newsfirstkannada.com

Government Jobs: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರೋರಿಗೆ ಗುಡ್​​ನ್ಯೂಸ್​ ಕೊಟ್ಟ ಸಿಎಂ ಸಿದ್ದು!

Share :

27-06-2023

    ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​ ಕೊಟ್ಟ ಸಿಎಂ ಸಿದ್ದರಾಮಯ್ಯ

    ಸದ್ಯದಲ್ಲೇ ಖಾಲಿ ಇರೋ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದ ಸಿಎಂ

    ಡಿಗ್ರೀ, ಮಾಸ್ಟರ್​ ಡಿಗ್ರೀ, ಐಟಿಐ, ಡಿಪ್ಲೋಮಾ, ಪಿಯು ಮಾಡಿದವರಿಗೂ ಗುಡ್​ನ್ಯೂಸ್​​​

ಬೆಂಗಳೂರು: ಸರ್ಕಾರಿ ಕೆಲಸ ಬೇಡ ಎನ್ನುವವರೇ ಇಲ್ಲ. ಜೀವನ ಉತ್ತಮವಾಗಿ ಸಾಗಿಸಬೇಕೆಂದರೆ ಸರ್ಕಾರಿ ಕೆಲಸ ಬೇಕೇ ಬೇಕು ಎಂಬುದು ಜನರ ನಂಬಿಕೆ. ಸರ್ಕಾರಿ ಕೆಲಸ ಪಡೆಯಲು ಯೋಗ ಇರಬೇಕು ಎನ್ನುವ ಮಾತಿದೆ. ಏಕೆಂದರೆ, ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಡೌಟ್​​. ಕೆಲವೇ ಕೆಲವರು ಮಾತ್ರ ಸರ್ಕಾರಿ ಕೆಲಸ ಪಡೆಯಲು ಸಾಧ್ಯ. ಸರ್ಕಾರಿ ಕೆಲಸ ಪಡೆಯಲು ಜನ ಹಲವಾರು ರೀತಿಯಲ್ಲಿ ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾರೆ. ಅದಕ್ಕಾಗಿ ವರ್ಷಗಟ್ಟಲೇ ಕೋಚಿಂಗ್​ಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಕಾಯುತ್ತಲೇ ಇರುತ್ತಾರೆ.

ಹೀಗೆ ಸರ್ಕಾರಿ ಉದ್ಯೋಗಕ್ಕಾಗಿ ಹಲವು ದಿನಗಳಿಂದ ತಯಾರಿ ನಡೆಸಿಕೊಳ್ಳುತ್ತಿರೋ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಸಿಹಿಸುದ್ದಿಯೊಂದು ನೀಡಿದೆ. ಸದ್ಯದಲ್ಲೇ ಖಾಲಿ ಇರೋ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿದ ಸಿಎಂ ಸಿದ್ದರಾಮಯ್ಯ, 2.50 ಲಕ್ಷ ಖಾಲಿ ಹುದ್ದೆಗಳನ್ನು ಒಂದೇ ಸಲಕ್ಕೆ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರೆಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59,000 ಕೋಟಿ ರೂ. ಬೇಕಿದೆ. ಈ ಹಣವನ್ನು ಖರ್ಚು ಮಾಡಲು ನಾವು ಸಿದ್ಧರಿದ್ದು ನಮ್ಮ ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದರು.

2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Government Jobs: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರೋರಿಗೆ ಗುಡ್​​ನ್ಯೂಸ್​ ಕೊಟ್ಟ ಸಿಎಂ ಸಿದ್ದು!

https://newsfirstlive.com/wp-content/uploads/2023/06/Siddu_DKS-5.jpg

Load More