newsfirstkannada.com

ಸರ್ಕಾರಿ ಬಸ್​ಗೆ ಕೊಡುವ ಸಹಾಯವನ್ನು ನಮಗೂ ನೀಡಿ; ಆಕ್ರೋಶ ಹೊರಹಾಕಿದ ಖಾಸಗಿ ಬಸ್​ ಮಾಲೀಕರು

Share :

Published June 6, 2023 at 4:24am

    ಸರ್ಕಾರದ ಉಚಿತ ಯೋಜನೆಯಿಂದ ಖಾಸಗಿ ಬಸ್​ ಮಾಲೀಕರಿಗೆ ಸಂಕಷ್ಟ

    ನಮಗೂ ಫ್ರೀ ಕೊಡಿ ಎಂದು ಖಾಸಲಿ ಬಸ್​ ಮಾಲೀಕರು ಆಕ್ರೋಶ

    ಟ್ಯಾಕ್ಸ್​ ಫ್ರೀ ಮಾಡಿ ಎಂದು ಪಟ್ಟು ಹಿಡಿದ ಖಾಸಲಿ ಬಸ್​ ಮಾಲೀಕರು

ತುಮಕೂರು: ಸರ್ಕಾರದ ಗ್ಯಾರಂಟಿ ಯೋಜನೆ ಹೊರಬಿದ್ದಂತೆ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಬಸ್ ಗಳಿಗೆ ಕೊಡುವ ಸಹಾಯವನ್ನ ನಮಗೂ ಕೊಡಿ ಎಂದು ಪಟ್ಟುಹಿಡಿದಿದ್ದಾರೆ.

ಉಚಿತ ಬಸ್ ಪ್ರಯಾಣ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಕಂಗಾಲಾಗಿದ್ದು, ನಾವು ಸಹ ಮಹಿಳೆಯರನ್ನ ಉಚಿತವಾಗಿ ಕರೆದುಕೊಂಡು ಹೋಗ್ತೆವೆ‌. ಇಲ್ಲದಿದ್ರೆ ನಮ್ಮ‌ ಬಸ್ ಗಳು ಮಾರಾಟಕ್ಕಿಟ್ಟಿದ್ದೇವೆ‌ ಖರೀದಿಸಿ ಎಂದು ಪೋಸ್ಟರ್​ ಹಾಕಿಕೊಂಡಿದ್ದಾರೆ.

ಸರ್ಕಾರದ ಉಚಿತ ಬಸ್​ ಪ್ರಯಾಣ ಯೋಜನೆಯ ವಿರುದ್ಧ ಖಾಸಗಿ ಬಸ್ ಮಾಲೀಕರು ಕೆಂಡಾಮಂಡಲರಾಗಿದ್ದು, ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರಿಗೆ ಫ್ರೀ ಬಸ್ ನೀಡುವುದರಿಂದ ನಮ್ಮ ಅನ್ನಕ್ಕೆ ಮಣ್ಣು ಬಿದ್ದಿದೆ. ಒಂದು ಬಸ್ ನಂಬಿಕೊಂಡು 10, 15 ಕುಟುಂಬಗಳು ಜೀವನ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದರಿಂದ ನಮ್ಮ‌ ಹೊಟ್ಟೆ ಮೇಲೆ‌ ಹೊಡೆದಂತಾಗಿದೆ. ನಾವು ಬಸ್ ಮಾರಿಕೊಳ್ಳಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೋ ಗೊತ್ತಿಲ್ಲ?. ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ 40, 50 ಸಾವಿರ ಟ್ಯಾಕ್ಸ್ ಕಟ್ಟುತ್ತೇವೆ. ಪ್ರತಿ ವರ್ಷಕ್ಕೊಮ್ಮೆ 70, ರಿಂದ 80 ಸಾವಿರ ಇನ್ ಶ್ಯೂರೇನ್ಸ್ ಕಟ್ಟುತ್ತೇವೆ. ಉಚಿತ ಬಸ್ ಯೋಜನೆ‌ ಜಾರಿಯಿಂದ‌ ಹೇಗೆ ಟ್ಯಾಕ್ಸ್ ಕಟ್ಟೋದು ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಖಾಸಗಿ ಬಸ್​ ಮಾಲೀಕರು ನಮಗೂ ಏನಾದ್ರೂ ಫ್ರೀ ನೀಡಿ, ಕೊನೆ ಪಕ್ಷ ಇನ್ ಶ್ಯೂರೆನ್ಸ್ ಅಥವಾ ಟ್ಯಾಕ್ಸ್ ಫ್ರೀ ಮಾಡಿ. ಈಗಾಗಲೇ ಖಾಸಗಿ ಬಸ್ ಗಳಿಗೆ ಮಹಿಳೆಯರು ಬರುವವರ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಬಸ್ ಓಡಾಟ ನಡೆಸುತ್ತಿವೆ.
ಖಾಸಗಿ ಬಸ್ ಗಳನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಿ. ಸರ್ಕಾರಿ ಬಸ್ ಗಳಿಗೆ ಯಾವ ರೀತಿ ಸಹಾಯ ಕೊಡ್ತೀರಾ. ಅದೇ ರೀತಿ ನಮಗೂ ಸಹಾಯ ಕೊಡಿ. ನಾವು ಮಹಿಳೆಯರನ್ನ ಬಸ್ ನಲ್ಲಿ ಉಚಿತವಾಗಿ ಕರೆದುಕೊಂಡು ಹೋಗ್ತೇವೆ ಎಂದು ಖಾಸಗಿ ಬಸ್ ಮಾಲೀಕರು ತಮ್ಮ ಅಳಲು ತೋಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಬಸ್​ಗೆ ಕೊಡುವ ಸಹಾಯವನ್ನು ನಮಗೂ ನೀಡಿ; ಆಕ್ರೋಶ ಹೊರಹಾಕಿದ ಖಾಸಗಿ ಬಸ್​ ಮಾಲೀಕರು

https://newsfirstlive.com/wp-content/uploads/2023/06/Bus-Protest.jpg

Load More