newsfirstkannada.com

ಆಸ್ಪತ್ರೆಗೆ ದಾಖಲಿಸಿದ್ದ ಬಾಲಕಿ ಸಾವು.. ವೈದ್ಯರ ವಿರುದ್ಧ ಗಂಭೀರ ಆರೋಪ

Share :

Published July 2, 2024 at 9:07am

    ಬೆಳಗ್ಗೆ ಲವಲವಿಕೆಯಿಂದ ಇದ್ದ ಮಗು ಆಸ್ಪತ್ರೆಯಲ್ಲಿ ಸಾವು

    ನೈಟ್​ಶಿಫ್ಟ್​ನಲ್ಲಿದ್ದ ವೈದ್ಯರು ಬಾಲಕಿಗೆ ಚಿಕಿತ್ಸೆ ನೀಡಿದ್ದರು

    ಬಾಲಕಿಗೆ ವಾಂತಿ ಕಾಣಿಸಿಕೊಂಡಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿದ್ರು

ಮೈಸೂರು: ವಾಂತಿ ಮಾಡಿಕೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ವೇಳೆ ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯದಿಂದಲೇ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಹೆಚ್.ಡಿ ಕೋಟೆಯ ಸೇಂಟ್ ಮೆರಿಸ್ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

ಜಿಲ್ಲೆಯ ಬೆಳಗನಹಳ್ಳಿ ಗ್ರಾಮದ ಶಿವರಾಜ್ ದಂಪತಿಯ ಪುತ್ರಿ ತನುಷ್ಕಾ (7) ಮೃತ ಬಾಲಕಿ. ಮಗಳು ವಾಂತಿ ಮಾಡಿಕೊಳ್ಳುತ್ತಿದ್ದಾಳೆ ಎಂದು ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ನೈಟ್​​ಶಿಫ್ಟ್​ನಲ್ಲಿದ್ದ ಡಾಕ್ಟರ್ಸ್​​ ಬಾಲಕಿಗೆ ಚಿಕಿತ್ಸೆ ನೀಡಿದ್ದರು. ವಾಂತಿಯಾದರು ಲವಲವಿಕೆಯಿಂದ ಇದ್ದ ಮಗು ದಿಢೀರ್​ ಎಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?

ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಹೆಚ್​.ಓ ರವಿಕುಮಾರ್​ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಗೆ ದಾಖಲಿಸಿದ್ದ ಬಾಲಕಿ ಸಾವು.. ವೈದ್ಯರ ವಿರುದ್ಧ ಗಂಭೀರ ಆರೋಪ

https://newsfirstlive.com/wp-content/uploads/2024/07/MYS_BABY.jpg

Load More