newsfirstkannada.com

ಬೇಸರದಲ್ಲಿದ್ದ ಕೊಹ್ಲಿಯನ್ನು ಬಿಗಿದಪ್ಪಿ ಕ್ರೀಡಾ ಸ್ಫೂರ್ತಿ ಮೆರೆದ ಸ್ನೇಹಿತ ಮ್ಯಾಕ್ಸ್​​ವೆಲ್..!

Share :

20-11-2023

    ಕೊಹ್ಲಿ ಜರ್ಸಿ ಪಡೆದು ಹಸ್ತಾಕ್ಷರ ಪಡೆದ ಮ್ಯಾಕ್ಸಿ

    ಕೊಹ್ಲಿ ಮೇಲಿನ ಅಭಿಮಾನ, ಗೌರವಕ್ಕೆ ಫ್ಯಾನ್ಸ್ ಫಿದಾ

    ನಾಲ್ಕು ಭಾವನಾತ್ಮಕ ಫೋಟೋ ಹಂಚಿಕೊಂಡ ಐಸಿಸಿ

ವಿರಾಟ್ ಕೊಹ್ಲಿ ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ ಅನ್ನೋದ್ರಲ್ಲಿ ಯಾವುದೇ ಡೌಟೇ ಬೇಡ. ಈ ಬಾರಿಯ ವಿಶ್ವಕಪ್​ನಲ್ಲಿ ತಾವೊಬ್ಬ ಎಂಥ ಆಟಗಾರ ಅನ್ನೋದನ್ನು ಕಿಂಗ್ ಕೊಹ್ಲಿ ನಿರೂಪಿಸಿದರು. ಆದರೆ, ಫೈನಲ್​​ ಪಂದ್ಯದಲ್ಲಿ ತಂಡದ ಕೆಲವು ತಪ್ಪುಗಳಿಂದಾಗಿ ಆಸ್ಟ್ರೇಲಿಯಾಗೆ ರೋಹಿತ್ ಪಡೆ ಶರಣಾಗಬೇಕಾಯಿತು.

ಟೀಂ ಇಂಡಿಯಾ ವಿಶ್ವಕಪ್ ಫೈನಲ್​​ನಲ್ಲಿ ಸೋತ ಬೆನ್ನಲ್ಲೇ ಆಟಗಾರರೆಲ್ಲ ಭಾವನೆಗೆ ಒಳಗಾಗಿ ದುಃಖಿತರಾದರು. ಸಿರಾಜ್, ರೋಹಿತ್ ಮೈದಾನದಲ್ಲೇ ಕಣ್ಣೀರು ಇಟ್ಟರು. ಇದರಿಂದ ಕಿಂಗ್ ಕೊಹ್ಲಿ ಕೂಡ ಹೊರತಾಗಿಲ್ಲ. ಮುಖಕ್ಕೆ ಕ್ಯಾಪ್​ ಹಾಕಿ ಬೇಸರ ವ್ಯಕ್ತಪಡಿಸಿದರು.
ನೋವಿನಲ್ಲಿದ್ದ ವಿರಾಟ್​ ಅವರನ್ನು ಪತ್ನಿ ಅನುಷ್ಕಾ ಶರ್ಮಾ ಬಿಗಿದಪ್ಪಿ ಸಂತೈಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದೀಗ ಐಸಿಸಿ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಮ್ಯಾಕ್ಸ್​ವೆಲ್​​​ ಅವರ 4 ಫೋಟೋವನ್ನು ಶೇರ್ ಮಾಡಿ, ‘ಗೌರವ ಮತ್ತು ಅಭಿಮಾನ’ ಅಂತಾ ಕ್ಯಾಪ್ಷನ್ ನೀಡಿದೆ.

ಫೋಟೋದಲ್ಲಿ ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಮ್ಯಾಕ್ಸಿ ಬಿಗಿದಪ್ಪಿಕೊಳ್ತಿರೋದನ್ನು ನೋಡಬಹುದು. ಹಾಗೆಯೇ ಇನ್ನೊಂದು ಫೋಟೋದಲ್ಲಿ ಜರ್ಸಿಗೆ ವಿರಾಟ್ ಅವರಿಂದ ಹಸ್ತಾಕ್ಷರ ಬರೆಸಿಕೊಳ್ಳುತ್ತಿದ್ದಾರೆ. ತುಂಬಾ ಎಮೋಷನಲ್ ದೃಶ್ಯಗಳು ಇದಾಗಿದೆ. ಅಂದ್ಹಾಗೆ ವಿರಾಟ್ ಮತ್ತು ಮ್ಯಾಕ್ಸಿ ಆತ್ಮೀಯ ಗೆಳೆಯರು. ಐಪಿಎಲ್​ನಲ್ಲಿ ಇಬ್ಬರು ಒಂದೇ ತಂಡದಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೇಸರದಲ್ಲಿದ್ದ ಕೊಹ್ಲಿಯನ್ನು ಬಿಗಿದಪ್ಪಿ ಕ್ರೀಡಾ ಸ್ಫೂರ್ತಿ ಮೆರೆದ ಸ್ನೇಹಿತ ಮ್ಯಾಕ್ಸ್​​ವೆಲ್..!

https://newsfirstlive.com/wp-content/uploads/2023/11/VIRAT_KOHLI-12.jpg

Load More