9ನೇ ತರಗತಿ ವಿದ್ಯಾರ್ಥಿ ಶ್ರೀನಿವಾಸ್ ಸಾವಿಗೆ ಹೊಣೆ ಯಾರು?
ಡೆತ್ನೋಟ್ ಬರೆದಿಟ್ಟು ಶಾಲೆಯಲ್ಲಿ ನೇಣು ಹಾಕಿಕೊಂಡ ವಿದ್ಯಾರ್ಥಿ
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟ ತಂದೆ-ತಾಯಿ
ಚಿಕ್ಕಮಗಳೂರು: ಕೇವಲ 750 ರೂಪಾಯಿ ಸಾಲಕ್ಕೆ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ಕೊಪ್ಪ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಹಿರೇ ಬಳ್ಳೇಕೆರೆ ಗ್ರಾಮದಲ್ಲಿ ವಿದ್ಯಾರ್ಥಿ ಶ್ರೀನಿವಾಸ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವಿದ್ಯಾರ್ಥಿ ಶ್ರೀನಿವಾಸ್ ಕೊಪ್ಪ ಪಟ್ಟಣದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. 750 ರೂಪಾಯಿ ಸಾಲ ಮಾಡಿಕೊಂಡಿದ್ದ. ಆದರೆ ಹಾಸ್ಟೆಲ್ ಸಿಬ್ಬಂದಿ 750 ರೂಪಾಯಿ ಸಾಲ ಕೊಟ್ಟು ಮೂರು ಸಾವಿರ ಹಣ ಕೇಳಿರೋ ಆರೋಪ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ನೋಟ್ ಬರೆದಿಟ್ಟು ಆಗಸ್ಟ್ 22ರಂದು ಕೊಪ್ಪದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡಿದ್ದಾನೆ. ಸದ್ಯ ಶ್ರೀನಿವಾಸ್ ಬರೆದಿಟ್ಟ ಡೆತ್ ನೋಟ್ ಏಕಾಏಕಿ ವೈರಲ್ ಆಗಿದೆ. ಇನ್ನು ಡೆತ್ ನೋಟ್ ನಲ್ಲಿ ಸಾವಿಗೆ ಕಾರಣವನ್ನು ಶ್ರೀನಿವಾಸ್ ಬರೆದಿದ್ದಾನೆ.
ಇನ್ನು 9ನೇ ತರಗತಿ ಮಗನ ಸಾವಿಗೆ ಮಾಜಿ ಯೋಧ ಕಣ್ಣೀರಿಟ್ಟಿದ್ದಾರೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ -ತಾಯಿ ಗೋಗರೆದಿದ್ದಾರೆ. ಒಂದು ವೇಳೆ ಈ ಸಾವಿಗೆ ನ್ಯಾಯ ಸಿಗದಿದ್ದರೆ ಎಸ್ ಪಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ನಿರ್ಧಾರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ