ಆಗಸ್ಟ್ 11 ರಂದು ಪ್ರಯಾಣಿಸುವಾಗ ದುರ್ಘಟನೆ
ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಬಾಲಕಿಗೆ ಗಾಯ
ಟ್ವಿಟರ್ನಲ್ಲಿ ಖಂಡನೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಸ್ತಾರ
ಚಲಿಸುತ್ತಿದ್ದ ವಿಮಾನದಲ್ಲಿ ಹಾಟ್ ಚಾಕೊಲೇಟ್ ಸರ್ವ್ ಮಾಡುವಾಗ 10 ವರ್ಷದ ಬಾಲಕಿ ಮೇಲೆ ಬಿದ್ದು, ಸುಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಗಸ್ಟ್ 11 ರಂದು ನಡೆದಿದೆ. ಇದೀಗ ವಿಮಾನ ಸಂಸ್ಥೆ ‘ವಿಸ್ತಾರ’ ಗಾಯಗೊಂಡಿರುವ ಬಾಲಕಿ ಚಿಕಿತ್ಸೆಗೆ ತಗುಲುವ ಎಲ್ಲಾ ಖರ್ಚುಗಳ ಜವಾಬ್ದಾರಿ ತನ್ನದು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.
ಕಳೆದ ಬುಧವಾರ ವಿಸ್ತಾರ ಸಂಸ್ಥೆಯ UK25 ವಿಮಾನವು ದೆಹಲಿಯಿಂದ ಜರ್ಮನಿಯ ಫ್ರಂಕ್ಫುರ್ಟ್ಗೆ ಹೊರಟಿತ್ತು. ಇದೇ ವಿಮಾನದಲ್ಲಿ 10 ಬಾಲಕಿ ತನ್ನ ಪೋಷಕರೊಂದಿಗೆ ಪ್ರಯಾಣ ಮಾಡುತ್ತಿದ್ದಳು. ವರದಿಗಳ ಪ್ರಕಾರ, ಬಾಲಕಿಯ ಪೋಷಕರು ಮಗಳಿಗೆ ಹಾಟ್ ಚಾಕೊಲೇಟ್ ನೀಡುವಂತೆ ವಿಮಾನದ ಸಿಬ್ಬಂದಿಗೆ ಹೇಳಿಕೊಂಡಿದ್ದಾರೆ. ಅಂತೆಯೇ ಚಾಕೊಲೇಟ್ ಸರ್ವ್ ಮಾಡಲು ವಿಮಾನದ ಸಿಬ್ಬಂದಿ ಅಲ್ಲಿಗೆ ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಹಾಟ್ ಚಾಕೊಲೇಟ್ನ ವಾಟರ್ ಆಕೆಯ ಮೇಲೆ ಬಿದ್ದಿದೆ.
ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಕರೆ ಮಾಡಲಾಗಿತ್ತು. ವಿಮಾನ ಫ್ರಂಕ್ಪುರ್ಟ್ನಲ್ಲಿ ಲ್ಯಾಂಡ್ ಆಗ್ತಿದ್ದಂತೆಯೇ, ಮೆಡಿಕಲ್ ಕೇರ್ ಟೀಂ ಅಲ್ಲಿಗೆ ಬಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಅಮ್ಮ ಕೂಡ ಆಸ್ಪತ್ರೆಗೆ ಬಂದಿದ್ದರು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.
ಘಟನೆ ನಡೆದು ಎರಡು ದಿನಗಳ ಬಳಿಕ ಟ್ವಿಟರ್ನಲ್ಲಿ ಈ ವಿಚಾರ ಸ್ಫೋಟಗೊಂಡಿತ್ತು. ರಚ್ನಾ ಗುಪ್ತಾ ಅನ್ನೋರು ಟ್ವೀಟ್ ಮಾಡಿ, ವಿಮಾನ ಸಂಸ್ಥೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಘಟನೆ ಬಗ್ಗೆ ವಿಮಾನ ಸಂಸ್ಥೆ ಕನಿಷ್ಠ ವಿಷಾದ ಕೂಡ ವ್ಯಕ್ತಪಡಿಸಿಲ್ಲ ಎಂದು ಕಿಡಿಕಾರಿದ್ದರು. ಇದೀಗ ಪ್ರತಿಕ್ರಿಯಿಸಿರುವ ವಿಮಾನ ಸಂಸ್ಥೆ ವಿಸ್ತಾರ್.. ಕೂಡಲೇ ನಮ್ಮ ಸಿಬ್ಬಂದಿ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಿವಿ. ಆಕೆಗೆ ವೈದ್ಯಕೀಯ ವೆಚ್ಚಕ್ಕೆ ತಗಲುವ ಎಲ್ಲಾ ಖರ್ಚನ್ನು ಸಂಸ್ಥೆಯೇ ಬರಿಸಲಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ