newsfirstkannada.com

ಮಾರಕ ಡೆಂಘೀ ಜ್ವರಕ್ಕೆ ಬಾಲಕಿ ದಾರುಣ ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Share :

Published July 1, 2024 at 9:56pm

Update July 1, 2024 at 9:58pm

  ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ದಾಖಲಿಸಿದ ಪೋಷಕರು

  ಹಾಸನದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಮೃತ ಅಕ್ಷತಾ

  ಕೂಲಿ ಕೆಲಸ ಮಾಡುವ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮ ದಂಪತಿ ಪುತ್ರಿ ಅಕ್ಷತಾ

ಹಾಸನ: ಮಾರಕ ಡೆಂಘೀ ಜ್ವರಕ್ಕೆ ಬಾಲಕಿ ಬಲಿಯಾಗಿರೋ ಘಟನೆ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಷತಾ (13) ಮೃತಪಟ್ಟ ಬಾಲಕಿ. ಮೃತ ಬಾಲಕಿ ಹಾಸನದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಳು. ಮೃತ ಅಕ್ಷತಾ ಕೂಲಿ ಕೆಲಸ ಮಾಡುವ ಅಪ್ಪಣ್ಣಶೆಟ್ಟಿ ಪದ್ಮ ದಂಪತಿ ಪುತ್ರಿಯಾಗಿದ್ದಳು. ಕಳೆದ ಬುಧವಾರ ಬಾಲಕಿ ಜ್ವರದಿಂದ ಬಳಲುತ್ತಿದ್ದಳು.

ಇದನ್ನೂ ಓದಿ: ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

ಹೀಗಾಗಿ ಆಕೆಯನ್ನು ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಎಷ್ಟೇ ಚಿಕಿತ್ಸೆ ನೀಡಿದರೂ, ಬಾಲಕಿ ಗುಣಮಖಳಾಗಿರಲಿಲ್ಲ. ಹೀಗಾಗಿ ಪೋಷಕರು ಆಕೆಯನ್ನು ಹೆಚ್ಚಿನ ಚಿಕಿತ್ಸೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲೂ ಚೇತರಿಸಿಕೊಳ್ಳದ ಅಕ್ಷತಾಳನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರಂತೆ. ಕೂಡಲೇ ಮಗಳನ್ನು ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರಕ ಡೆಂಘೀ ಜ್ವರಕ್ಕೆ ಬಾಲಕಿ ದಾರುಣ ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

https://newsfirstlive.com/wp-content/uploads/2024/07/HSN-DEATH.jpg

Load More