ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ..
‘ಹುಡುಗಿಯರಷ್ಟೇ ಅಲ್ಲ ಅಪ್ಪ, ಅಮ್ಮನೂ ಬಾಡಿಗೆಗೆ ಸಿಕ್ತಾರೆ’
ಬಾಡಿಗೆ ಪ್ರೀತಿ ಪಡೆಯಲು ಗಂಟೆಗೆ ಎಷ್ಟು ರೂಪಾಯಿ ಗೊತ್ತಾ?
ದುಡ್ಡು ಕೊಟ್ಟರೆ ಏನ್ ಬೇಕಾದ್ರೂ ಸಿಗುತ್ತೆ. ಆದ್ರೆ, ಪ್ರೀತಿ, ಪ್ರೇಮವನ್ನ ಮಾತ್ರ ಕೊಂಡುಕೊಳ್ಳಲು ಆಗಲ್ಲ ಅನ್ನೋ ಮಾತಿದೆ. ಆದ್ರೆ, ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ ಅನ್ನೋದು ಇಲ್ಲಿ ಅಕ್ಷರಶಃ ನಿಜವಾಗಿದೆ. ಒಂಟಿಯಾಗಿರೋರು ಜಂಟಿಯಾಗಲು ಈ ದೇಶದಲ್ಲಿ ಭರ್ಜರಿ ಅವಕಾಶ ಸಿಕ್ಕಿದೆ. ಅಷ್ಟೇ ಅಲ್ಲ ಬಾಡಿಗೆ ಗರ್ಲ್ ಫ್ರೆಂಡ್‌ಗಳನ್ನ ಆಯ್ಕೆ ಮಾಡಲು ಸರ್ಕಾರವೇ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಬಾಡಿಗೆ ಪ್ರೀತಿಯ ಅವಕಾಶ ಸಿಕ್ಕಿರೋದು ಬೇರೆ ಎಲ್ಲೂ ಅಲ್ಲ ಜಪಾನ್ ದೇಶದಲ್ಲಿ. ಯಾರಾದ್ರೂ ತಾನು ಏಕಾಂಗಿ ಅನ್ನೋ ಒಂಟಿತನ ಕಾಡುತ್ತಿದ್ದರೆ ಇಲ್ಲಿ ಬಾಡಿಗೆ ಗರ್ಲ್ ಫ್ರೆಂಡ್‌ಗಳನ್ನ ಪಡೆಯಬಹುದು. ಗರ್ಲ್ ಫ್ರೆಂಡ್‌ಗಳು ಗಂಟೆಗಳ ಅವಧಿಯಲ್ಲಿ ಇಲ್ಲಿ ಬಾಡಿಗೆ ಸಿಗುತ್ತಾರೆ. ಒಂಟಿಯಾಗಿ ಜಪಾನ್ ದೇಶಕ್ಕೆ ಹೋಗುವವರು ಜಂಟಿಯಾಗಿ ಸುತ್ತಾಡಿಕೊಂಡು ಬರಬಹುದು.
ಜಪಾನ್ ದೇಶದಲ್ಲಿ ರೆಂಟ್ ಅಲ್ಲಿ ಗರ್ಲ್ ಫ್ರೆಂಡ್‌ಗಳನ್ನ ಪಡೆಯಲು ಸಾಕಷ್ಟು ಅವಕಾಶಗಳಿವೆ. ಇದಕ್ಕಾಗಿಯೇ ಹಲವಾರು ವೆಬ್‌ಸೈಟ್‌ಗಳು ಕೆಲಸ ಮಾಡುತ್ತಿವೆ. ಇವ್ಯಾವು ಅನಧಿಕೃತ ವೆಬ್‌ಸೈಟ್‌ಗಳಲ್ಲ. ಜಪಾನ್ ಸರ್ಕಾರವೇ ಈ ವೆಬ್‌ಸೈಟ್‌ಗಳಿಗೆ ಅನುಮತಿಯನ್ನು ನೀಡಿವೆ. ಈ ವೆಬ್‌ಸೈಟ್‌ಗಳು ಗಂಟೆಗಳ ಅವಧಿಗೆ ನಿಗಧಿತ ದರದಲ್ಲಿ ಬಾಡಿಗೆಗೆ ಗರ್ಲ್‌ಫ್ರೆಂಡ್‌ಗಳ ವ್ಯವಸ್ಥೆ ಮಾಡುತ್ತವೆ. ಈಗಾಗಲೇ ಬಹಳಷ್ಟು ಅವಿವಾಹಿತ ಪುರುಷರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.
‘ಹುಡುಗಿಯರಷ್ಟೇ ಅಲ್ಲ ಅಪ್ಪ, ಅಮ್ಮನೂ ಸಿಕ್ತಾರೆ’
ಬರೀ ಹುಡುಗಿಯರು ಅಷ್ಟೇ ಅಲ್ಲ ಗಂಟೆಗಳ ಲೆಕ್ಕದಲ್ಲಿ ಕುಟುಂಬ ಸದಸ್ಯರನ್ನು ಇಲ್ಲಿ ಬಾಡಿಗೆಗೆ ಪಡೆಯಲು ಅವಕಾಶಗಳಿವೆ. ಅಂದ್ರೆ ಅಪ್ಪ, ಅಮ್ಮ, ಅಕ್ಕ, ತಂಗಿ, ತಾತ, ಅಜ್ಜಿಯರ ಪ್ರೀತಿಯನ್ನು ಯಾರು ಬೇಕಾದ್ರೂ ಬಾಡಿಗೆ ಕೊಟ್ಟು ಪಡೆಯಬಹುದಾಗಿದೆ. ಆದ್ರೆ, ಗಂಟೆಗೆ ಇಂತಿಷ್ಟು ದುಡ್ಡನ್ನು ಮಾತ್ರ ಕಟ್ಟಲೇಬೇಕು.
ಯಾಕೀ ಬಾಡಿಗೆ ಪ್ರೀತಿಯ ಯೋಜನೆ ಜಾರಿ?
ಅಷ್ಟಕ್ಕೂ ಜಪಾನ್‌ನಲ್ಲಿ ಈ ಬಾಡಿಗೆ ಪ್ರೀತಿಯ ಯೋಜನೆ ಜಾರಿ ಆಯ್ತು ಅನ್ನೋದಕ್ಕೆ ಉತ್ತರನೂ ಅಷ್ಟೇ ಸಿಂಪಲ್ ಆಗಿದೆ. ಜಪಾನ್‌ನಲ್ಲಿ ಅವಿವಾಹಿತರು ಒಂಟಿಯಾಗಿ ಇದ್ದು ಇದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇವರಿಗೆ ಉಲ್ಲಾಸ, ಜೀವನೋತ್ಸಾಹ ತುಂಬುವ ಉದ್ದೇಶದಿಂದ ಈ ಬಾಡಿಗೆ ಪ್ರೀತಿಗೆ ಸರ್ಕಾರ ಅವಕಾಶ ನೀಡಿದೆ. ನೀವು ಯಾರಾದ್ರೂ ಇನ್ಮುಂದೆ ಜಪಾನ್‌ಗೆ ಒಬ್ಬರೇ ಹೋದ್ರೆ ಈ ಬಾಡಿಗೆ ಪ್ರೀತಿಯನ್ನ ಪಡೆಯಬಹುದು.
ಬಾಡಿಗೆ ಪ್ರೀತಿಯ ರೇಟ್ ಎಷ್ಟು?
ಅಂದ ಹಾಗೆ ಜಪಾನ್‌ನಲ್ಲಿ ಈ ಬಾಡಿಗೆ ಪ್ರೀತಿಯನ್ನು ಅನುಭವಿಸೋದು ಕೊಂಚ ದುಬಾರಿಯಾಗಿದೆ. ಅಂದ್ರೆ ಗಂಟೆಗೆ 6000 ಯೆನ್ ಕೊಡಬೇಕು. 6000 ಯೆನ್ ಅಂದ್ರೆ ಭಾರತದ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 3000 ರೂಪಾಯಿ. ಕನಿಷ್ಟ 2 ಗಂಟೆಗಳ ಕಾಲ ಬಾಡಿಗೆ ಪಡೆಯೋದು ಕಡ್ಡಾಯ. ಅಂದ್ರೆ ಯಾರಿಗಾದ್ರೂ ಬಾಡಿಗೆ ಗರ್ಲ್ ಫ್ರೆಂಡ್ ಸಿಗಬೇಕಾದ್ರು ಅವರು 6000 ರೂಪಾಯಿ ಖರ್ಚು ಮಾಡಲೇಬೇಕು.
ಬಾಡಿಗೆ ದುಡ್ಡು ಕಟ್ಟುವುದರ ಜೊತೆ ಪ್ರವಾಸಿಗರು ಅವರು ಹಾಕುವ ರೂಲ್ಸ್‌ಗಳನ್ನು ಪಾಲಿಸಲೇಬೇಕು. ಗರ್ಲ್ ಫ್ರೆಂಡ್‌ಗಳನ್ನು ನೇರವಾಗಿ ಭೇಟಿ ಮಾಡುವಂತಿಲ್ಲ. ವೆಬ್‌ಸೈಟ್‌ಗಳ ಮುಖಾಂತರವೇ ಸಂಪರ್ಕ ಮಾಡಬೇಕು. ಬಾಡಿಗೆ ಗೆಳತಿಯರಿಗೆ ಯಾವುದೇ ವಿಧದ ಗಿಫ್ಟ್‌ಗಳನ್ನು ಕೊಡುವಂತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ