ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
10 ಗ್ರಾಂ ಬಂಗಾರದ ಬೆಲೆ ಎಷ್ಟಿತ್ತು? ದಿಢೀರ್ ಎಷ್ಟು ಆಯ್ತು!
ಧನ್‌ತೇರಸ್ ಸಂಭ್ರಮದ ಜೊತೆಗೆ ಸಾರ್ವಕಾಲಿಕ ದಾಖಲೆ
ನವದೆಹಲಿ: ಮನೆಯಲ್ಲಿದ್ದರೆ ಚಿನ್ನ ಚಿಂತೆಯು ಏತಕೆ ಇನ್ನ.. ಈ ಮಾತು ಸಾರ್ವಕಾಲಿಕ ಸತ್ಯ. ಇತ್ತೀಚೆಗೆ ಹೂಡಿಕೆ ತಜ್ಞರು ಚಿನ್ನದ ಮೇಲೆ ಹಣ ಹೂಡಿದ್ರೆ ಬಹಳಷ್ಟು ಲಾಭಗಳಿಸಬಹುದು ಅನ್ನೋ ಸಲಹೆ ನೀಡಿದ್ದರು. ಹೂಡಿಕೆ ತಜ್ಞರು ಮಾತ್ರ ನಿಜವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದೆ.
ಇದನ್ನೂ ಓದಿ: Golden time: ಚಿನ್ನದ ಮೇಲಿನ ಹೂಡಿಕೆಯಿಂದ ಭಾರೀ ಲಾಭ; ತಜ್ಞರ ಸಲಹೆ ಏನು ಗೊತ್ತಾ?
ಅಕ್ಟೋಬರ್ 29ರಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 10 ಗ್ರಾಂ ಬಂಗಾರದ ಬೆಲೆ 81,400 ರೂಪಾಯಿ ತಲುಪಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಂದು ಧನ್‌ತೇರಸ್ ಸಂಭ್ರಮ ಜೋರಾಗಿತ್ತು. ಧನ್‌ತೇರಸ್ ದಿನ ಚಿನ್ನ ಕೊಳ್ಳುವುದು ಸಂಪ್ರದಾಯವಾಗಿದೆ. ಶುಭ ದಿನದಂದು ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರಿಂದ ಡಿಮ್ಯಾಂಡ್ ಹೆಚ್ಚಾಗಿದೆ.
ಚಿನ್ನದ ಜೊತೆ ಬೆಳ್ಳಿಯ ದರವೂ ಏರಿಕೆ!
ದೆಹಲಿಯಲ್ಲಿ ಚಿನ್ನಾಭರಣಕ್ಕೆ ಇವತ್ತು ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಹೀಗಾಗಿ ಬೆಲೆ ಏರಿಕೆ ಕಂಡಿದೆ ಎಂದು ಅಖಿಲ ಭಾರತ ಸರಾಫ್ ಒಕ್ಕೂಟ ಮಾಹಿತಿ ನೀಡಿದೆ. ಚಿನ್ನದ ಜೊತೆಗೆ ಬೆಳ್ಳಿ ಖರೀದಿಯ ಭರಾಟೆ ಕೂಡ ಜೋರಾಗಿದ್ದು, ಬೆಳ್ಳಿ ದರ ಕೆಜಿಗೆ 200 ರೂಪಾಯಿ ಹೆಚ್ಚಾಗಿದೆ. ಸೋಮವಾರ 1 ಕೆಜಿ 99,500 ರೂಪಾಯಿ ಇದ್ದ ಬೆಳ್ಳಿ ರೇಟ್ ಮಂಗಳವಾರ 99,700 ರೂಪಾಯಿ ತಲುಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ