ಮೆಟ್ರೋದಲ್ಲಿ ಮದ್ಯದ ಬಾಟಲಿ ಸಾಗಾಣಿಕೆಗೆ ಶೀಘ್ರವೇ ಗ್ರೀನ್ ಸಿಗ್ನಲ್
ಬಿಎಂಆರ್ಸಿಎಲ್ ಅಧಿಕಾರಿಗಳಿಂದ ಈ ಬಗ್ಗೆ ಪರಿಶೀಲನೆ
ದೆಹಲಿ ಮೆಟ್ರೋದಲ್ಲಿದೆ ಮದ್ಯದ ಬಾಟಲಿ ಸಾಗಾಣಿಕೆಗೆ ಅವಕಾಶ
ಬೆಂಗಳೂರು: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್. ಶೀಘ್ರದಲ್ಲೇ BMRCL ಕಡೆಯಿಂದ ಸಿಹಿಸುದ್ದಿ ಸಿಗಲಿದೆ. ಅದೇನೆಂದರೆ ಮೆಟ್ರೋದಲ್ಲಿ ಮದ್ಯದ ಬಾಟಲಿ ಸಾಗಾಣಿಕೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ಬಿಎಂಆರ್ಸಿಎಲ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದು, ಸದ್ಯದಲ್ಲೇ ಮೆಟ್ರೋದಲ್ಲಿ ಚಲಿಸುವವರಿಗೆ ಎಣ್ಣೆ ಬಾಟಲಿ ತೆಗೆದುಕೊಂಡು ಹೋಗುವ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
BMRCL ಅಧಿಕಾರಿಗಳ ಪರಿಶೀಲನೆ
ಈಗಾಗಲೇ ದೆಹಲಿ ಮೆಟ್ರೋದಲ್ಲಿ ಒಬ್ಬ ಪ್ರಯಾಣಿಕನಿಗೆ ಎರಡು ಸೀಲ್ಡ್ ಮದ್ಯದ ಬಾಟಲಿ ಸಾಗಾಣಿಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ BMRCL ಅಧಿಕಾರಿಗಳು ಬೆಂಗಳೂರಲ್ಲಿ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ರೆಸ್ಟ್ ರೂಂ ನಲ್ಲಿ ಮದ್ಯ ಸೇವನೆ
ಈ ಹಿಂದೆ ಮೆಟ್ರೋದಲ್ಲಿ ಮದ್ಯ ಸಾಗಾಣಿಕೆಗೆ ಪ್ರಯಾಣಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಪ್ರಯಾಣಿಕನೊಬ್ಬ ರೆಸ್ಟ್ ರೂಂ ನಲ್ಲಿ ಮದ್ಯ ಸೇವಿಸಿದ್ದ ಕಾರಣ 2019 ರಲ್ಲಿ ನಿಷೇಧ ಮಾಡಲಾಗಿತ್ತು. ಮದ್ಯ ಶೀಘ್ರ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳ ಪಟ್ಟಿಯಲ್ಲಿರುವ ಕಾರಣ ಸದ್ಯ ಇದರ ಸಾಗಾಣಿಕೆಗೆ BMRCL ನಿರ್ಬಂಧ ವಿಧಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ