ಕೇರಳ ಮೂಲದ ಸ್ನೇಹಿತನನ್ನು ಕೈಯಾರೆ ಕೊಂದ ಗೆಳತಿ
ಒಂದೇ ಏರಿಯಾದಲ್ಲಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು
ಕೊಲೆಯ ಮೂರು ದಿನದ ಹಿಂದೆ ಇಬ್ಬರು ಭೇಟಿ ಮಾಡಿದ್ದರು
ಗೆಳತಿಯೇ ತನ್ನ ಗೆಳೆಯನನ್ನ ಹತ್ಯೆ ಮಾಡಿದ ಘಟನೆ ಹುಳಿಮಾವುನಗರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಜಾವೀದ್ ಕೊಲೆಯಾದ ಯುವಕ.
ಜಾವೀದ್ ಮೊಬೈಲ್ ಸರ್ವಿಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ರೇಣುಕಾ ಎಂಬಾಕೆಯ ಪರಿಚಯವಾಗಿತ್ತು. ಮೂರು ವರ್ಷದಿಂದ ಇಬ್ಬರ ನಡುವೆ ಪರಿಚಯವಾಗಿ ಸಲುಗೆ ಬೆಳೆದಿತ್ತು. ಹೀಗಾಗಿ ಇಬ್ಬರು ಆಗಾಗ ಭೇಟಿ ಮಾಡುತ್ತಿದ್ದರು.
ಹಣಕಾಸಿನ ವ್ಯವಹಾರ
ರೇಣುಕಾ ಮತ್ತು ಜಾವೀದ್ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಳ್ಳುತಿದ್ದರು. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ನಡೆದಿತ್ತು ಎನ್ನಲಾಗಿದೆ.
ಎದೆಗೆ ಚುಚ್ಚಿಬಿಟ್ಟಲು
ಕೊಲೆಯ ಮೂರು ದಿನದ ಹಿಂದೆ ಕೂಡ ಇಬ್ಬರು ಭೇಟಿಯಾಗಿದ್ದು, ಹುಳಿಮಾವಿನ ಅಕ್ಷಯಾನಗರದ ಅಪಾರ್ಟ್ಮೆಂಟ್ಗೆ ಬಂದಿದ್ದರು. ಕಳೆದ ಮಂಗಳವಾರ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಜಗಳದ ನಡುವೆ ರೇಣುಕಾ ಯುವಕನಿಗೆ ಚಾಕುನಿಂದ ಎದೆಗೆ ಇರಿದಿದ್ದಾಳೆ.
ಸದ್ಯ ಆರೋಪಿ ರೇಣುಕಾಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಕೇಸ್ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ