ್ವಾಗತ ಕೋರಿದರು. ಅದರಂತೆ G7 ಶೃಂಗಸಭೆಯಲ್ಲಿ ಭಾರತದ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದರು. ಈ ವೇಳೆ ಮೋದಿಯವರನ್ನು ಸ್ವಾಗತ ಮಾಡಿದ ಇಟಲಿ ಪ್ರಧಾನಿ ಮೆಲೋನಿಯವರು ಕಿಸ್, ಹಗ್ ಯಾವುದನ್ನು ಮಾಡದೇ ಕೇವಲ ನಮಸ್ಕಾರ ಮಾಡಿ ಬರಮಾಡಿಕೊಂಡರು. ಬಳಿಕ ಫೋಟೋಗೆ ಪೋಸ್ ನೀಡಿ ತಮ್ಮ ಆಸನಗಳಲ್ಲಿ ಕುಳಿತರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್​ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಬಳಿಕ ಚರ್ಚೆ ನಡೆಸಿದರು. ಪ್ರಧಾನಿ ಮೋದಿಯವರು ಇಟಲಿಯ ಭೇಟಿಯ ಭಾಗವಾಗಿ ಜಿ7 ಔಟ್ರೀಚ್ ಸೆಷನ್​ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎನರ್ಜಿ, ಆಫ್ರಿಕಾ-ಮೆಡಿಟರೇನಿಯನ್​ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಧಾನಿ ಮೆಲೋನಿ ಆಯೋಜಿಸಲಿದ್ದಾರೆ. ಇದರಲ್ಲಿ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಸೇರಿ ಇತರ ಗಣ್ಯ ನಾಯಕರು ಭಾಗವಹಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಟಲಿ ಪ್ರಧಾನಿ ಮೆಲೋನಿ ಅನ್ನೇ ಬದಲಾಯಿಸಿದ ಮೋದಿ; ವಿಡಿಯೋ ವೈರಲ್‌!

https://newsfirstlive.com/wp-content/uploads/2024/06/PM_MODI-1.jpg

Load More