/newsfirstlive-kannada/media/post_attachments/wp-content/uploads/2024/09/DARSHAN.png)
ವಿಜಯಪುರ: ನಟ ದರ್ಶನ ಅಭಿಮಾನಿಯೊಬ್ಬ ಜೋಕುಮಾರ ಸ್ವಾಮಿ ಬಳಿ ಭವಿಷ್ಯ ಕೇಳಿದ್ದಾನೆ. ವಿಜಯಪುರ ನಗರದ ಗೋಳಗುಮ್ಮಟ ಏರಿಯಾದ ಅಭಿಮಾನಿ ಸಚಿನ್ ಜಮಾದಾರ್ ಜೈಲಿನಲ್ಲಿರುವ ದರ್ಶನ್ ಬಗ್ಗೆ ಕೇಳಿದ್ದಾನೆ.
ದರ್ಶನ ಸಿನಿಮಾ ಹಿಟ್ ಆಗುವ ಬಗ್ಗೆ, ದರ್ಶನ್ ಜೈಲಿಂದ ಬಿಡುಗಡೆಯಾಗುವ ಬಗ್ಗೆ, ಮುಂದಿನ ಜೀವನ ಬಗ್ಗೆ ಅಭಿಮಾನಿ ಒಡಂಬಡಿಕೆ ಹೂಡಿದ್ದ. ಜೋಕುಮಾರ ಸ್ವಾಮಿಯ ಬುಟ್ಟಿ ಎತ್ತಿ ಪ್ರಶ್ನೆ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೈಲಿಂದ ಮೂರು ತಿಂಗಳಲ್ಲಿ ದರ್ಶನ್ ಹೊರಗೆ ಬರುತ್ತಾರೆ. ಬಳಿಕ ಡೆವಿಲ್ ಸಿನಿಮಾ ಹಿಟ್ ಆಗುವ ಬಗ್ಗೆಯೂ ಪಾಸಿಟಿವ್ ಭವಿಷ್ಯ ನೀಡಿದೆ. ಇನ್ನೂ ದರ್ಶನ ಹೊರ ಬಂದ ಮೇಲೆ ಹೇಗೆ ಎನ್ನುವ ಪ್ರಶ್ನೆಯನ್ನೂ ಕೇಳಲಾಯಿತು.
ಗಣೇಶನ ಬಳಿಕ ಭೂಮಿಗೆ ಬರುವ ಜೋಕುಮಾರ ಸ್ವಾಮಿ ಬರುತ್ತಾನೆ ಎಂಬ ನಂಬಿಕೆ ಇದೆ. ಗಣೇಶ ಹಬ್ಬದ ಬಳಿಕ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯನ್ನು ಇಟ್ಟುಕೊಂಡು ಮನೆ ಮನೆಗೆ ಮಹಿಳೆಯರು ಬರುತ್ತಾರೆ. ಹಿಂದಿನ ಕಾಲದಿಂದಲೂ ಬಂದಿರುವ ವಾಡಿಕೆ ಇದಾಗಿದೆ.
ಇದನ್ನೂ ಓದಿ:ಪವಿತ್ರ ಗೌಡ ಗೇಮ್ ಪ್ಲಾನ್ ಚೇಂಜ್; ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಾಪಸ್.. ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us