newsfirstkannada.com

ಮಿಲ್ಕಿ ಬ್ಯೂಟಿ ತಮನ್ನಾಗೆ ಸೆಡ್ಡು ಹೊಡೆದ ರೀಲ್ಸ್ ಕ್ವೀನ್​​; ಕಾವಾಲಯ್ಯ ಹಾಡಿಗೆ ಭರ್ಜರಿ ಸ್ಟೆಪ್​​​

Share :

10-08-2023

    ಮಿಲ್ಕಿ ಬ್ಯೂಟಿ ತಮನ್ನಾನ ಹಾಗೇ ರೀಲ್ಸ್​ ಮಾಡಿ ನೆಟ್ಟಿಗರ ಗಮನ ಸೆಳೆದ ಯುವತಿ

    ಯೂಟ್ಯೂಬ್​​ನಲ್ಲಿ 112 ಮಿಲಿಯನ್​​ ವೀವ್ಸ್​​​ ಪಡೆದುಕೊಂಡ ಕಾವಾಲಯ್ಯ ಹಾಡು

    ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್ ಮಾಡಿದ ಜೈಲರ್​ ಹಾಡು

ಸೂಪರ್​ ಸ್ಟಾರ್​ ರಜಿನಿಕಾಂತ್ ನಟನೆಯ ಜೈಲರ್‌ ಸಿನಿಮಾದ ಇಂದು ರಿಲೀಸ್​​ ಆಗಿದೆ. ಎಲ್ಲೆಡೆ ಜೈಲರ್‌ ಚಿತ್ರದ ಸೌಂಡ್ ಗದ್ದಲ. ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದ ಕಾವಾಲಯ್ಯ ಹಾಡು ಯೂಟ್ಯೂಬ್​​ನಲ್ಲಿ 112 ಮಿಲಿಯನ್​​ ವಿವ್ಸ್​​ ಪಡೆದುಕೊಂಡಿದೆ. ಕಾವಾಲಯ್ಯ ಹಾಡು​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿ ಕಮಾಲ್​ ಮಾಡಿತ್ತು ಈ ಸಾಂಗ್. ರಿಲೀಸ್​ ಆದ ಕೆಲ ಗಂಟೆಗಳಲ್ಲಿ ಅದೆಷ್ಟೋ ಜನರಲ್ಲಿ ಹೊಸ ಕ್ರೇಜ್‌ ಹುಟ್ಟು ಹಾಕುವಂತೆ ಮಾಡಿತ್ತು.

ಇನ್ನು, ಮಿಲ್ಕಿ ಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ ಹಾಗೇ ಸಾಕಷ್ಟು ಜನರು ಅದೇ ರೀತಿಯ ಸ್ಟೆಲ್‌ ಅನ್ನು ಕಾಪಿ ಮಾಡಿ ಡ್ಯಾನ್ಸ್​​ ಮಾಡಿದ್ದಾರೆ. ಆದರೆ ಪ್ರಿಯಾಂಕಾ ಶೆಣೈ ಮೆನನ್ ಎಂಬುವವರು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಸೇಮ್​ ಟು ಸೇಮ್​​ ತಮನ್ನಾ ಭಾಟಿಯ ತರಹ ಬಟ್ಟೆಯನ್ನು ತೊಟ್ಟುಕೊಂಡು ಕಾವಾಲಯ್ಯ ಹಾಡಿಗೆ ಸಖತ್‌ ಡ್ಯಾನ್ಸ್​​ ಮಾಡಿದ್ದಾಳೆ. ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ಈ ಹಾಡಿಗೆ ಪ್ರಿಯಾಂಕಾ ಶೆಣೈ ಅವರು ಸಖತ್​ ಸ್ಟೆಪ್‌ ಹಾಕಿದ್ದು ನೆಟ್ಟಿಗರ ಗಮನ ಸೆಳೆದಿದೆ. ಯುವತಿಯ ಉಡುಗೆ ತೊಡುಗೆ, ಹಾವಾಭಾವ ಎಲ್ಲವೂ ಥೇಟ್‌ ತಮನ್ನಾ ಭಾಟಿಯರಂತೆಯೇ ಇದೆ. ಈ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್​​ ವೈರಲ್‌ ಆಗಿದೆ. ಈ ಯುವತಿ ಮಾಡಿರೋ ರೀಲ್ಸ್​​ ಇದೀಗ 68.4 ಮಿಲಿಯನ್​​ ವೀವ್ಸ್​ ಪಡೆದುಕೊಂಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಈ ಡ್ಯಾನ್ಸ್​ ಅನ್ನು ಹಾಡಿ ಹೊಗಳಿದ್ದಾರೆ. ವಾಹ್‌ ಎಷ್ಟು ಅದ್ಭುತವಾಗಿದೆ. ನೀವು ಸಖತ್​​ ಡ್ಯಾನ್ಸರ್​, ತಮನ್ನಾ ನೃತ್ಯಕ್ಕೆ ಸರಿಸಮಾನದ ಡ್ಯಾನ್ಸ್‌ ಮಾಡಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷ ಎಂದರೆ ನಟಿ ತಮನ್ನಾ ಭಾಟಿಯ ಅವರು ಕೂಡ ಕಾವಾಲಯ್ಯ ಸಾಂಗ್​ಗೆ ರೀಲ್ಸ್​​ ಮಾಡಿದ್ದಾರೆ. ಆದರೆ ತಮನ್ನಾ ಭಾಟಿಯ ಮಾಡಿರೋ ರೀಲ್ಸ್​ಗೆ 67.9 ಮಿಲಿಯನ್​ ವೀವ್ಸ್​​ ಬಂದರೆ, ಪ್ರಿಯಾಂಕಾ ಶೆಣೈ ಮೆನನ್ ಮಾಡಿರೋ ರೀಲ್ಸ್​ಗೆ 68.4 ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದ್ದಾರೆ. ಹೀಗಾಗಿ ಈಗ ತಮನ್ನಾ ಭಾಟಿಯನ್ನೇ ಯುವತಿ ಹಿಂದಿಕ್ಕಿ ಮುಂದೆ ಸಾಗಿದ್ದಾರೆ.

View this post on Instagram

A post shared by Tamannaah Bhatia (@tamannaahspeaks)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಲ್ಕಿ ಬ್ಯೂಟಿ ತಮನ್ನಾಗೆ ಸೆಡ್ಡು ಹೊಡೆದ ರೀಲ್ಸ್ ಕ್ವೀನ್​​; ಕಾವಾಲಯ್ಯ ಹಾಡಿಗೆ ಭರ್ಜರಿ ಸ್ಟೆಪ್​​​

https://newsfirstlive.com/wp-content/uploads/2023/08/jailar-5.jpg

Load More