ಸದ್ಯ ಇಡೀ ದೇಶದ್ಯಂತ ಸುಮಾರು 40 ಟನ್ ಅಷ್ಟು ಚಿನ್ನ ಮಾರಾಟ
ಆಭರಣ ಪ್ರಿಯರು ಎಷ್ಟು ಟನ್ ಬೆಳ್ಳಿಯನ್ನು ಖರೀದಿ ಮಾಡಿದ್ದಾರೆ?
63,000 ರೂಪಾಯಿಂದ ಬಂಗಾರದ ಬೆಲೆ ಎಷ್ಟು ಕಡಿಮೆ ಆಗಿದೆ..?
ಹಬ್ಬದ ಸಡಗರದ ವೇಳೆ ಭಾರತೀಯರು ಬಂಗಾರ, ಬೆಳ್ಳಿ ಎಂದರೆ ತುಸು ಹೆಚ್ಚಾಗಿಯೇ ಖರೀದಿ ಮಾಡುತ್ತಾರೆ. ಅದರಲ್ಲಿ ಅಕ್ಷಯ ತೃತೀಯ ದಿನದಂದು ಮಾತ್ರ ದಾಖಲೆ ಪ್ರಮಾಣದಲ್ಲಿ ಚಿನ್ನ ಮಾರಾಟ ಆಗುತ್ತದೆ. ಸದ್ಯ ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮೆಲ್ಲಗೆ ಕಳೆಗಟ್ಟುತ್ತಿದ್ದು ಜನರು ಕೂಡ ಬಂಗಾರ, ಬೆಳ್ಳಿಯನ್ನು ಹಿಂದೆಂದಿಗಿಂತಲೂ ಶೇ.20 ರಷ್ಟು ಹೆಚ್ಚಾಗಿಯೇ ಕೊಂಡುಕೊಂಡಿದ್ದು 30 ಸಾವಿರ ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ.
ಕಳೆದ 10 ದಿನಗಳ ಹಿಂದೆ ಬಂಗಾರವು ಪ್ರತಿ 10 ಗ್ರಾಂಗೆ ₹ 63,000 ಇತ್ತು. ಆದ್ರೆ ದಿನ ಕಳೆದಂತೆ ಇದರ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಂದರೆ ಅಕ್ಟೋಬರ್ 28ರಿಂದ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 800 ರಿಂದ 1500 ರೂ. ವರೆಗೆ ಬೆಲೆ ಕುಸಿಯುತ್ತ ಬಂದು 61,200 ರೂಪಾಯಿಗೆ ಬಂದು ನಿಂತಿದೆ. ಇದರಿಂದಲೇ ಖರೀದಿ ಅಧಿಕವಾಗಿದೆ. ಅಲ್ಲದೇ ಈ ಬಾರಿ ಆನ್ಲೈನ್ನ ಮೂಲಕ ಹೆಚ್ಚು ಚಿನ್ನ ಖರೀದಿಯಾಗಿದೆ ಎಂದು ಹೇಳಲಾಗ್ತಿದೆ.
ದೀಪಾವಳಿ ಹಿನ್ನೆಲೆಯಲ್ಲಿ ದೇಶದಲ್ಲೆಲ್ಲಾ ಒಟ್ಟು 41 ಟನ್ ಚಿನ್ನ ಮತ್ತು 400 ಟನ್ಗಳಷ್ಟು ಬೆಳ್ಳಿ ಮಾರಾಟವಾಗಿದೆ. ಒಟ್ಟು ₹30,000 ಕೋಟಿ ರೂಪಾಯಿಯಷ್ಟು ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಸದ್ಯ ದೇಶದ್ಯಾಂತ ಜನರು ಇನ್ನು ಚಿನ್ನ ಖರೀದಿ ಮಾಡಲಿದ್ದಾರೆ. ಇನ್ನು ಕಳೆದ ವರ್ಷ ದೀಪಾವಳಿಯಂದು ತೆರಿಗೆಗಳನ್ನು ಹೊರತುಪಡಿಸಿ, ಪ್ರತಿ 10 ಗ್ರಾಂಗೆ ₹50,139 ಬೆಲೆ ಇತ್ತು. ಅಲ್ಲದೇ 22 ಟನ್ ಚಿನ್ನ ಖರೀದಿಯಾಗಿತ್ತು ಎಂದು ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್ ನಿರ್ದೇಶಕ ದಿನೇಶ್ ಜೈನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ