newsfirstkannada.com

Glenn Maxwell: ಅಪ್ಪನಾದ ಖುಷಿಯಲ್ಲಿ RCB ಮ್ಯಾಕ್ಸಿ; ಮಗನಿಗೆ ಇಟ್ಟ ಹೆಸರೇನು ಗೊತ್ತೇ..?

Share :

16-09-2023

  ಇನ್​ಸ್ಟಾದಲ್ಲಿ ಖುಷಿ ವಿಚಾರ ಹಂಚಿಕೊಂಡ ಮ್ಯಾಕ್ಸಿ

  ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ

  ಮಾ.18, 2022 ರಂದು ಮದುವೆ ಆಗಿದ್ದ ಮ್ಯಾಕ್ಸ್​ವೆಲ್

ಆಸ್ಟ್ರೇಲಿಯಾದ ಸ್ಟಾರ್​​​ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್​ವೆಲ್​ ತಂದೆಯಾಗಿದ್ದಾರೆ. ಅವರ ಪತ್ನಿ ವಿನಿ ರಾಮನ್​​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಚಾರವನ್ನ ಮ್ಯಾಕ್ಸ್​ವೆಲ್​​ ಇನ್​ಸ್ಟಾಗ್ರಾಮ್​​​ನಲ್ಲಿ ಶೇರ್ ಮಾಡಿದ್ದಾರೆ. ಮಗನಿಗೆ ಲೊಗಾನ್​​ ಮಾವೇರಿಕ್​​​ ಮ್ಯಾಕ್ಸ್​ವೆಲ್ (Logan Maverick Maxwell)​ ಎಂದು ಹೆಸರಿಟ್ಟಿದ್ದಾರೆ. ಕಳೆದ ವರ್ಷ ಮ್ಯಾಕ್ಸ್​ವೆಲ್​​​ ಹಾಗೂ ವಿನಿ ರಾಮನ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿಕೊಂಡಿದ್ದರು.

ಮ್ಯಾಕ್ಸ್​ವೆಲ್ ಸಂತೋಷದ ವಿಚಾರ ತಿಳಿಸುತ್ತಿದ್ದಂತೆಯೇ ಕಿಂಗ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಸೇರಿದಂತೆ ಬಾಲಿವುಡ್​​ನ ಗಣ್ಯರು ಶುಭ ಹಾರೈಸಿದ್ದಾರೆ. ಅಂದ್ಹಾಗೆ ಮ್ಯಾಕ್ಸಿ ಹಾಗೂ ವಿನಿ ರಾಮನ್ ಅವರು ಮಾರ್ಚ್​ 18, 2022 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2017 ರಿಂದ ಈ ಜೋಡಿ ಡೇಟಿಂಗ್​ನಲ್ಲಿ ಬ್ಯುಸಿಯಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Glenn Maxwell: ಅಪ್ಪನಾದ ಖುಷಿಯಲ್ಲಿ RCB ಮ್ಯಾಕ್ಸಿ; ಮಗನಿಗೆ ಇಟ್ಟ ಹೆಸರೇನು ಗೊತ್ತೇ..?

https://newsfirstlive.com/wp-content/uploads/2023/09/MAXI.jpg

Load More