newsfirstkannada.com

ಬಾಲಕಿ ಮೇಲೆ ದಾಳಿ ಮಾಡಿದ ಕೋತಿ: ಕಾಲಿಗೆ ಗಂಭೀರ ಗಾಯ

Share :

Published June 27, 2023 at 7:59pm

Update June 27, 2023 at 8:01pm

    ಇತ್ತೀಚೆಗೆ ರಾಜ್ಯದಲ್ಲಿ ಮಿತಿಮೀರಿದ ಮಂಗಗಳ ಹಾವಳಿ

    ಮೈದಾನದಲ್ಲಿ ಆಟ ಆಡುತ್ತಿದ್ದಾಗ ಬಾಲಕಿ ಮೇಲೆ ದಾಳಿ

    ಬಾಲಕಿ ಎಡಗಾಲಿಗೆ ಮನಬಂದಂತೆ ಕಚ್ಚಿ ಕೋತಿ ಎಸ್ಕೇಪ್​​​

ಧಾರವಾಡ: ಇತ್ತೀಚೆಗೆ ರಾಜ್ಯದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಚಿಕ್ಕಮಕ್ಕಳನ್ನು ಟಾರ್ಗೆಟ್​ ಮಾಡಿ ಕೋತಿಗಳು ಅಟ್ಯಾಕ್​​ ಮಾಡುವ ಪ್ರಕರಣಗಳೇ ಹೆಚ್ಚು. ಕೋತಿ ಹಾವಳಿ ತಡೆಗೆ ಸರ್ಕಾರ ಎಷ್ಟೇ ಕ್ರಮ ತೆಗೆದುಕೊಂಡರೂ ಪ್ರಯೋಜನ ಆಗಿಲ್ಲ. ಈಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಶಾಲಾ ಬಾಲಕಿ ಮೇಲೆ ಕೋತಿಯೊಂದು ಏಕಾಏಕಿ ದಾಳಿ ನಡೆಸಿರೋ ಘಟನೆ ಗರಗ ಗ್ರಾಮದಲ್ಲಿ ಸಂಭವಿಸಿದೆ. ಇಕರಾ ಗಡಕಾರಿ ಎಂಬ ಬಾಲಕಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಗರಗ ಗ್ರಾಮದ ಸರ್ಕಾರಿ ಉರ್ದು ಶಾಲೆ ಮೈದಾನದಲ್ಲಿ ಆಟವಾಡುತ್ತಿದ್ದಾಗ ಬಾಲಕಿಯನ್ನು ಕೋತಿ ಎಳೆದಾಡಿದೆ. ಬಾಲಕಿ ಜೋರಾಗಿ ಕಿರುಚಾಡಿದ್ರೂ ಬಿಡದೆ ಅಟ್ಯಾಕ್​​ ಮಾಡಿದೆ. ಸ್ಥಳೀಯರು ಬಂದ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದೆ. ಸದ್ಯ ಬಾಲಕಿ ಎಡಗಾಲಿಗೆ ಕೋತಿ ಕಚ್ಚಿರುವುದಾಗಿ ತಿಳಿದು ಬಂದಿದೆ.

ಇನ್ನು, ಇದರ ಪರಿಣಾಮ ಬಾಲಕಿ ಎಡಗಾಲು ಗಂಭೀರವಾಗಿ ಗಾಯಗೊಂಡಿದೆ. ಚಿಕಿತ್ಸೆಗಾಗಿ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಮೇಲೆ ಕೋತಿ ದಾಳಿ ಮಾಡಿದ ಕೃತ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿ ಮೇಲೆ ದಾಳಿ ಮಾಡಿದ ಕೋತಿ: ಕಾಲಿಗೆ ಗಂಭೀರ ಗಾಯ

https://newsfirstlive.com/wp-content/uploads/2023/06/monkey-3.jpg

Load More