newsfirstkannada.com

ಇನ್​ಸ್ಟಾದಲ್ಲಿ ಪರಿಚಯವಾದ ಪ್ರಿಯಕರನ ಭೇಟಿಗಾಗಿ ಪಾಕ್​​ಗೆ ಹೊರಟಿದ್ದ ಭಾರತದ ಬಾಲಕಿ; ಆಮೇಲೇನಾಯ್ತು?

Share :

29-07-2023

    ಪ್ರಿಯಕರನಿಗಾಗಿ ಪಾಕಿಸ್ತಾನಕ್ಕೆ ಹೊರಟಿದ್ದ ಅಪ್ರಾಪ್ತ ಬಾಲಕಿ

    ವಿಮಾನ ನಿಲ್ದಾಣಕ್ಕೆ ಹೋಗಿ ಫಜೀತಿಗೆ ಸಿಲುಕಿದ ಬಾಲಕಿ

    ಪಾಸ್‌ಪೋರ್ಟ್, ವೀಸಾ ಇಲ್ಲದೇ ಅಪ್ರಾಪ್ತ ಬಾಲಕಿ ಕಂಗಾಲು

ಜೈಪುರ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಕರೆಂಟ್​ ಪಾಸಾದಂತೆ ಯುವಕ, ಯುವತಿಯರು ಸ್ನೇಹಿತರು ಆಗುತ್ತಾರೆ. ಆ ಸ್ನೇಹವು ಪ್ರೀತಿಗೆ ತಿರುಗಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಬೇರೆ ಬೇರೆ ದೇಶಕ್ಕೆ ಪ್ರಯಾಣ ಬೆಳೆಸುವುದು ಸರ್ವೇಸಾಮಾನ್ಯ. ಕೆಲವು ದಿನಗಳ ಹಿಂದೆ ಪಬ್​ಜಿ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​​, ಪ್ರಿಯತಮನ ನೋಡಲು ಪಾಕಿಸ್ತಾನಕ್ಕೆ ಗುಟ್ಟಾಗಿ ಹೋದ ಭಾರತದ 2 ಮಕ್ಕಳ ತಾಯಿ ಭಾರೀ ಸುದ್ದಿಯಾಗಿದ್ದರು. ಈಗ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಅಪ್ರಾಪ್ತ ಬಾಲಕಿ ಇನ್​ಸ್ಟಾದಲ್ಲಿ ಪರಿಚಯವಾದ ಹುಡುಗನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಲು ಪ್ಲಾನ್​​ ಮಾಡಿ ಜೈಪುರ ವಿಮಾನ ನಿಲ್ದಾಣಕ್ಕೆ ಬಂದು ಫಜೀತಿಗೆ ಸಿಲುಕಿದ್ದಾಳೆ. ಅಪ್ರಾಪ್ತ ಬಾಲಕಿ ಜೈಪುರ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ಗೆ ಹೋಗಿ ನನಗೆ ಪಾಕಿಸ್ತಾನಕ್ಕೆ ಟಿಕೆಟ್ ಕೊಡಿ ಎಂದು ಕೇಳಿದ್ದಾಳೆ. ಆಗ ಅಲ್ಲಿ ನೆರೆದಿದ್ದ ಜನ ಬಾಲಕಿ ಮಾತನ್ನು ಕೇಳಿ ಅಚ್ಚರಿಗೊಂಡಿದ್ದಾರೆ. ಅನುಮಾನಗೊಂಡ ಅಲ್ಲಿನ ಸಿಬ್ಬಂದಿ ಆಕೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಇನ್ನು, ಅಪ್ರಾಪ್ತೆ ಕೂರಿಸಿ ವಿಚಾರಣೆ ನಡೆಸಿದಾಗ ಅಧಿಕಾರಿಗಳಿಗೆ ಶಾಕಿಂಗ್ ವಿಚಾರ ಗೊತ್ತಾಗಿದೆ. ಬಾಲಕಿ ಬಳಿ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಯಾವುದೇ ದಾಖಲೆಗಳು ಇರಲಿಲ್ಲ. ಬಳಿಕ ಅಚ್ಚರಿಗೊಂಡ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದರು. ಆಗ ಬಾಲಕಿಯು ನಾನು ಇಸ್ಲಾಮಾಬಾದ್‌ನಿಂದ ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದೇನೆ ಮತ್ತು ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದೇನೆ. ಅವರ ಜೊತೆ ಇರಲು ನನಗೆ ಕಷ್ಟವಾಗುತ್ತಿದೆ ಎಂದು ಸುಳ್ಳು ಕಥೆಯನ್ನು ಕಟ್ಟಿದ್ದಾಳೆ. ಬಳಿಕ ಪಾಕಿಸ್ತಾನಕ್ಕೆ ತೆರಳಲು ಬಯಸುತ್ತಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಬಾಲಕಿಯ ಮಾತಿನಲ್ಲಿ ಸತ್ಯಾಂಶ ಇಲ್ಲ ಎಂದು ಮತ್ತೆ ಅಧಿಕಾರಿಗಳು ಕೇಳಿದ್ದಾರೆ. ಆಗ ಬಾಲಕಿ ಸತ್ಯವನ್ನು ಬಾಯ್ದಿಟ್ಟಿದ್ದಾಳೆ. ಇನ್​ಸ್ಟಾಗ್ರಾಮ್​​​ನಲ್ಲಿ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ ಎಂದಿದ್ದಾಳೆ. ಆಗ ಜೈಪುರದಿಂದ ಪಾಕಿಸ್ತಾನಕ್ಕೆ ಯಾವುದೇ ವಿಮಾನವಿಲ್ಲ ಎಂದು ವಿಮಾನ ನಿಲ್ದಾಣದ ಠಾಣಾಧಿಕಾರಿ ದಿಗ್ಪಾಲ್ ಸಿಂಗ್ ಹೇಳಿದರು. ಬಾಲಕಿಯು ಸಿಕರ್‌ನ ಶ್ರೀಮಧೋಪುರದ ನಿವಾಸಿ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​ಸ್ಟಾದಲ್ಲಿ ಪರಿಚಯವಾದ ಪ್ರಿಯಕರನ ಭೇಟಿಗಾಗಿ ಪಾಕ್​​ಗೆ ಹೊರಟಿದ್ದ ಭಾರತದ ಬಾಲಕಿ; ಆಮೇಲೇನಾಯ್ತು?

https://newsfirstlive.com/wp-content/uploads/2023/07/aeroplane-3.jpg

Load More