newsfirstkannada.com

ಸಂಜಯ್​ ಬಂಗಾರ್​​, ಹೆಸನ್​​ಗೆ ಕೊಕ್​ ಬೆನ್ನಲ್ಲೇ ಆರ್​ಸಿಬಿ ಫ್ಯಾನ್ಸ್​​ಗೆ ಗುಡ್​ನ್ಯೂಸ್​​; ಎಬಿಡಿಗೆ ಮಹತ್ವದ ಜವಾಬ್ದಾರಿ

Share :

08-08-2023

    ಸಂಜಯ್​ ಬಂಗಾರ್​​, ಮೈಕ್​​​ ಹೆಸನ್​​ಗೆ ಕೊಕ್​

    ಈ ಬೆನ್ನಲ್ಲೇ ಆರ್​ಸಿಬಿಯಿಂದ ಗುಡ್​ನ್ಯೂಸ್​​..!

    ಎಬಿ ಡಿವಿಲಿಯರ್ಸ್​​ಗೆ ಮಹತ್ವದ ಜವಾಬ್ದಾರಿ

ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ನಲ್ಲಿ ನಾಕೌಟ್​​ ಹಂತದಲ್ಲೇ ಔಟ್​ ಆದ ಕಾರಣ ರಾಯಲ್​​ ​ಚಾಲೆಂಜರ್ಸ್​ ಬೆಂಗಳೂರು ಟೀಂ ಪ್ಲೇ ಆಫ್​​ ಪ್ರವೇಶಿಸಲಿಲ್ಲ. ಹೀಗಾಗಿ ಹಿಂದಿನ ಸೀಸನ್​ನಲ್ಲೂ ಐಪಿಎಲ್​​ ಕಪ್​ ಗೆಲ್ಲುವ ಆರ್​ಸಿಬಿ ಕನಸು ಕನಸಾಗಿಯೇ ಉಳಿಯಿತು.

ಇನ್ನು, ಈ ಬಾರಿ ಹೇಗಾದ್ರೂ ಮಾಡಿ ಕಪ್​​ ಗೆಲ್ಲಲೇಬೇಕು ಎಂದು ಆರ್​ಸಿಬಿ ಜಿದ್ದಿಗೆ ಬಿದ್ದಿದೆ. ಆದ್ದರಿಂದ ಆರ್​​ಸಿಬಿ ಹೆಡ್​​ ​ಕೋಚ್​ ಸ್ಥಾನದಿಂದ ಸಂಜಯ್​​ ಬಂಗಾರ್​, ಡೈರೆಕ್ಟರ್​​​ ಪೋಸ್ಟ್​ನಿಂದ ಮೈಕ್​ ಹೆಸನ್​ಗೆ ಕೊಕ್​ ನೀಡಲಾಗಿದೆ. ಈ ಬೆನ್ನಲ್ಲೇ ಆರ್​ಸಿಬಿ ತಂಡದ ಹೆಡ್​ ಕೋಚ್​ ಆಗಿ ಆ್ಯಂಡಿ ಫ್ಲವರ್​​​ ಅವರನ್ನು ನೇಮಿಸಲಾಗಿದೆ. ಜತೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೆಂಟರ್​​​ ಆಗಿ ಐಪಿಎಲ್​​ 360 ಡಿಗ್ರೀ ಎಂದೆ ಖ್ಯಾತಿಯಾದ ಎಬಿ ಡಿವಿಲಿಯರ್ಸ್​​​ಗೆ ಮಣೆ ಹಾಕುವ ಸಾಧ್ಯತೆ ಇದೆ.

ಎಬಿಡಿ ಎರಡು ವರ್ಷಗಳ ಹಿಂದೆಯೇ ಎಲ್ಲಾ ಮಾದರಿ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ರು. 2021 ಅಕ್ಟೋಬರ್​​ ತಿಂಗಳಲ್ಲಿ ಕೆಕೆಆರ್​​ ವಿರುದ್ಧ ಆಡಿದ್ದೇ ಎಬಿಡಿ ಕೊನೇ ಮ್ಯಾಚ್​. ಇದಾದ ಬಳಿಕ ಕಳೆದ ಸೀಸನ್​​ನಲ್ಲೇ ಆರ್​ಸಿಬಿ ತಂಡದ ಮೆಂಟರ್​​ ಆಗಿ ಎಬಿಡಿ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಲಾಸ್ಟ್​​ 15 ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ಗಳಿಂದ ಆಡುತ್ತಿರೋ ರಾಯಲ್​​​​ ಚಾಲೆಂಜರ್ಸ್​ ಬೆಂಗಳೂರು ತಂಡ ಒಮ್ಮೆಯೂ ಕಪ್​ ಗೆದ್ದಿಲ್ಲ. ಈ ಬಾರಿಯಾದ್ರೂ ಕಪ್​ ಗೆಲ್ಲುತ್ತಾ ಎಂದು ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಂಜಯ್​ ಬಂಗಾರ್​​, ಹೆಸನ್​​ಗೆ ಕೊಕ್​ ಬೆನ್ನಲ್ಲೇ ಆರ್​ಸಿಬಿ ಫ್ಯಾನ್ಸ್​​ಗೆ ಗುಡ್​ನ್ಯೂಸ್​​; ಎಬಿಡಿಗೆ ಮಹತ್ವದ ಜವಾಬ್ದಾರಿ

https://newsfirstlive.com/wp-content/uploads/2023/07/Kohli_ABD.jpg

Load More