ಕತ್ತು ಹಿಸುಕಿ, ತಾಯಿಯ ಪ್ರಾಣ ಕಿತ್ತುಕೊಂಡಳು ಪಾಪಿ ಪುತ್ರಿ ಮತ್ತವನ ಪ್ರಿಯಕರ
ಮಗಳು ಬಾಯ್ಫ್ರೆಂಡ್ ಜೊತೆ ಸರಸದಲ್ಲಿದ್ದಾಗಲೇ ರೆಡ್ಹ್ಯಾಂಡ್ ಆಗಿ ಸಿಕ್ಕಿದ್ದಳು
ಪತಿಯಿದ್ದರೂ ಕೂಡ ಪರಪುರುಷನ ತೆಕ್ಕೆಗೆ ಬಿದ್ದ ಪವಿತ್ರಾ ಮಾಡಿದ್ದೇನು ಗೊತ್ತಾ?
ಬೆಂಗಳೂರು: ಈ ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಹೋಗಿ ನೋಡಿದ್ರು ನಮಗೆ ಸಿಗುವುದು ವಾತ್ಸಲ್ಯಮಯಿ ತಾಯಂದಿರೇ. ಕೆಟ್ಟ ಮಕ್ಕಳು ಹುಟ್ಟಬಹುದು ಆದ್ರೆ ಕೆಟ್ಟ ತಾಯಿ ಹುಟ್ಟುವುದಿಲ್ಲ ಎಂದು ಸಂಸ್ಕೃತದಲ್ಲಿಯೇ ಹೇಳಲಾಗಿದೆ. ಹೆತ್ತ ತಾಯಿ ತನ್ನ ಮಕ್ಕಳ ಲಾಲನೆ ಪಾಲನೆಗೆ. ಅವರ ಸುಖಕ್ಕಾಗಿ ಮಾಡದ ತ್ಯಾಗಗಳಿರುವುದಿಲ್ಲ. ಅದಕ್ಕಾಗಿಯೇ ತಾಯಿಯನ್ನು ನಮ್ಮ ನೆಲದಲ್ಲಿ ದೇವರಿಗೆ ಹೋಲಿಸಲಾಗುತ್ತದೆ. ಆದ್ರೆ ಅಂತಹ ಮಮತಾಮಯಿ ತಾಯಿಯನ್ನೇ ಕತ್ತು ಹಿಸುಕಿ ಅವಳ ಕಥೆ ಮುಗಿಸುವ ಮಟ್ಟಕ್ಕೆ ಹೋಗುವ ಮಕ್ಕಳು ಇದ್ದಾರೆ ಅಂದ್ರೆ ಆಶ್ಚರ್ಯದ ಜೊತೆಗೆ ಒಂದು ಕ್ಷಣ ಗಾಬರಿಯೂ ಕೂಡ ಆಗುತ್ತೆ.
ಕ್ಷಣಿಕ ಸುಖಕ್ಕೆ ಸೋಲದೇ ಇದ್ದರೆ ಮೋಹಕೂ ಅಪಮಾನ ಅಂತ ಹಂಸಲೇಖ ಅವರ ಒಂದು ಗೀತೆಯ ಸಾಲು ಇದೆ. ಆ ಕ್ಷಣಿಕ ಸುಖಕ್ಕಾಗಿ, ಒಂದು ಮುಗಿಯದ ಮೋಹಕ್ಕಾಗಿ ಹೆತ್ತ ತಾಯಿಯ ಕಥೆಯನ್ನೇ ಮುಗಿಸಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿ ಪವಿತ್ರಾ ಎಂಬ ಪಾಪಿ ಮಗಳು.
ಮೇಲೆ ಫೋಟೋದಲ್ಲಿ ಇರುವವರ ಹೆಸರು ಮುನಿರಾಜು. ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಈ ಮುನಿರಾಜುಗೆ ದೊಡ್ಡ ಶಾಕ್ ಕಾದಿತ್ತು. ಮನೆಯಲ್ಲಿದ್ದ ಮುನಿರಾಜು ಪತ್ನಿ ಜಯಲಕ್ಷ್ಮಿ ಸಾವನ್ನಪ್ಪಿದ್ದರು. ಮಗಳನ್ನು ಯಾಕಮ್ಮ ಏನಾಯ್ತು ನಿಮ್ಮ ಅಮ್ಮನಿಗೆ ಎಂದು ಕೇಳಿದಾಗ, ಅಯ್ಯೋ.. ಅಮ್ಮಾ ಕಾಲುಜಾರಿ ಬಾತ್ರೂಮ್ನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಿದ್ದಾಳೆ. ಹೆತ್ತ ಮಗಳೇ
ಹೆತ್ತ ಮಗಳೇ ಹೇಳುವಾಗ ಅಪ್ಪ ನಂಬದೇ ಇರೋದಕ್ಕೆ ಆಗುತ್ತಾ? ಮಗಳು ಹೇಳಿದ್ದೇ ಸತ್ಯ ಅಂತ ನಂಬಿ ಮುನಿರಾಜು ಹೆಂಡತಿ ಅಂತ್ಯ ಸಂಸ್ಕಾರ ಮಾಡಿ ಕಾರ್ಯ ಎಲ್ಲ ಮಾಡಿ ಮುಗಿಸಿದ್ರು. ಆದ್ರೆ ಅದ್ಯವಾಗ ಜಯಲಕ್ಷ್ಮಿಯ ಪೋಸ್ಟಮಾರ್ಟಂ ವರದಿ ಬಂತು ನೋಡಿ ಆಗ ಮುನಿರಾಜು ಜಂಘಾಬಲವೇ ಉಡುಗಿ ಹೋಗಿತ್ತು.
ಜಯಲಕ್ಷ್ಮೀ ಕುತ್ತಿಗೆಯಲ್ಲಿತ್ತು ಮಾರ್ಕ್? ಕೊಲೆ ಮಾಡಿದ್ಯಾರು?
ಪಾಪಿ ಪುತ್ರಿ ಪವಿತ್ರಾ ತನ್ನ ತಾಯಿಯ ಅಂತ್ಯವನ್ನು ಆಕಸ್ಮಿಕ ಎಂದು ಸಾಬೀತುಪಡಿಸಲು ನೂರೆಂಟು ಬಲೆ ಹೆಣೆದುಕೊಂಡು ಕುಳಿತಿದ್ದಳು. ಯಾವಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ನೋಡಿದರೋ ಕೂಡಲೇ ಅವರ ಅನುಭವದ ಕಣ್ಣಂಚಲ್ಲಿಯೇ ಇದು ಬಿದ್ದು ಮೃತಪಟ್ಟ ಪ್ರಕರಣವಲ್ಲ ಎಂದು ಅಳೆದು ಬಿಟ್ಟರು. ಪೊಸ್ಟ್ ಮಾರ್ಟಮ್ ವರದಿ ಕೂಡ ಪೊಲೀಸರ ಅನುಮಾನವನ್ನು ನಿಜ ಮಾಡಿತ್ತು. ಜಯಲಕ್ಷ್ಮೀ ಕುತ್ತಿಗೆಯಲ್ಲಿ ಹಲವು ಮಾರ್ಕ್ಗಳು ಕಂಡು ಬಂದಿದ್ದವು. ಕೂಡಲೇ ವಿಚಾರಣೆ ಶುರು ಮಾಡಿದ್ದ ಪೊಲೀಸರು, ಘಟನೆ ನಡೆದ ದಿನ ಮನೆಯಲ್ಲಿ ಯಾರೆಲ್ಲ ಇದ್ರು ಅಂತ ಕೇಳ್ದಾಗ, ಜಯಲಕ್ಷ್ಮಿ ಜೊತೆ ಮಗಳು ಪವಿತ್ರಾ ಇದ್ಳು ಅನ್ನೋ ಮಾಹಿತಿ ಸಿಕ್ಕಿದೆ. ಆಗ್ಲೇ ನೋಡಿ ಈ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು.
ಇದನ್ನೂ ಓದಿ: BREAKING: ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?
ಜಯಲಕ್ಷ್ಮಿ ಮಗಳು ಪವಿತ್ರಾ, ಅಮ್ಮ ಬಾತ್ರೂಮ್ನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಳು ಎಂದೆಲ್ಲಾ ಕಥೆ ಹೆಣೆದಿದ್ದಳು. ಪೊಲೀಸರು ಕೇಳಿದಾಗಲೂ ಇದೇ ಕತೆಯನ್ನ ಒಪ್ಪಿಸಿದ್ದಳು. ಆದ್ರೆ ಪೋಸ್ಟ್ಮಾರ್ಟ್ಂ ವರದಿಯಲ್ಲಿ ಜಯಲಕ್ಷ್ಮಿಯ ಕುತ್ತಿಗೆ ಮೇಲೆ ಕೆಲ ಮಾರ್ಕ್ ಇರೋದು ಗೊತ್ತಾಗಿತ್ತು. ಇನ್ನೊಂದೆಡೆ ಘಟನೆ ನಡೆದ ದಿನ ಜಯಲಕ್ಷ್ಮಿ ಜೊತೆ ಮಗಳು ಪವಿತ್ರಾ ಮಾತ್ರ ಇದ್ದಳು. ಈ ಎಲ್ಲ ಡೌಟ್ಸ್ಗಳನ್ನೆ ಆಧಾರವಾಗಿಟ್ಟುಕೊಂಡು ಪೊಲೀಸರು ಜಯಲಕ್ಷ್ಮಿ ಮಗಳು ಪವಿತ್ರಾಳನ್ನ ಕರ್ಕೊಂಡು ಬಂದು ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೇನು ಗೊತ್ತಿಲ್ಲ ಅಂತಲೇ ಈ ಪವಿತ್ರಾ ಡ್ರಾಮಾ ಮಾಡಿದ್ದಳು. ಆದ್ರೆ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ಬಾಯಿ ಬಿಡಿಸಿದಾಗ ಈ ಪವಿತ್ರಾ ಜಯಲಕ್ಷ್ಮಿ ಕೊಲೆಯ ಅಸಲಿ ಸತ್ಯವನ್ನ ಕಕ್ಕಿದ್ದಾಳೆ.
ತುತ್ತು ಕೊಟ್ಟವಳ ಕತ್ತು ಹಿಸುಕಿದ್ದೇಕೆ ಪರಮಪಾಪಿ ಪುತ್ರಿ?
ಈ ಪವಿತ್ರಾ ಕುಟುಂಬ ಮೂಲತಃ ತಮಿಳುನಾಡಿನದು. ಆದ್ರೆ ತುಂಬಾ ವರ್ಷಗಳಿಂದ ಬಂದು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. 12 ವರ್ಷದ ಹಿಂದೆ ಪವಿತ್ರಾಳನ್ನ ಬೆಂಗಳೂರಿನ ಸುರೇಶ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಈ ಸುರೇಶ್ ದಿನಸಿ ಅಂಗಡಿ ಒಂದನ್ನ ನಡೆಸ್ತಾ ಇದ್ದ. ದಿನಸಿ ಅಂಗಡಿ ಇದ್ದ ಬಿಲ್ಡಿಂಗ್ನಲ್ಲೇ ಪವಿತ್ರಾ ತಾಯಿ ಜಯಲಕ್ಷ್ಮಿ ವಾಸವಿದ್ರು. ಈ ಅಂಗಡಿಯನ್ನ ನೋಡಿಕೊಳ್ಳೋದಕ್ಕೆ ಅಂತ ಬರ್ತಿದ್ದ ಪವಿತ್ರಾಗೆ ಇದೇ ಮನೆಯಲ್ಲಿ ಬಾಡಿಗೆ ಇದ್ದ ಲವನೀಶ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರಣಯದ ಹಾದಿ ಹಿಡಿಯೋದಕ್ಕೆ ಹೆಚ್ಚ ಸಮಯ ಬೇಕಾಗಿರಲಿಲ್ಲ. 29 ರ ಪವಿತ್ರಾ 20 ರ ಹರೆಯದ ಲವನೀಶ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಅಲ್ಲಿಂದ ಪವಿತ್ರಾಳ ಪರಸಂಗದಾಟ ಶುರುವಾಗಿತ್ತು.
ಇದನ್ನೂ ಓದಿ:ಟಚ್ಚಿಂಗ್, ಟಚ್ಚಿಂಗ್.. ಪಕ್ಕದಲ್ಲಿ ಕುಳಿತ BMTC ಕಂಡಕ್ಟರ್‌ನಿಂದ ಹುಡುಗಿಗೆ ಮುಜುಗರ; ವಿಡಿಯೋ ವೈರಲ್!
ಗಂಡ ಇದ್ರೂ ಪವಿತ್ರ ಲವನೀಶ್ ಜೊತೆ ಸರಸ ಸಲ್ಲಾಪ ಶುರು ಮಾಡಿದ್ಳು. ಗಂಡ ಅಂಗಡಿಗೆ ಹೋದಾಗೆಲ್ಲ ಈ ಲವನೀಶ್ನನ್ನ ಮನೆಗೆ ಕರೆಸಿಕೊಳ್ತಿದ್ದಳು. ಇತ್ತಿಚೆಗೆ ತಾಯಿ ಜಯಲಕ್ಷ್ಮಿಗೆ ಅನಾರೋಗ್ಯ ಅಂತ ಪವಿತ್ರಾ ತಾಯಿ ಮನೆಗೆ ಬಂದಿದ್ಳು. ಇವಳೆಂತಾ ಐನಾತಿ ಅಂದ್ರೆ ತಾಯಿ ಇಲ್ಲದ ಸಮಯ ನೋಡಿ ಪ್ರಿಯಕರ ಲವನೀಶ್ನನ್ನ ತಾಯಿ ಮನೆಗೂ ಕರೆಸಿಕೊಂಡಿದ್ದಳು. ಈ ವಿಚಾರ ಜಯಲಕ್ಷ್ಮಿಗೆ ಮುಂಚೆ ಗೊತ್ತಿತ್ತು. ಹೀಗಾಗಿ ಮಗಳಿಗೆ ಬುದ್ಧಿ ಹೇಳಿದ್ದಳು. ಆದ್ರೆ ಪವಿತ್ರಾ ಚಾಳಿ ಬಿಡದೇ ತಾಯಿ ಮನೆಯಲ್ಲೇ ಕಳೆದ ಬುಧವಾರ ಲವನೀಶ್ ಜೊತೆ ಪ್ರಣಯದಾಟದಲ್ಲಿ ತೊಡಗಿದ್ದಳು. ದುರಂತ ಏನಂದ್ರೆ ಪವಿತ್ರಾ ಮತ್ತು ಲವನೀಶ್ ಏಕಾಂತದಲ್ಲಿರುವ ಹೊತ್ತಲ್ಲೇ ತಾಯಿ ಜಯಲಕ್ಷ್ಮಿ ಎಂಟ್ರಿ ಕೊಟ್ಟಿದ್ರು. ಮಗಳ ಈ ಪ್ರಣಯದ ದೃಶ್ಯಗಳನ್ನು ಕಂಡು ಜಯಲಕ್ಷ್ಮಿ ಅಕ್ಷರಶಃ ಶಾಕ್ ಆಗಿದ್ರು.
ಇದನ್ನೂ ಓದಿ:ಬಸ್-ಟ್ರಕ್ ನಡುವೆ ಭೀಕರ ಅಪಘಾತ.. ಬೆಂಗಳೂರು ಮೂಲದ 8 ಮಂದಿ ಸಾವು, 30 ಜನರಿಗೆ ಗಾಯ
ಮನೆಗೆ ಬಂದ ಜಯಲಕ್ಷ್ಮಿ ಕಣ್ಣಿಗೆ ಪವಿತ್ರಾಳ ಸರಸ ಸಲ್ಲಾಪ ಕಂಡಿತ್ತು. ಬುದ್ಧಿ ಹೇಳಿದ್ರೂ ಮಗಳು ಸರಿಯಾಗಲಿಲ್ಲ ಅಂತ ಪವಿತ್ರಾ ಜೊತೆ ಜಗಳ ಶುರು ಮಾಡಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಈ ಪವಿತ್ರಾ ಮಾಡಬಾರದ ಕೃತ್ಯಕ್ಕೆ ಕೈ ಹಾಕಿದ್ದಾಳೆ. ಪ್ರಿಯಕರನ ಜೊತೆ ಸೇರಿ ಜಯಲಕ್ಷ್ಮಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಜೀವ ತೆಗೆದೇ ಬಿಟ್ಟಿದ್ದಾಳೆ. ಕೊನೆಗೆ ಸತ್ಯ ಗೊತ್ತಾದ್ರೆ ಕಂಟಕ ಅಂತ ಬಾತ್ರೂಮ್ನಲ್ಲಿ ಬಿದ್ದು ಅಮ್ಮ ಮೃತಪಟ್ಟಿದ್ದಾಳೆ ಅಂತ ಕಲರ್ ಕಲರ್ ಕತೆ ಕಟ್ಟಿದ್ದಳು.
ಇದನ್ನೂ ಓದಿ: New Airport: ನೆಲಮಂಗಲಕ್ಕೆ ಅದೃಷ್ಟದ ಬಾಗಿಲು.. ಹೊಸ ವಿಮಾನ ನಿಲ್ದಾಣಕ್ಕೆ ಜಾಗ ಅಂತಿಮ; 10 ಲಾಭಗಳು ಇಲ್ಲಿವೆ!
ಕೊ*ಲೆ ಮಾಡಿದ ಬಳಿಕ ಮನೆಯಿಂದ ಆಚೆ ಓಡೋಡಿ ಬಂದಿದ್ದ ಪವಿತ್ರಾ ಅಯ್ಯೋ ನಮ್ಮಮ್ಮ ಬಾತ್ ರೂಂ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂತಾ ಹಸಿ ಹಸಿ ಸುಳ್ಳಿನ ಕಥೆ ಕಟ್ಟಿದ್ದಳು. ಆದ್ರೆ, ಡೆಡ್ ಬಾಡಿ ನೋಡಿದ ಪೊಲೀಸರಿಗೆ ಅದ್ಯಾಕೋ ಅನುಮಾನ. ಅತ್ತ, ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಕೊಲೆಯ ಗುಮಾನಿ ಮೂಡಿಸಿತ್ತು. ಹೀಗಾಗಿ ಅನುಮಾನದಿಂದಲೇ ಪವಿತ್ರಾಳನ್ನ ವಿಚಾರಣೆ ನಡೆಸಿದಾಗ ಪಾಪ ಕೃತ್ಯ ಎಸಗಿರೋದನ್ನ ಈ ಪಾಪಿ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಪವಿತ್ರಾ ಮತ್ತು ಆಕೆ ಪ್ರಿಯಕರ ಲವನೀಶ್ ಇಬ್ಬರನ್ನ ಅರೆಸ್ಟ್ ಮಾಡಿ ಅಂದರ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ