/newsfirstlive-kannada/media/post_attachments/wp-content/uploads/2023/08/girls.jpg)
ನೋಡ ನೋಡುತ್ತಿದ್ದಂತೆ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಯುವತಿಯರು ಆಯಾ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಸಾಮಾನ್ಯವಾಗಿ ಅಪ್​ ರೋಡ್​ನಲ್ಲಿ ಓರ್ವ ಸವಾರ ಹೋಗುವುದಕ್ಕೆ ಹರಸಾಹಸ ಪಡುತ್ತಾರೆ. ಆದರೆ ಈ ವಿಡಿಯೋದಲ್ಲಿ ಮೂವರು ಯುವತಿಯರು ತ್ರಿಬಲ್​​ ರೈಡಿಂಗ್​ ಹೋಗಿದ್ದಾರೆ. ಆಮೇಲೆ ಆಗಿರೋದೇ ಬೇರೆ.
/newsfirstlive-kannada/media/post_attachments/wp-content/uploads/2023/08/girls-1.jpg)
ರೋಡ್​ ಅಪ್​ ಇದ್ದಿದ್ದರಿಂದ ಗಾಡಿ ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಬೈಕ್ ಸ್ಥಳದಲ್ಲೇ ನಿಂತುಕೊಂಡಿದೆ. ಬಹುಶಃ ತೂಕ ಜಾಸ್ತಿಯಾಗಿ ಗಾಡಿ ಮುಂದಕ್ಕೆ ಹೋಗುತ್ತಿಲ್ಲ ಎಂದು ಅಂದುಕೊಂಡ ಯುವತಿಯೊಬ್ಬಳು, ಗಾಡಿಯಿಂದ ಕೆಳಗೆ ಇಳಿದಿದ್ದಾಳೆ. ಇದೇ ವೇಳೆ ಏಕಾಏಕಿ ಬ್ಯಾಲೆನ್ಸ್​ ಕೈಕೊಟ್ಟು ಸ್ಕೂಟಿಯಲ್ಲಿದ್ದ ಮೂವರು ಯುವತಿಯರು ರಸ್ತೆ ಪಕ್ಕವಿದ್ದ ಆಳವಾದ ಜಾಗಕ್ಕೆ ಜಾರಿ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.
OMG 😳 !!! pic.twitter.com/eOYIMJRd2P
— Aparajite (@amshilparaghu) August 19, 2023
ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ನಿಮಗೆ ಯಾಕೆ ಈ ರೀತಿ ಶೋಕಿ, ಇದೆಲ್ಲಾ ನಿಮಗೆ ಬೇಕಿತ್ತಾ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us