ಕಾರಂತ ಬಡಾವಣೆಯಲ್ಲಿ ಸೈಟ್ ಹಂಚಿಕೆಗೆ ಅಧಿಸೂಚನೆ
ಮೊದಲ ಹಂತದಲ್ಲಿ 12 ಸಾವಿರ ಸೈಟ್ ಹರಾಜಿಗೆ ಸಿದ್ಧತೆ..!
12 ಸಾವಿರ ನಿವೇಶನಗಳ ಸಾರ್ವಜನಿಕರಿಗೆ ಹಂಚಿಕೆಗೆ ತೀರ್ಮಾನ
ಬೆಂಗಳೂರು: ಬಿಡಿಎ ಸೈಟ್ ಅಂದ್ರೆ ಜನ ನಾ ಮುಂದು ತಾ ಮುಂದು ಅಂತ ಮುಂದೆ ಬರ್ತಾರೆ. ಕೆಂಪೇಗೌಡ ಲೇಔಟ್ ಬಳಿಕ ಇಲ್ಲಿಯವರೆಗೆ ಬಿಡಿಎ ಸೈಟ್ ಹಂಚಿಕೆ ಮಾಡಿರಲಿಲ್ಲ. ಆದ್ರೆ ಇದೀಗ ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನ ಹಂಚಿಕೆಮಾಡಲು ಸಿದ್ದತೆ ನಡೆಸಿದೆ. 3546 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಗೊಂಡಿದ್ದು, ಮೂಲಭೌತ ಸೌಕರ್ಯ ಕಲ್ಪಿಸೋ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲ, ಇದೇ ವೇಳೆ ಭೂಮಿ ಕೊಟ್ಟ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೈಟ್ ಹಂಚಿಕೆಗೆ ಬಿಡಿಎ ಮೊದಲ ಆಧ್ಯತೆ ನೀಡಿದೆ.
ಸೈಟ್ ಹಂಚಿಕೆಗೆ ಸಿದ್ಧತೆ
ಸುಮಾರು ಒಂದೂವರೆ ದಶಕದ ಹಿಂದೆ ಅಂದ್ರೆ 2008 ರಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 3,546 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಅದರಂತೆ ಸ್ವಾಧೀನಪಡಿಸಿಕೊಂಡ ಭೂಮಿಯ ಪೈಕಿ 2,800 ಎಕರೆಯನ್ನು ಕಾಮಗಾರಿ ಅಭಿವೃದ್ಧಿಗಾಗಿ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು, ಬಡಾವಣೆ ಅಭಿವೃದ್ಧಿ ಕೆಲಸಗಳು ಶೇ.40ರಷ್ಟು ಪೂರ್ಣಗೊಂಡಿವೆ. ಬಿಡಿಎ ಕಾಯ್ದೆ ಪ್ರಕಾರ ಶೇ.15 ರಷ್ಟು ಪ್ರದೇಶ ಉದ್ಯಾನವನ ಮತ್ತು ಆಟದ ಮೈದಾನಕ್ಕೆ ಕಾಯ್ದಿರಿಸಲಾಗಿದೆ. ಒಟ್ಟು 29 ಸಾವಿರ ನಿವೇಶಗಳನ್ನ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಹಂತದಲ್ಲಿ 12 ಸಾವಿರ ಸೈಟ್ ಗಳ ಹಂಚಿಕೆಗೆ ಸದ್ಯ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದೆ.
ನಿವೇಶನ ಹಂಚಿಕೆ ವೇಳೆ ಬಡಾವಣೆ ನಿರ್ಮಾಣಕ್ಕಾಗಿ ಭೂಮಿಯನ್ನು ಕೊಟ್ಟ ರೈತರಿಗೆ ಮೊದಲ ಆದ್ಯತೆ ನೀಡಲಾಗ್ತಿದೆ. ನಂತರ ಗ್ರಾಹಕರಿಗೆ ವಿತರಿಸಲು ಉದ್ದೇಶಿಲಾಗಿದೆ. ಮೂಲ ಸೌಕರ್ಯ ಕಲ್ಪಿಸಲು 2500 ಕೋಟಿ ಟೆಂಡರ್ ಕರೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಸೈಟ್ ದರ ನಿಗದಿಪಡಿಸಿ ಹಂಚಿಕೆ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ