ಬೆಟ್ಟ ಹತ್ತುವ ಭಕ್ತರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ
6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆ ಬೋನಿಗೆ ಬಿತ್ತು
ಪಾದಚಾರಿ ಮಾರ್ಗದಲ್ಲಿ ಹೋಗುವವರಿಗೆ ಕೊನೆಗೂ ನಿಟ್ಟುಸಿರು
ತಿರುಮಲ: ತಿರುಪತಿ ಬೆಟ್ಟ ಹತ್ತುವ ಭಕ್ತರ ಆತಂಕಕ್ಕೆ ಕಾರಣವಾಗಿದ್ದ ಮತ್ತೊಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಇದೇ ಆಗಸ್ಟ್ 12ರಂದು ತಿರುಮಲ ಪಾದಚಾರಿ ಮಾರ್ಗದಲ್ಲಿ 6 ವರ್ಷದ ಬಾಲಕಿಯನ್ನು ಚಿರತೆ ಕಾಡಿಗೆ ಹೊತ್ತೊಯ್ದು ಹತ್ಯೆಗೈದಿತ್ತು. ಈ ಘಟನೆ ತಿಮ್ಮಪ್ಪನ ಭಕ್ತರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಇದಾದ ಬಳಿಕ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರೋ TTD ಹಾಗೂ ಅರಣ್ಯ ಸಿಬ್ಬಂದಿ ಚಿರತೆ ಹಿಡಿಯೋ ಕಾರ್ಯಾಚರಣೆ ನಡೆಸಿತ್ತು.
ಕಳೆದ ಸೋಮವಾರ ಒಂದು ಚಿರತೆ ಬೋನಿಗೆ ಬಿದ್ದಿತ್ತು. ಇಂದು ತಿರುಮಲದ ನರಸಿಂಹಸ್ವಾಮಿ ದೇವಾಲಯದ ಬಳಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದ್ದು, ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಕರಡಿ ಸೇರಿದಂತೆ ಇನ್ನೂ ಕೆಲ ವನ್ಯಜೀವಿಗಳು ದಾಳಿ ಮಾಡುವ ಭಯವಿದೆ. ಹೀಗಾಗಿ ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಭಕ್ತರಿಗೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ: Tirupati: ತಿರುಪತಿ ಬೆಟ್ಟ ಹತ್ತುವ ಭಕ್ತರೇ ಎಚ್ಚರ; 6 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಿರತೆ ದಾಳಿ ಬಳಿಕ ಹೊಸ ರೂಲ್ಸ್ ಅನ್ವಯ!
ಆರು ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿದ ಬಳಿಕ ತಿರುಮಲದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ತಿರುಮಲಕ್ಕೆ ಹೋಗುವವರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಹೋಗಬೇಕು. ರಾತ್ರಿ ವೇಳೆ ಬೈಕ್ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ. ಸದ್ಯ ಪಾದಚಾರಿ ಮಾರ್ಗದಲ್ಲಿ ಹೋಗುವ ಭಕ್ತರು ತಂಡ, ತಂಡಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇಷ್ಟು ದಿನ ಭಕ್ತರನ್ನು ಕಾಡುತ್ತಿದ್ದ 2 ಚಿರತೆಗಳು ಬೋನಿಗೆ ಬಿದ್ದಿದ್ದು ಆತಂಕ ಸ್ವಲ್ಪ ದೂರವಾಗಿದೆ.
ತಿರುಪತಿ ಬೆನ್ನಲ್ಲೇ ಶ್ರೀಶೈಲಂನಲ್ಲೂ ಚಿರತೆ ಪ್ರತ್ಯಕ್ಷ!
ತಿರುಪತಿ ಆಯ್ತು ಈಗ ಶ್ರೀಶೈಲಂನಲ್ಲೂ ಚಿರತೆ ದಾಳಿಯ ಭೀತಿ ಎದುರಾಗಿದೆ. ಶ್ರೀಶೈಲಂ ದೇವಾಲಯದ ಸಮೀಪವಿರುವ ಕಾಟೇಜ್‌ಗಳ ಬಳಿ ಚಿರತೆ ಕಾಣಿಸಿಕೊಂಡಿದೆ. ಭಕ್ತರು ಚಿರತೆಯ ಫೋಟೋಗಳನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದಿದ್ದು ವೈರಲ್ ಆಗಿವೆ. ಚಿರತೆ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಐದು ಚಿರತೆಗಳು ರಿಂಗ್ ರಸ್ತೆ ಮತ್ತು ಸುತ್ತಮುತ್ತ ನುಗ್ಗಿವೆ ಎಂದು ತಿಳಿದುಬಂದಿದೆ. ಶ್ರೀಶೈಲಂನಲ್ಲಿ ಚಿರತೆ ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
The #CCTV footage, how the Leopard was trapped in a cage at Tirumala hills, by the forest officials.#LEOPARD #Tirumala #Tirupati #AndhraPradesh pic.twitter.com/Hs2CD2Dsdr
— Surya Reddy (@jsuryareddy) August 17, 2023