newsfirstkannada.com

ಬಂಜರು ಭೂಮಿಯಲ್ಲಿ ಬಂಗಾರ ಬೆಳೆ..! ದೊಣ್ಣೆ ಮೆಣಸು ಬೆಳೆದು ಲಕ್ಷ ಲಕ್ಷ ಎಣಿಸುತ್ತಿದ್ದಾನೆ ಈ ರೈತ 

Share :

21-11-2023

    ಸುಮಾರು ಐದು ಎಕರೆ ಬಂಜರು ಭೂಮಿ

    ದೊಣ್ಣೆ ಮೆಣಸು ಬೆಳೆದು ಲಕ್ಷ ಲಕ್ಷ ಆದಾಯ

    ಇಂಡಸ್ ತಳಿಯ ಮೆಣಸಿನ ಸಸಿ ತಂದು ನಾಟಿ

ಈ ಬಾರಿ ಮುಂಗಾರು ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆದ ಬೆಳೆಗಳೆಲ್ಲವೂ ಸಂಪೂರ್ಣವಾಗಿ ಹಾಳಾಗ್ತಿದೆ. ಆದ್ರೆ, ಇಲ್ಲೊಬ್ಬ ರೈತ ಬರ ಬಂದ ಕಾಲದಲ್ಲೂ ತನ್ನ ಜಮೀನಿನಲ್ಲಿ ಬಂಗಾರ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಮಾಣಿಕ ಅವಳೇಕರ ಎಂಬ ರೈತ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ. ಸುಮಾರು ಐದು ಎಕರೆ ಬಂಜರು ಭೂಮಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ ದೊಣ್ಣೆ ಮೆಣಸು ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಿಂದ ಉತ್ತಮ ಗುಣಮಟ್ಟದ ಇಂಡಸ್ ತಳಿಯ ಮೆಣಸಿನ ಸಸಿ ತಂದು ನಾಟಿಮಾಡಿ 45 ದಿನದಲ್ಲಿಯೇ ಮೊದಲ ಹಂತದ ಕಟಾವಿನಲ್ಲಿ 15 ಟನ್ ದೊಣ್ಣೆ ಮೆಣಸು ಮಾರುಕಟ್ಟೆಗೆ ಸಾಗಾಟ ಮಾಡಿದ್ದಾರೆ.

ಈಗಾಗಲೇ ಮೂರು ಕಟಾವು ಕಾರ್ಯ ಮುಗಿದಿದ್ದು, 15 ಟನ್ ಆಗುವಷ್ಟು ಮೆಣಸು ಮಾರುಕಟ್ಟೆಗೆ ಸಾಗಿಸಲಾಗಿದೆ.. ಸದ್ಯ 15 ಲಕ್ಷ ಹಣ ರೈತನ ಜೇಬು ಸೇರಿದ್ದು, ಇನ್ನು 12 ಲಕ್ಷ ಆದಾಯದ ನಿರೀಕ್ಷೆ ಇದೆ ಅಂತಾರೆ ರೈತ ಮಾಣಿಕ ಅವಳೇಕರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂಜರು ಭೂಮಿಯಲ್ಲಿ ಬಂಗಾರ ಬೆಳೆ..! ದೊಣ್ಣೆ ಮೆಣಸು ಬೆಳೆದು ಲಕ್ಷ ಲಕ್ಷ ಎಣಿಸುತ್ತಿದ್ದಾನೆ ಈ ರೈತ 

https://newsfirstlive.com/wp-content/uploads/2023/11/Chilli-2.jpg

Load More