newsfirstkannada.com

WATCH: ಮಗಳಿಗೆ ಟೊಮಾಟೋದಲ್ಲಿ ತುಲಾಭಾರ ಮಾಡಿಸಿದ ದಂಪತಿ! ಏನ್​ ಗುರು ಇವ್ರು

Share :

19-07-2023

    ಟೊಮಾಟೋ ಬಳಸಿ ತುಲಾಭಾರ ಮಾಡಿಸಿಕೊಂಡ ಹುಡುಗಿ

    ಬರೋಬ್ಬರಿ 51 ಕೆ.ಜಿಗೂ ಅಧಿಕ ಟೊಮಾಟೋ ಅರ್ಪಣೆ

    ಮಗಳ ತೂಕಕ್ಕೆ ಸಮಾನಾಗಿ ತುಲಾಭಾರಕ್ಕೆ ಟೊಮಾಟೋ ಬಳಕೆ

ಟೊಮಾಟೋ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಟೊಮಾಟೋ ಬೇಡ ಬಟಾಟೆ ಸಾಕು ಎಂಬ ಮನಸ್ಥಿತಿಯಲ್ಲಿ ನಗರ ವಾಸಿಗಳಿದ್ದಾರೆ. ಅದರಲ್ಲೂ ದುಡಿದು ತಿನ್ನುವವರಂತೂ ಟೊಮಾಟೋ ಖರೀದಿಯತ್ತ ಮುಖ ಮಾಡದೆ ಸುಮ್ಮನಾಗಿದ್ದಾರೆ. ಇಂತಹ ಸಮಯದಲ್ಲಿ ಅಲ್ಲೊಂದು ದಂಪತಿ ತಮ್ಮ ಮಗಳನ್ನು ಟೊಮಾಟೊದಿಂದಲೇ ತುಲಾಭಾರ ಮಾಡಿಸಿದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ನೂಕಾಲಮ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದಂಪತಿಗಳು ತಮ್ಮ ಮಗಳನ್ನು ಟೊಮಾಟೋ ಮೂಲಕ ತುಲಾಭಾರ ಮಾಡಿಸಿದ್ದಾರೆ. ಕೆ.ಜಿಗೆ 150 ರೂಪಾಯಿಯ ಟೊಮಾಟೋದಿಂದ ತುಲಾಭಾರ ಮಾಡಿಸಿದ ದಂಪತಿಯನ್ನು ಕಂಡು ಅಲ್ಲಿದ್ದವರು ಅಚ್ಚರಿಗೊಂಡಿದ್ದಾರೆ.

ಅಂದಹಾಗೆಯೇ ಅನಕಾಪಲ್ಲಿಯ ಅಪ್ಪಾರವ್​ ಮತ್ತು ಮೋಹಿನಿ ದಂಪತಿ ತಮ್ಮ ಮಗಳು ಭವಿಷ್ಯಾಗೆ ಹರಕೆ ಹೊತ್ತುಕೊಂಡಿದ್ದು, ಅದರಂತೆಯೇ ಮಗಳ ತೂಕಕ್ಕೆ ಸಮಾನಾಗಿ ಟೊಮಾಟೋದ ಮೂಲಕ ತುಲಾಭಾರ ಮಾಡಿದ್ದಾರೆ. ನೂಕಾಲಮ್ಮ ದೇವಿದೆ 51 ಕೆ.ಜಿಗೂ ಅಧಿಕ ಟೊಮೊಟೋವನ್ನು ಅರ್ಪಿಸಿದ್ದಾರೆ. ಅರ್ಪಿಸಿದ ಟೊಮಾಟೋವನ್ನು ಅನ್ನದಾನಕ್ಕೆ ಬಳಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಮಗಳಿಗೆ ಟೊಮಾಟೋದಲ್ಲಿ ತುಲಾಭಾರ ಮಾಡಿಸಿದ ದಂಪತಿ! ಏನ್​ ಗುರು ಇವ್ರು

https://newsfirstlive.com/wp-content/uploads/2023/07/Tomato-5.jpg

Load More