newsfirstkannada.com

ಪ್ಯಾನ್​​ ಇಂಡಿಯಾ ಸಿನಿಮಾ ಮಾಡ್ತಿದಾರಾ ಗೋಲ್ಡನ್​ ಸ್ಟಾರ್​ ಗಣೇಶ್​​; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿ!

Share :

02-07-2023

    ಸಖತ್​​ ವರ್ಕೌಟ್ ಮೂಡ್​ನಲ್ಲಿ ನಟ ಮಹೇಶ್​ ಬಾಬು

    ಹಾಸ್ಟೆಲ್ ಹುಡುಗರು ಸಿನಿಮಾ ತಂಡಕ್ಕೆ ದಿಗಂತ್ ಸಾಥ್​​

    ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್​​ ​ಡೇಗೆ ಬಿಗ್​​ ಗಿಫ್ಟ್​

ಮಹೇಶ್ ಬಾಬು ವರ್ಕ್​ಔಟ್

ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಫುಲ್ ವರ್ಕ್ ಔಟ್ ಮೂಡ್​ನಲ್ಲಿ ಇದ್ದಾರೆ. ಸದ್ಯ ಗುಂಟೂರು ಕಾರಂ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಕೊನೆ ಹಂತದ ಶೂಟಿಂಗ್​​​ಗಾಗಿ ಮಹೇಶ್ ಬಾಬು ಸಖತ್​ ವರ್ಕ್​ಔಟ್ ಅನ್ನ ಹೆಚ್ಚು ಮಾಡಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ತ್ರಿವಿಕ್ರಮ್ ಅವರ ಡೈರೆಕ್ಷನ್​​ನಲ್ಲಿ ಗುಂಟೂರು ಕಾರಂ ಸಿನಿಮಾ ಮೂಡಿಬರಲಿದೆ.

ಹಾಸ್ಟೆಲ್ ಹುಡುಗರು ಜೊತೆ ದಿಗಂತ್

ಭಿನ್ನ ವಿಭಿನ್ನ ಪ್ರಮೋಷನ್ ಟೀಸರ್ ಮೂಲಕ ಸದ್ದು ಮಾಡಿರುವ ಹೊಚ್ಚ ಹೊಸಬರ ಹಾಸ್ಟೆಲ್ ಹುಡುಗರು ಸಿನಿಮಾ ತಂಡಕ್ಕೆ ದಿಗಂತ್ ಸೇರ್ಪಡೆಯಾಗಿದ್ದಾರೆ. ವರುಣ್ ಗೌಡ ನಿರ್ಮಾಣದಲ್ಲಿ ನಿತಿಕ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಹಾಸ್ಟೆಲ್ ಹುಡುಗರು ಸಿನಿಮಾ ಮೂಡಿಬರುತ್ತಿದ್ದು ಜುಲೈ 28ನೇ ತಾರೀಕು ಪ್ರೇಕ್ಷಕರ ಮುಂದೆ ಬರಲಿದೆ.

ಗಣೇಶ್ ಬರ್ತ್​​ಡೇ ಗಿಫ್ಟ್

ಸ್ಯಾಂಡಲ್​ವುಡ್​​ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬರ್ತ್​​ಡೇಗೆ ಹೊಸ ಲುಕ್ ಒಂದು ಗಿಫ್ಟ್ ರೂಪದಲ್ಲಿ ಹೊರಬಂದಿದೆ. ಬಾನದಾರಿಯಲ್ಲಿ ಸಿನಿಮಾದ ನಂತರ ಗಣಪ ನಟಿಸುತ್ತಿರುವ ಮತ್ತೊಂದು ಹೊಸ ಚಿತ್ರ ‘‘ಕೃಷ್ಣಂ ಪ್ರಣಯ ಸಖಿ’’. ಸದ್ದು ಗದ್ದಲ್ಲವಿಲ್ಲದೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಬೆಂಗಳೂರಿನ ದೊಡ್ಡಾಲದ ಮರದ ಸುತ್ತಮುತ್ತ ಶೂಟಿಂಗ್ ಪ್ರಾರಂಭ ಮಾಡಿಕೊಂಡಿದೆ ಚಿತ್ರತಂಡ. ದಂಡುಪಾಳ್ಯ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜ್ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನ ನಿರ್ದೇಶನ ಮಾಡ್ತಿದ್ದಾರೆ.

ಪ್ಯಾನ್ ಇಂಡಿಯಾದತ್ತ ಗೋಲ್ಡನ್ ಸ್ಟಾರ್

ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್​​ ಇಂಡಿಯಾದತ್ತ ಗೋಲ್ಡನ್ ಹೆಜ್ಜೆ ಹಾಕುತ್ತಿದ್ದಾರೆ. ಇಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಹುಟ್ಟುಹಬ್ಬದ ಸಂಭ್ರಮ. ಗಣೇಶ್ ಅವರ ಬರ್ತ್​ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಕಡೆಯಿಂದೊಂದು ಬಿಗ್ ಅನೌನ್ಸ್​ಮೆಂಟ್​ ಹೊರಬಿದ್ದಿದೆ. ಇದುವರೆಗೂ ವಿಶಿಷ್ಟ ಕಥಾನಕವನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ಗಣೇಶ್ ಅವರಿಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕನ್ನಡತಿ ಸಿರಿಯಲ್ ಖ್ಯಾತಿಯ ಕಿರಣ್ ರಾಜ್​​ಗೆ ಗಿಫ್ಟ್

ಟೈಟಲ್ ಹಾಗೂ ಪೋಸ್ಟರ್​ನಿಂದ ಸಿನಿ ಪ್ರೇಕ್ಷರಲ್ಲಿ ಕುತೂಹಲ ಹುಟ್ಟಿಸಿದ ರಾನಿ ಸಿನಿಮಾ. ಇದೀಗ ನಟ ಕಿರಣ್ ರಾಜ್ ಹುಟ್ಟುಹಬ್ಬದ ದಿನ ಜೂಲೈ 5 ರಂದು ಟೀಸರ್ ಬಿಡುಗಡೆಯಾಗುತ್ತಿದೆ. ‘Ronny’ ಚಿತ್ರದ​ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ ಚಿತ್ರದ ಟೈಟಲ್ ಅನಾವರಣಗೊಳಿಸಿದ್ದರು, ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡುಸಿತ್ತು, ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು , ನಿರ್ದೇಶಕ ಗುರುತೇಜ್ ಶೆಟ್ಟಿ ಈ ಬಾರಿ ಗಟ್ಟಿ ಕತೆಯೊಂದಿಗೆ ಆಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ ಎಂದರು, ಇದೊಂದು ಗ್ಯಾಂಗಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳು ಚಿತ್ರದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾನ್​​ ಇಂಡಿಯಾ ಸಿನಿಮಾ ಮಾಡ್ತಿದಾರಾ ಗೋಲ್ಡನ್​ ಸ್ಟಾರ್​ ಗಣೇಶ್​​; ಇಲ್ಲಿವೆ ಟಾಪ್​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/07/ganesh-1-1.jpg

Load More