newsfirstkannada.com

4 ಕೋಟಿ ಮೌಲ್ಯದ ಚಿನ್ನ, 28 iPhone​ ಅಕ್ರಮ ಸಾಗಾಟ ಮಾಡ್ತಿದ್ದ ಖದೀಮರು ಲಾಕ್..!

Share :

23-10-2023

    ಸೊಂಟದಲ್ಲಿ ಪೇಸ್ಟ್​ ರೂಪದ ಚಿನ್ನ ಇಟ್ಟುಕೊಂಡಿದ್ದ ಕಿಲಾಡಿಗಳು

    ಮೂವರು ಆರೋಪಿಗಳಿಂದ ಕೋಟಿ, ಕೋಟಿ ಮೌಲ್ಯದ ವಸ್ತು ವಶ

    ಮುಂಬೈನಿಂದ ಅಬುಧಾಬಿಗೆ ಹೋಗಿ ಪ್ಲಾನ್ ಮಾಡಿದ್ದ ಖದೀಮರು

ಪಣಜಿ: ಅಬುಧಾಬಿಯಿಂದ ಗೋವಾಕ್ಕೆ ವಿಮಾನದಲ್ಲಿ ಆಗಮಿಸಿದ್ದ ಮೂವರು ಪ್ರಯಾಣಿರಿಂದ ಬರೋಬ್ಬರಿ ₹4 ಕೋಟಿ ಮೌಲ್ಯದ ಚಿನ್ನ ಹಾಗೂ 28 ಐಫೋನ್​ಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯು ಉತ್ತರ ಗೋವಾ ಜಿಲ್ಲೆಯಲ್ಲಿರುವ ಮನೋಹ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಲ್ಲಿ ನಡೆದಿದೆ.

ಅಬುಧಾಬಿಯಿಂದ ಬಂದಿದ್ದ ಪ್ರಯಾಣಿಕರಾದ ಉತ್ತರ ಪ್ರದೇಶ ಮೂಲದ ಇರ್ಫಾನ್ (30), ಮುಂಬೈಯ ಕಮ್ರಾನ್ ಅಹ್ಮದ್ (38) ಮತ್ತು ಗುಜರಾತ್​ನ ಮೊಹಮ್ಮದ್ ಇರ್ಫಾನ್ ಗುಲಾಮ್ (37) ರಿಂದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರು ತಮ್ಮ ಸೊಂಟದಲ್ಲಿ ಇರಿಸಿಕೊಂಡಿದ್ದ ಪೇಸ್ಟ್​ ರೂಪದಲ್ಲಿದ್ದ 5.7 ಕೆ.ಜಿ ಬಂಗಾರ, ಬ್ಯಾಗ್​ಗಳಲ್ಲಿ ಇಟ್ಟಿದ್ದ 28 ಹೈ ಎಂಡ್ ಐಫೋನ್​ 15 ಪ್ರೊ ಮ್ಯಾಕ್ಷ್​ ಡಿವೈಸ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟು ಮೌಲ್ಯ ₹3 ಕೋಟಿ 92 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.

ಈ ಮೂವರು ಅಕ್ಟೋಬರ್ 12 ರಂದು ಮುಂಬೈನಿಂದ ಅಬುಧಾಬಿಗೆ ಪ್ರಯಾಣ ಮಾಡಿದ್ದರು. ಬಳಿಕ ಅಲ್ಲಿಂದ ವಿಮಾನದಲ್ಲಿ ಗೋವಾದ ಮನೋಹರ ಏರ್​ಪೋರ್ಟ್​ಗೆ ಬರುವಾಗ ಭಾರೀ ಮೌಲ್ಯದ ಸರಕುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಬಂದಿದ್ದರು. ಈ ವೇಳೆ ಅಧಿಕಾರಿಗಳು ತಪಾಷಣೆ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ಕೋಟಿ ಮೌಲ್ಯದ ಚಿನ್ನ, 28 iPhone​ ಅಕ್ರಮ ಸಾಗಾಟ ಮಾಡ್ತಿದ್ದ ಖದೀಮರು ಲಾಕ್..!

https://newsfirstlive.com/wp-content/uploads/2023/10/GOA_GOLD_IPHONE.jpg

Load More