newsfirstkannada.com

ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

Share :

Published June 14, 2024 at 3:16pm

  ವಿಶ್ವಕಪ್​ನಲ್ಲಿ ವಿರಾಟ್​​ ಕೊಹ್ಲಿಗೆ ಏನಾಗಿದೆ.. 3 ಪಂದ್ಯ, 3 ವೈಫಲ್ಯನಾ?

  ಹ್ಯಾಟ್ರಿಕ್​ ಗೆಲುವಿನೊಂದಿಗೆ ಸೂಪರ್-​ 8ಗೆ ಭಾರತ ಅಧಿಕೃತ ಕ್ವಾಲಿಫೈ

  ಅಮೆರಿಕ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಗೋಲ್ಡನ್​​ ಡಕೌಟ್

ವಿಶ್ವಕಪ್​ ಟೂರ್ನಿಯಲ್ಲಿ ಒಂದೆಡೆ ಟೀಮ್​ ಇಂಡಿಯಾದ ಗೆಲುವಿನ ಯಾತ್ರೆ ನಡೀತಿದ್ರೆ, ಇನ್ನೊಂದೆಡೆ ವಿರಾಟ್​ ಕೊಹ್ಲಿಯ ಕಳಪೆಯಾಟ ಮುಂದುವರೆದಿದೆ. 3ನೇ ಪಂದ್ಯದಲ್ಲೂ ಫ್ಲಾಪ್​ ಶೋ ನೀಡಿರುವ ವಿರಾಟ್​ ಕೊಹ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಪವರ್​ಫುಲ್​ ಕೊಹ್ಲಿ, ಪವರ್​​ ಪ್ಲೇನಲ್ಲೇ ಪವರ್​ ಲೆಸ್​ ಆಟವಾಡಿ ನಿರ್ಗಮಿಸ್ತಿದ್ದಾರೆ. ಕೊಹ್ಲಿಯ ಈ ಪವರ್​ಲೆಸ್​​ ಆಟ ಟಿ20 ವಿಶ್ವಕಪ್​ಗೆ ಮಾತ್ರ ಸೀಮಿತವಾಗಿಲ್ಲ. ಈ ವರ್ಷವಿಡೀ ಅದೇ ರಾಗ ಅದೇ ಹಾಡಾಗಿದೆ.

ಟಿ20 ವಿಶ್ವಕಪ್​ ಸಮರದಲ್ಲಿ ಟೀಮ್​ ಇಂಡಿಯಾ ಗೆಲುವಿನ ಯಾತ್ರೆ ಮುಂದುವರೆದಿದೆ. ಹ್ಯಾಟ್ರಿಕ್​ ಗೆಲುವುಗಳೊಂದಿಗೆ ಸೂಪರ್-​ 8 ಹಂತಕ್ಕೆ ರೋಹಿತ್​ ಪಡೆ ಅಧಿಕೃತವಾಗಿ ಕ್ವಾಲಿಫೈಯಾಗಿದೆ. ಸೋಲಿಲ್ಲದ ಸರದಾರನಂತೆ ಟೀಮ್​ ಇಂಡಿಯಾ ಮಹತ್ವದ ಟೂರ್ನಿಯಲ್ಲಿ ಮುನ್ನುಗ್ತಿದ್ದು, ಕಪ್​ ಗೆಲುವಿನ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಗೆಲುವಿನ ಖುಷಿಯ ಜೊತೆಗೆ ಆತಂಕವೂ ಟೀಮ್​ ಇಂಡಿಯಾವನ್ನ ಕಾಡ್ತಿದೆ. ಅಭಿಮಾನಿಗಳಲ್ಲೂ ಬೇಸರ ಮನೆ ಮಾಡಿದೆ. ಅದಕ್ಕೆ ಕಾರಣ​ ಕಿಂಗ್​ ಕೊಹ್ಲಿ.

ಚುಟುಕು ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್​​.!

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿ ಟೀಮ್​ ಇಂಡಿಯಾ ಮೆರೆದಾಡ್ತಿದೆ. ಆದ್ರೆ, ವಿರಾಟ್​ ಕೊಹ್ಲಿ ಪರದಾಡ್ತಿದ್ದಾರೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಟಿ20 ವಿಶ್ವಕಪ್​ ಅಧಿಪತಿ ಅಂತಾ ಕರೆಸಿಕೊಳ್ಳೋ ಕಿಂಗ್​ ಕೊಹ್ಲಿ ಮೊಟ್ಟ ಮೊದಲ ಬಾರಿಗೆ ಚುಟುಕು ವಿಶ್ವಕಪ್​ನಲ್ಲಿ ಗೋಲ್ಡನ್​ ಡಕೌಟ್​ ಆಗಿದ್ದಾರೆ.

3 ಪಂದ್ಯ, 3 ವೈಫಲ್ಯ, ವಿರಾಟ್​​ ಕೊಹ್ಲಿಗೆ ಏನಾಯ್ತು.?

ಈ ಬಾರಿಯ ಟೂರ್ನಿಯಲ್ಲಿ ಹೊಸ ಜವಾಬ್ದಾರಿ ಹೊತ್ತು, ಆರಂಭಿಕನಾಗಿ ಕಣಕ್ಕಿಳೀತಾ ಇರೋ ವಿರಾಟ್​, ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಸೇರ್ತಿದ್ದಾರೆ. 3 ಪಂದ್ಯಗಳಲ್ಲಿ ರನ್​ಗಳಿಕೆಗೆ ತಿಣುಕಾಡಿರುವ ನಡೆಸಿರುವ ರನ್​ಮಷಿನ್​​ ಸಿಂಗಲ್​ ಡಿಜಿಟ್​ ದಾಟದೆ ನಿರಾಸೆ ಮೂಡಿಸಿದ್ದಾರೆ.

ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ

ಈ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ 1 ರನ್​ಗೆ ಸುಸ್ತಾದ ವಿರಾಟ್​ ಕೊಹ್ಲಿ, ಪಾಕಿಸ್ತಾನ ವಿರುದ್ಧ 4 ರನ್​ಗಳಿಸಿ ನಿರ್ಗಮಿಸಿದ್ರು. ಅಮೆರಿಕ ವಿರುದ್ಧ ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್​​ ಡಕೌಟ್​ ಆಗಿ ನಿರ್ಗಮಿಸಿದ್ರು.

ರನ್​ಮಷೀನ್​ ಕೊಹ್ಲಿಗೆ ಪವರ್​ ಪ್ಲೇ ಪಂಚ್​.!

ತನ್ನ ಅಪ್ರತಿಮ ಬ್ಯಾಟಿಂಗ್ ಕಲೆಯಿಂದ ವಿಶ್ವ ಕ್ರಿಕೆಟ್​ ಲೋಕದಲ್ಲಿ ವಿರಾಟ್​ ಕೊಹ್ಲಿ ರನ್​ಮಷಿನ್​ ಎಂದೆ ಖ್ಯಾತಿ ಹೊಂದಿದ್ದಾರೆ. ಎಲ್ಲ ಕಂಡೀಷನ್​ಗಳಲ್ಲಿ, ಒತ್ತಡದ ನಡುವೆ, ಪ್ರಬಲ ಬೌಲಿಂಗ್​​ ಅಟ್ಯಾಕ್​ ಅನ್ನ ಧೂಳಿಪಟ ಮಾಡಿರುವ ಇತಿಹಾಸ ಹೊಂದಿದ್ದಾರೆ. ಆದ್ರೆ, ಈ ವರ್ಷದಲ್ಲಿ ಏನಾಗಿದ್ಯೋ ಗೊತ್ತಿಲ್ಲ. ಟಿ20 ಮಾದರಿಯಲ್ಲಿ ಓಪನರ್​​ ಆಗಿ ಕಣಕ್ಕಿಳಿಯಲು ಶುರು ಮಾಡಿದ್ಮೇಲೆ ಪವರ್​ ಪ್ಲೇನಲ್ಲೇ ಕೊಹ್ಲಿಯ ಆಟ ಅಂತ್ಯವಾಗಿದೆ.

T20ಯಲ್ಲಿ ಕೊಹ್ಲಿ ಪವರ್​ ಪ್ಲೇ ಪ್ರದರ್ಶನ -2024

2024ರಲ್ಲಿ ಟಿ20 ಮಾದರಿಯಲ್ಲಿ 5 ಪಂದ್ಯಗಳನ್ನಾಡಿರುವ ಕೊಹ್ಲಿ 34 ರನ್​ಗಳಿಸಿದ್ದು, 5 ಬಾರಿ ಪವರ್​ ಪ್ಲೇನಲ್ಲೇ ಔಟಾಗಿದ್ದಾರೆ. 8.5ರ ಸರಾಸರಿಯನ್ನ ಹೊಂದಿದ್ದಾರೆ.

3ನೇ ಕ್ರಮಾಂಕವೇ ಕಿಂಗ್​ ಕೊಹ್ಲಿಗೆ ಬೆಸ್ಟ್​.?

ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಆರಂಭಿಕನಾಗಿ ಸಕ್ಸಸ್​ ಕಂಡಿದ್ದಾರೆ ನಿಜ. ಆದ್ರೆ, ಇಂಟರ್​ನ್ಯಾಷನಲ್​ ಲೆವೆಲ್​ನಲ್ಲಿ ಯಶಸ್ಸು ಸಿಕ್ಕಿಲ್ಲ. ಈ ವರ್ಷವಂತೂ ಎಲ್ಲ ಪಂದ್ಯಗಳಲ್ಲೂ ಪವರ್​ ಪ್ಲೇನಲ್ಲೇ ಕೊಹ್ಲಿ ಔಟ್​ ಆಗಿದ್ದಾರೆ. ವಿಶ್ವಕಪ್​ನಲ್ಲೂ ಕಳಪೆ ಪರ್ಫಾಮೆನ್ಸ್​ ಮುಂದುವರೆದಿದೆ. ಹೀಗಾಗಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ವಿರಾಟ್​ ಕೊಹ್ಲಿಯ ಸ್ಲಾಟ್​ ಬದಲಾವಣೆ ಬಗ್ಗೆ ಚಿಂತಿಸಲು ಸಕಾಲ.

ಇದನ್ನೂ ಓದಿ: ‘ನನ್ನ ಗಂಡನಿಗೆ ನಾನೊಬ್ಬಳೇ ಹೆಂಡ್ತಿ’- ಡಿವೋರ್ಸ್‌ ರಿಜೆಕ್ಟ್ ಬೆನ್ನಲ್ಲೇ ದುನಿಯಾ ವಿಜಯ್ ಪತ್ನಿ ಖಡಕ್ ಮಾತು 

ಲೀಗ್​ ಹಂತದಲ್ಲಿ ಪ್ರಯೋಗ ನಡೆಸಿ ಫೇಲ್​ ಆಗಿರೋ ಮ್ಯಾನೇಜ್​ಮೆಂಟ್​ ಸೂಪರ್​ 8 ಹಂತದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ವಿರಾಟ್​ ಕೊಹ್ಲಿ 3ನೇ ಸ್ಲಾಟ್​ನಲ್ಲಿ ಅದ್ಭುತ ಪರ್ಫಾಮೆನ್ಸ್​ ನೀಡಿದ್ದಾರೆ. ಹೀಗಾಗಿ ಕೊಹ್ಲಿಯನ್ನ ಆರಂಭಿಕನಾಗಿ ಕಣಕ್ಕಿಳಿಸೋ ಬದಲು 3ನೇ ಕ್ರಮಾಂಕದಲ್ಲೇ ಆಡಿಸೋದು ಬೆಸ್ಟ್​ ಚಾಯ್ಸ್​. ಮ್ಯಾನೇಜ್​ಮೆಂಟ್​ ಈ ಬಗ್ಗೆ ಏನ್​ ನಿರ್ಧಾರ ತೆಗೆದುಕೊಳ್ಳೋತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

https://newsfirstlive.com/wp-content/uploads/2024/06/VIRAT_KOHLI-13.jpg

Load More