newsfirstkannada.com

ಲಗೇಜ್​​ ಬ್ಯಾಗ್​ ಚಿನ್ನ ಆಗಿದ್ದು ಹೇಗೆ..? ಈ ಖತರ್ನಾಕ್​​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದೇ ರೋಚಕ!

Share :

19-08-2023

    ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಮುಂದಾಗಿದ್ದ ಕಳ್ಳರು

    ಕೊನೆಗೂ ಪರಿಶೀಲಿಸಿದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಜೈಲು ಸೇರಿದ್ರು!

    ಇದು ನೋಡೋಕೆ ಲಗೇಜ್​ ಬ್ಯಾಗ್​​, ಬಟ್​ ಇದ್ದಿದ್ದೆಲ್ಲಾ ಬರೀ ಚಿನ್ನ

ಬೆಂಗಳೂರು: ಇದೊಂದು ಸ್ಕ್ರೂ! ಆದ್ರೆ ಚಿನ್ನದ ಸ್ಕ್ರೂ ಅಂತ ಹೇಳಿದ್ರೆ ನೀವು ನಂಬ್ತೀರಾ. ಯೆಸ್​​ ನಂಬಲೇಬೇಕು. ಇಷ್ಟಕ್ಕೆ ಕಣ್ಣು ​ದೊಡ್ಡದು ಮಾಡಿಕೊಂಡರೆ ಹೇಗೆ? ಲಗೇಜ್​​​ ಬ್ಯಾಗ್​​ ಬೆಲ್ಟ್​​​ ಒಳಗೆ ಮುಟ್ಟಿದ್ದೆಲ್ಲಾ ಚಿನ್ನ. ಹೇಗಂತೀರಾ ಈ ಸ್ಟೋರಿ ಓದಿ..!

ಚಿನ್ನ ಸಿಕ್ಕಿದ್ದು ಹೇಗೆ..?

ಶುಕ್ರವಾರ ಬೆಳಗ್ಗೆ ಸಿಲಿಕಾನ್​ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಚಿನ್ನದ ಗಣಿಯೇ ಸಿಕ್ಕಿದೆ. ಖತರ್ನಾಕ್​ ಸ್ಮಗ್ಲರ್ಸ್​ಗಳು ಬ್ಯಾಗ್​ನಲ್ಲಿ ಚಿನ್ನ ತಂದ್ರೆ ಗೊತ್ತಾಗುತ್ತೆ ಅಂತಾ ಬ್ಯಾಗ್​​ ಸ್ಕ್ರೂಗಳನ್ನೇ ಗೋಲ್ಡ್​ ಮಾಡ್ಬಿಟ್ಟಿದ್ರು. ಅಷ್ಟೇ ಅಲ್ಲ, ಲಗೇಜ್​​​ ಬ್ಯಾಗ್​​ನ ಬೆಲ್ಟ್ ಒಳಗೂ ಚಿನ್ನ ಅಡಗಿಸಿಟ್ಟಿದ್ರು.

ಎಮಿರೇಟ್ಸ್ ವಿಮಾನದಲ್ಲಿ ಕೆಐಎಎಲ್​​​​ಗೆ ಪ್ರಯಾಣಿಕರಂತೆ ಬಂದಿದ್ರು. ಅಧಿಕಾರಿಗಳಿಗೇ ಚೆಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್​ ಆಗ್ಬೋದು ಅಂತ ಅಂದುಕೊಂಡಿದ್ರು. ಆದ್ರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಎಲ್ಲಾ ಉಲ್ಟಾ ಆಗಿದೆ. ಏರ್ಪೋಟ್​​ನ ಮೆಟಲ್ ಡಿಟೆಕ್ಟರ್‌ನಲ್ಲಿ ಇವ್ರ ಚಿನ್ನದಂಥಾ ಐಡಿಯಾ ಬಯಲಾಗಿದೆ.

ಸದ್ಯ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನ ವಶಕ್ಕೆ ಪಡೆದು, ಬಂಧಿತ ಸ್ಮಗ್ಲರ್​​​ನಿಂದ 267 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಅದೇನೆ ಇರ್ಲಿ ಖತರ್ನಾಕ್​ ಖದೀಮರು ಚಾಪೆ ಕೆಳಗೆ ತೂರಿದ್ರೆ, ಕಸ್ಟಮ್ಸ್​​ ಅಧಿಕಾರಿಗಳು ರಂಗೋಲಿ ಕೆಳಗೆ ತೂರಿ ಸ್ಮಗ್ಲರ್​​ಗಳನ್ನ ಬಲೆ ಬೀಳಿಸಿದ್ದು ರಿಯಲೀ ಗ್ರೇಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಗೇಜ್​​ ಬ್ಯಾಗ್​ ಚಿನ್ನ ಆಗಿದ್ದು ಹೇಗೆ..? ಈ ಖತರ್ನಾಕ್​​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/08/laguage-bag.jpg

Load More