ನಮ್ಮ ಮೆಟ್ರೋ ನಿಗಮದಿಂದ ಗ್ರಾಹಕರ ತೃಪ್ತಿ ಸಮೀಕ್ಷೆ!
ನಮ್ಮ ಮೆಟ್ರೋ ನೀಡುತ್ತಿರೋ ಸುವರ್ಣಾವಕಾಶ ಇದು
ಪ್ರಯಾಣಿಕರ ಅಭಿಪ್ರಾಯ ತಿಳಿದುಕೊಳ್ಳಲು ಮುಂದಾದ BMRCL
ಬೆಂಗಳೂರು: ಡಿಯರ್ ಪ್ಯಾಸೆಂಜರ್ಸ್.. ನಿಮ್ಮ ಮೆಟ್ರೋನ ಮತ್ತಷ್ಟು ಪ್ರಯಾಣಿಕ ಸ್ನೇಹಿ ಮಾಡಿಕೊಳ್ಳಲು ನಿಮಗಿದೆ ಗೋಲ್ಡನ್ ಆಪರ್ಚುನಿಟಿ.. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ.. ನಿಮ್ಮ ಮೆಟ್ರೋ ಸಂಚಾರ ಮತ್ತಷ್ಟು ಸುಗಮಗೊಳಿಸಿ.. ಹೀಗೊಂದು ಅನೌನ್ಸ್ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ.
ಯೆಸ್.. ಇದು ನಿಮ್ಮ ಮೆಟ್ರೋ ನಿಮಗೆ ಕೊಡ್ತಿರೋ ಸುವರ್ಣಾವಕಾಶ.. ಪ್ರತಿನಿತ್ಯ ಆಫೀಸು, ಕಾಲೇಜು ಅಂತ ಮೆಟ್ರೋ ಏರಿ ಹೊರಡುವ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳೋಕೆ ಬಿಎಂಆರ್ಸಿಎಲ್ ಮುಂದಾಗಿದೆ.. ಪ್ರಯಾಣಿಕರಿಗೆ ಟಾಸ್ಕ್ ಕೊಟ್ಟು ಮೆಟ್ರೋ ಸೇವೆ ಬಗ್ಗೆ ಅವರಿಗೆಷ್ಟು ತೃಪ್ತಿ ಇದೆ ಅಂತ ತಿಳಿದುಕೊಳ್ಳೋಕೆ ಪ್ಲಾನ್ ಮಾಡಿದೆ.
ಹೌದು, ಜನರಿಂದಲೇ ಬದಲಾವಣೆ ಬಯಸ್ತಿರೋ ಬಿಎಂಆರ್ಸಿಎಲ್ 17 ಪ್ರಶ್ನೆಗಳನ್ನ ಹೊತ್ತು ತಂದಿದೆ. ಜನರು ಉತ್ತರ ಆಧರಿಸಿ ಬದಲಾವಣೆ ಮಾಡೋಕೆ ಚಿಂತನೆ ನಡೆಸಿದೆ. ಹೀಗಾಗಿ ಆನ್ ಲೈನ್ನಲ್ಲಿ ‘ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಸರ್ವೇ’ ಲಿಂಕ್ ಮೂಲಕ ‘ಗ್ರಾಹಕ ತೃಪ್ತಿ ಸಮೀಕ್ಷೆ’ ಶುರು ಮಾಡಿದೆ. ಜುಲೈ 15ರವರೆಗೆ ಈ ಸರ್ವೆ ನಡೆಯಲಿದ್ದು, ಮೆಟ್ರೋದ ಪ್ರಯಾಣ, ನಿಲ್ದಾಣದ ಭದ್ರತೆ, ಪ್ರಯಾಣಿಕರ ಸೌಲಭ್ಯ, ಸೇರಿ ಹಲವು ವಿಚಾರಗಳಲ್ಲಿ ಸಲಹೆ, ಅಭಿಪ್ರಾಯ ಪಡೆಯಲು ಈ ಸಮೀಕ್ಷೆ ನಡೆಸಲಾಗ್ತಿದೆ ಅಂತ ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರು ಸಲಹೆ ನಿಡೋದು ಹೇಗೆ ?
ನಮ್ಮ ಮೆಟ್ರೋ ನಿಗಮದ ಗ್ರಾಹಕ ತೃಪ್ತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಪ್ರಯಾಣಿಕರು ಮೊದಲಿಗೆ https://kannada.bmrc.co.in/#/ ವೆಬ್ಸೈಟ್ಗೆ ಭೇಟಿ ನೀಡಿ. ಬಳಿಕ ಅಧಿಕೃತ ವೆಬ್ಸೈಟ್ನಲ್ಲಿ ‘ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಸರ್ವೇ ಲಿಂಕ್ ನೀಡಲಾಗಿದೆ. ಅದ್ರಂತೆ BMRCL ಟ್ವಿಟರ್ ಹ್ಯಾಂಡಲ್ನಲ್ಲೂ ಈ ಲಿಂಕ್ ಇರಲಿದೆ. ಹೀಗಾಗಿ ಪ್ರಯಾಣಿಕರು ತಮ್ಮ ಇ-ಮೇಲ್ ಐಡಿ ಮೂಲಕ ಗೂಗಲ್ ಫಾರ್ಮ್ಗೆ ಹೋಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇದಿಷ್ಟೇ ಅಲ್ಲದೆ ಆನ್ಲೈನ್ ಸಮೀಕ್ಷೆಯಲ್ಲಿ ನೀಡಲಾಗಿರೋ 17 ಪ್ರಶ್ನೆಗಳಿಗೆ ಪ್ರಯಾಣಿಕರು ಉತ್ತರಿಸಿ, ಬಳಿಕ ಕೊಟ್ಟಿರೋ ಪ್ರಶ್ನೆಗಳಿಗೆ 5 ಸ್ಟಾರ್ ರೇಟಿಂಗ್ ಕೊಡಬಹುದಾಗಿದೆ.
ಮೊದಲ ಮೈಲ್, ಕೊನೆಯ ನಿಲ್ದಾಣಗಳ ಸಂಪರ್ಕದ ವ್ಯವಸ್ಥೆ ಜನರು ಬಳಸುವ ಮೆಟ್ರೋ ಸಂಚಾರದ ಉದ್ದೇಶ, ಪುರುಷ, ಮಹಿಳೆಯರು ಯಾವ ಮಯೋಮಾನದವರು ಹೆಚ್ಚಾಗಿ ಸಂಚರಿಸುತ್ತಿದ್ದಾರೆ ಎಂಬ ಬಗೆಗಿನ ಪ್ರಶ್ನೆಗಳಿವೆ. ಹಾಗೆಯೇ ಈಗಿನ ಮೆಟ್ರೋ ವ್ಯವಸ್ಥೆ ಸೇವೆ, ಸಮಯ ಪಾಲನೆ, ನಿಲ್ದಾಣಗಳ ನಿರ್ವಹಣೆ, ಮೊದಲ ಮೈಲ್ ಹಾಗೂ ಕೊನೆಯ ನಿಲ್ದಾಣಗಳ ಸಂಪರ್ಕದ ವ್ಯವಸ್ಥೆ ಹೇಗಿದೆ ಅನ್ನೋ ಬಗ್ಗೆ ಪ್ರತಿಕ್ರಿಯೆ ನೀಡಲು 5 ರೇಟಿಂಗ್ ಕೊಡಬಹುದಾಗಿದೆ. ಈ ಹಿಂದೆಯೂ ಕೋವಿಡ್ ಸಂದರ್ಭದಲ್ಲಿ ಬಿಎಂಆರ್ಸಿಎಲ್ ಗ್ರಾಹರ ತೃಪ್ತಿ ಬಗ್ಗೆ ಸಮೀಕ್ಷೆ ನಡೆಸಿದ್ದು, ಸಮರ್ಪಕ ಉತ್ತರ ಸಿಗದ ಕಾರಣ ಸದ್ಯ ಮತ್ತೊಮ್ಮೆ ಸಮೀಕ್ಷೆಗೆ ಮುಂದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ