newsfirstkannada.com

ಪ್ರಿಯಕರನನ್ನು ಭೇಟಿ ಮಾಡಲು ಇಡೀ ಹಳ್ಳಿಯ ಕರೆಂಟ್​ ತೆಗೆಯುತ್ತಿದ್ದ ಯುವತಿ! ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

Share :

23-07-2023

  ಹಳ್ಳಿಯ ಜನರನ್ನೇ ಯಾಮಾರಿಸುತ್ತಿದ್ದ ಪ್ರೇಮಿಗಳು

  ಕರೆಂಟ್​ ಕಟ್​ ಮಾಡಿ ಮೀಟ್​​ ಮಾಡುತ್ತಿದ್ದ ಜೋಡಿಗಳು

  ಕೊನೆಗೂ ಊರಿನವ್ರ ಕೈಯಲ್ಲಿ ಸಿಕ್ಕಿಬಿದ್ದ ಚಾಲಾಕಿ ಪ್ರೇಯಸಿ

ಪ್ರತಿ ಲವ್​ ಸ್ಟೋರಿಯಲ್ಲಿ ಪ್ರಿಯಕರನ ದುಸ್ಸಾಹಸಗಳೇ ಜಾಸ್ತಿ ಇದ್ದರೆ, ಈ ಘಟನೆಯಲ್ಲಿ ಯುವತಿಯ ಸಾಹಸವೇ ಜಾಸ್ತಿ ಇದೆ. ಏಕೆಂದರೆ ಇಲ್ಲೊಂದು ಯುವತಿ ಏನು ಮಾಡಿದ್ದಾಳೆ ಗೊತ್ತಾ? ಪ್ರಿಯಕರನನ್ನು ಭೇಟಿ ಮಾಡಲು ಇಡೀ ಹಳ್ಳಿಯ ವಿದ್ಯುತ್​ ಕಡಿತಗೊಳಿಸುತ್ತಿದ್ದಳಂತೆ. ಹೀಗೆ ಮಾಡುತ್ತಾ ಒಂದು ದಿನ ಊರಿನವರ ಕೈಯಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಆಮೇಲೆ ಏನಾಯ್ತು ಗೊತ್ತಾ? ಈ ಸ್ಟೋರಿ ಓದಿ.

ಹೌದು. ಇದು ಎಂಥವರನ್ನೂ ಅಚ್ಚರಿಗೊಳಿಸುವ ಸ್ಟೋರಿ. ಬಿಹಾರದ ಬೆಟ್ಟಿಯಾ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಆದರೆ ಒಂದು ದಿನ ಯುವತಿಯ ಈ ಮಹಾನ್​ ಕೆಲಸ ಗ್ರಾಮಸ್ಥರಿಗೆ ಗೊತ್ತಾಗಿದೆ. ಹಾಗಾಗಿ ಇಬ್ಬರನ್ನು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಬಳಿಕ ಇಬ್ಬರಿಗೂ ಬೆಲ್ಟ್​ನಿಂದ ಥಳಿಸಿದ್ದಾರೆ.

ಪ್ರಿಯಕರ ರಾಜ್‌​ ಕುಮಾರನನ್ನು ಭೇಟಿ ಮಾಡಲು ಯುವತಿ ಪ್ರೀತಿ ಕುಮಾರಿ ಮಾಡುತ್ತಿದ್ದ ಸಾಹಸದಿಂದಾಗಿ ಊರಿನ ಜನರು ಕೆಲ ಹೊತ್ತು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೆ ಕೊನೆಗೊಂದು ದಿನ ಈ ಕರೆಂಟ್​ ಸಮಸ್ಯೆಯ ಹಿಂದೆ ಪ್ರೇಮಿಗಳ ಕೈವಾಡವಿದೆ ಎಂಬುದು ಗೊತ್ತಾಗಿದೆ.

ಇನ್ನು ಪ್ರೇಮಿಗಳಿಗೆ ಊರವರು ಥಳಿಸುವ ದೃಶ್ಯವನ್ನು ಕೆಲವರು ಮೊಬೈಲ್​​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ.

ನೌತಾನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಠಾಣೆ ಮುಖ್ಯಸ್ಥ ಖಾಲಿದ್​ ಅಖ್ತರ್ ಮಾತನಾಡಿದ್ದಾರೆ​ ‘​ ರಾಜ್​ ಕುಮಾರ್​ ಮತ್ತು ಪ್ರೀತಿ ಕುಮಾರಿ ಕರೆಂಟ್ ತೆಗೆದು ಭೇಟಿಯಾಗುತ್ತಿದ್ದ ವಿಚಾರ ಊರವರಿಗೆ ತಿಳಿಯುತ್ತಿದ್ದಂತೆ ಎರಡು ಕುಟುಂಬಗಳು ಸೇರಿ ಇಬ್ಬರಿಗು ಮದುವೆ ಮಾಡಲು ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆ ಆಗಲಿದ್ದಾರೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಕರನನ್ನು ಭೇಟಿ ಮಾಡಲು ಇಡೀ ಹಳ್ಳಿಯ ಕರೆಂಟ್​ ತೆಗೆಯುತ್ತಿದ್ದ ಯುವತಿ! ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

https://newsfirstlive.com/wp-content/uploads/2023/07/Bihar.jpg

Load More