newsfirstkannada.com

ಯುವತಿ ಕಟ್ಟಡ ಮೇಲಿಂದ ಹಾರಿ ಸಾವು​.. ಪ್ರಕರಣಕ್ಕೆ ಪೊಲೀಸರಿಂದ ಬಿಗ್ ಟ್ವಿಸ್ಟ್

Share :

Published June 25, 2024 at 12:54pm

    ಯುವತಿ ಕಟ್ಟಡ ಮೇಲಿನಿಂದ ಬೀಳುವ ವಿಡಿಯೋ ವೈರಲ್ ಆಗಿತ್ತು

    ಯುವತಿ ಬಳಿಗೆ ಹೋಗಿ ನಿನ್ನನ್ನ ಮದುವೆ ಆಗಲ್ಲ ಎಂದಿದ್ದ ಆರೋಪಿ

    ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿ ಸಿಕ್ನಾ?

ರಾಯಚೂರು: ಪ್ರೇಮಿ ಕೈಕೊಟ್ಟ ಹಿನ್ನೆಲೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರದಿಂದ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

ಆರೋಪಿ ವಿನಯ್ ರೆಡ್ಡಿಯನ್ನು ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮನ ಜೊತೆ ಮನೆ ಬಿಟ್ಟು ಯುವತಿ ಅನುರಾಧ ಓಡಿ ಹೋಗಿದ್ದಳು. ಬಳಿಕ ಪೊಲೀಸ್ ಠಾಣೆಯಲ್ಲಿ ಪೋಷಕರ ಜೊತೆ ಹೋಗಲು ಯುವತಿ ನಿರಾಕರಣೆ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಮಹಿಳಾ ಸಾಂತ್ವನ ಕೆಂದ್ರದಲ್ಲಿ ಪೊಲೀಸರು ಇರಿಸಿದ್ದರು. ಈ ಮಧ್ಯೆ ಸಾಂತ್ವನ ಕೇಂದ್ರಕ್ಕೆ ತೆರಳಿದ್ದ ಪ್ರಿಯಕರ, ಯುವತಿಯನ್ನು ಮದುವೆ ಆಗಲು ನಿರಾಕರಣೆ ಮಾಡಿದ್ದ. ಇದರಿಂದ ತೀವ್ರವಾಗಿ ಮನನೊಂದಿದ್ದ ಅನುರಾಧ ಜೂನ್​ 21 ರಂದು ಸಾಂತ್ವನ ಕೇಂದ್ರದ ಕಟ್ಟಡ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದನ್ನೂ ಓದಿ: ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

ಯುವತಿ ಆತ್ಮಹತ್ಯೆ ಮಾಡಿಕೊಳ್ತಿದ್ದಂತೆಯೇ ಕಿಲಾಡಿ ವಿನಯ್ ತಲೆ ಮರೆಸಿಕೊಂಡಿದ್ದ. ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಕೈಗೆ ಸಿಕ್ಕಿರಲಿಲ್ಲ.  ಈ ಸಂಬಂಧ ಹುಡುಕಾಟ ಮುಂದುವರೆಸಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ರಾಯಚೂರು ತಾಲೂಕಿನ ಯರಗೇರಾ ಬಳಿ ಅರೆಸ್ಟ್ ಮಾಡಿದ್ದಾರೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವತಿ ಕಟ್ಟಡ ಮೇಲಿಂದ ಹಾರಿ ಸಾವು​.. ಪ್ರಕರಣಕ್ಕೆ ಪೊಲೀಸರಿಂದ ಬಿಗ್ ಟ್ವಿಸ್ಟ್

https://newsfirstlive.com/wp-content/uploads/2024/06/RCR_GIRL_DIE.jpg

Load More