newsfirstkannada.com

10 ಬಿಗ್​ ಸಿಕ್ಸರ್​​.. ಬರೋಬ್ಬರಿ 21 ಫೋರ್​​.. 201 ರನ್​ ಚಚ್ಚಿ ದಾಖಲೆ ಬರೆದ RCB ಸ್ಟಾರ್​ ಮ್ಯಾಕ್ಸಿ!

Share :

07-11-2023

    ವಿಶ್ವದಲ್ಲಿ ಮೊದಲ​ 200 ರನ್​ ಸಿಡಿಸಿ ದಾಖಲೆ ಮಾಡಿದ್ದು ಸಚಿನ್ ತೆಂಡೂಲ್ಕರ್​

    ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್​ ಬಾರಿಸಿರುವುದು ರೋಹಿತ್ ಶರ್ಮಾ (264)

    ವಿಶ್ವಕಪ್​ ಇತಿಹಾಸಲ್ಲೇ 200 ರನ್​ ಗಳಿಸಿದ ವಿಶ್ವದ ಮೊದಲ ಆಟಗಾರ ಮ್ಯಾಕ್ಸಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ಅಫ್ಘಾನ್​ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಆಲ್​​ರೌಂಡರ್​ ಮ್ಯಾಕ್ಸ್​​ವೆಲ್​ ಅವರ ರಣಾರ್ಭಟದ ಡಬಲ್​ ಸೆಂಚುರಿಯಿಂದ ಆಸಿಸ್​ ಸೋಲಿನ ಸುಳಿಯಿಂದ ಪಾರಾಗಿ ಸೆಮಿಫೈನಲ್​​ ತಲುಪಿದೆ. ಅಲ್ಲದೇ ವಿಶ್ವಕಪ್​ನಲ್ಲಿ ಮೊಟ್ಟ ಮೊದಲ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್​ಮನ್​ ಎನ್ನುವ ಖ್ಯಾತಿಗೆ ಮ್ಯಾಕ್ಸ್​ವೆಲ್ ಕಾರಣರಾದರು.

ಟಾಸ್​ ಗೆದ್ದ ಅಫ್ಘಾನ್​ ಕ್ಯಾಪ್ಟನ್​ ಶಹೀದಿ ಫಸ್ಟ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಈ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಗುರ್ಬಾಜ್, ಇಬ್ರಾಹಿಂ ಜದ್ರಾನಿ ಉತ್ತಮ ಆಟವಾಡಿದರು. ಗುರ್ಬಾಜ್ ಬೇಗನೇ ಔಟ್ ಆದರೆ, ಇಬ್ರಾಹಿಂ ಜದ್ರಾನಿ ಕ್ರೀಸ್​ ಕಚ್ಚಿ ನಿಂತು 8 ಬೌಂಡರಿ ಮತ್ತು 3 ಸಿಕ್ಸರ್​ ಸಮೇತ 129 ರನ್​ಗಳನ್ನು ಸಿಡಿಸಿ ಔಟ್​ ಆಗದೇ ಉಳಿದರು. ಇನ್ನು ಉಳಿದ ಆಟಗಾರರ ಉತ್ತಮ ಬ್ಯಾಟಿಂಗ್​​ನಿಂದ ಅಫ್ಘಾನಿಸ್ತಾನ ತಂಡ 50 ಓವರ್​​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 291 ರನ್​ಗಳ ಗುರಿ ನೀಡಿತು.

ಈ ಟಾರ್ಗೆಟ್​ ಬೆನ್ನತ್ತಿದ್ದ ಆಸಿಸ್​ ಆರಂಭದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ತಂಡದ ಮೊತ್ತ 49 ಇರುವಾಗಲೇ ಪ್ರಮುಖ 4 ವಿಕೆಟ್​​ಗಳನ್ನ ಕಳೆದುಕೊಂಡಿತ್ತು. ಹೀಗಾಗಿ ಕಾಂಗರೂ ಪಡೆ ಸೋಲುತ್ತೆ ಎಂದು ಎಲ್ಲರು ಭಾವಿಸಿದ್ದರು. ಆದ್ರೆ ಜೋಶ್​ ಇಂಗ್ಲಿಷ್ ಔಟ್​ ಆದ ಬಳಿಕ ಬಂದ ಮ್ಯಾಕ್ಸ್​ವೆಲ್​ ತಂಡದ ದಿಕ್ಕನ್ನೇ ಬದಲಾಯಿಸಿದರು. ವಾಂಖೆಡೆಯಲ್ಲಿ ಒಂದು ರೀತಿ ರನ್​​ಗಳ ಸುರಿ ಮಳೆಯನ್ನೇ ಸುರಿಸಿದರು. ಆಕಾಶದೆತ್ತರ ಸಿಕ್ಸರ್​​ಗಳು ಗ್ಯಾಲರಿಯಲ್ಲಿ ಕುಳಿತ್ತಿದ್ದ ಫ್ಯಾನ್ಸ್​​ಗೆ ಹಬ್ಬದೂಟವನ್ನೇ ಉಣಬಡಿಸಿದವು ಎಂದು ಹೇಳಬಹುದು.

ಇನ್ನೇನು ಆಸ್ಟ್ರೇಲಿಯಾ ತಂಡ 150 ರನ್​ ಒಳಗೆ ಸೋಲುತ್ತೆ ಎನ್ನುವಾಗಲೇ ಕ್ರೀಸ್​ಗೆ ಬಂದ ಮ್ಯಾಕ್ಸಿ, ಮೈದಾನದಲ್ಲಿ ಚೆಂಡಿನ ಮೂಲಕ ಚಿತ್ತಾರ ಮೂಡಿಸಿದರು. ಅಫ್ಘಾನ್​ ಬೌಲರ್​ಗಳನ್ನ ಮನ ಬಂದಂತೆ ದಂಡಿಸಿ ಬೆವರಿಳಿಸಿದರು. ವಿಶ್ವಕಪ್​ನಲ್ಲಿ ಯಾರು ಮಾಡದ ದ್ವಿಶತಕ ಸಾಧನೆಯನ್ನು ಮ್ಯಾಕ್ಸ್​ವೆಲ್ ಮಾಡಿದರು. 128 ಎಸೆತಗಳನ್ನು ಎದುರಿಸಿದ ಗ್ಲೇನ್​ ಮ್ಯಾಕ್ಸ್​ವೆಲ್​ 21 ಬೌಂಡರಿ, 10 ಆಕರ್ಷಕ ಸಿಕ್ಸರ್​ಗಳ ನೆರವಿನಿಂದ 201 ರನ್​ಗಳನ್ನು ಗಳಿಸಿ ಆಸಿಸ್​ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಇನ್ನು ಆಸಿಸ್​ 46.5 ಓವರ್​ನಲ್ಲಿ 7 ವಿಕೆಟ್​ ಕಳೆದುಕೊಂಡು 293 ರನ್​ಗಳನ್ನ ಗಳಿಸಿ ಗೆಲುವಿನ ನಗೆ ಬೀರಿತು.

ಇದುವರೆಗೆ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದವರು ಸಚಿನ್​, ರೋಹಿತ್ ಶರ್ಮಾ ಸೇರಿ ಒಟ್ಟು 10 ಜನರು ಇದ್ದಾರೆ. ಇವರ ಸಾಲಿಗೆ ಈಗ ಮ್ಯಾಕ್ಸ್​ವೆಲ್​ ಸೇರಿಕೊಂಡಿದ್ದಾರೆ. ಅಲ್ಲದೇ ವಿಶ್ವದಲ್ಲಿ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ದ್ವಿಶತಕ ಸಿಡಿಸಿರುವುದು ಸಚಿನ್​ ತೆಂಡೂಲ್ಕರ್​ ಆದ್ರೆ, ರೋಹಿತ್ ಶರ್ಮಾ 264 ರನ್​ ಹೊಡೆದು ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದವರಾಗಿದ್ದಾರೆ. ಆದ್ರೆ ವಿಶ್ವಕಪ್​​​ನಲ್ಲಿ ಡಬಲ್​ ಸೆಂಚುರಿಯನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್​​ಮನ್​ ಎಂಬ ಖ್ಯಾತಿಗೆ ಮ್ಯಾಕ್ಸ್​​ವೆಲ್​ ಕಾರಣರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

10 ಬಿಗ್​ ಸಿಕ್ಸರ್​​.. ಬರೋಬ್ಬರಿ 21 ಫೋರ್​​.. 201 ರನ್​ ಚಚ್ಚಿ ದಾಖಲೆ ಬರೆದ RCB ಸ್ಟಾರ್​ ಮ್ಯಾಕ್ಸಿ!

https://newsfirstlive.com/wp-content/uploads/2023/11/MAXWELL_200.jpg

Load More