newsfirstkannada.com

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್.. 1 ಅಲ್ಲ, 2 ಅಲ್ಲ, ಬರೋಬ್ಬರಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ

Share :

06-09-2023

    ಎಸ್​​ಎಸ್​​ಎಲ್​ಸಿ ಪರೀಕ್ಷಾ ಪದ್ಧತಿಗೆ ಮೇಜರ್ ಸರ್ಜರಿ

    ಶಿಕ್ಷಕರ ದಿನದಂದೇ ಸಚಿವ ಮಧು ಬಂಗಾರಪ್ಪ ಘೋಷಣೆ

    SSLC, PUC ವಿದ್ಯಾರ್ಥಿಗಳಿಗೆ ಒತ್ತಡ ಆಗದಂತೆ ಶಿಕ್ಷಣ ಇಲಾಖೆ ಕ್ರಮ!

ಬೆಂಗಳೂರು: ಎಸ್​​ಎಸ್​​ಎಲ್​ಸಿ ಮತ್ತು ಪಿಯುಸಿ ಪರೀಕ್ಷಾ ವಿಧಾನ ಬದಲಾಗುತ್ತೆ. ವಿದ್ಯಾರ್ಥಿಗಳಿಗೆ ಆಗುತ್ತಿರೋ ಒತ್ತಡ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಮೇಜರ್​ ಸರ್ಜರಿಗೆ ಮುಂದಾಗಿದೆ ಅಂತ ನ್ಯೂಸ್​ ಫಸ್ಟ್​ ಈ ಹಿಂದೆಯೇ​ ವರದಿ ಬಿತ್ತರಿಸಿತ್ತು. ಇದೀಗ ನ್ಯೂಸ್​ ಫಸ್ಟ್​ ಕೊಟ್ಟಿದ್ದ ವರದಿ ಆದೇಶವಾಗಿ ಹೊರಬಿದ್ದಿದ್ದು ಇದು ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಎಸ್​​ಎಸ್​​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಖ್ಯ ಘಟ್ಟ. ಹೀಗಾಗಿ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಪಾಸ್​ ಆಗಲೇಬೇಕು. ಱಂಕ್​ ಬರಲೇಬೇಕು ಅಂತ ಒತ್ತಡ ಹಾಕ್ತಾರೆ. ಆದ್ರೆ ಇನ್ಮುಂದೆ ಇದರ ಅವಶ್ಯಕಥೆ ಇಲ್ಲ. ಒಂದು ಬಾರಿ ಫೇಲ್​ ಆದರೆ ಒಂದು ವರ್ಷ ವೇಸ್ಟ್​ ಅನ್ನೋ ಮಾತನ್ನ ಆಡಂಗಿಲ್ಲ.

ಒಂದಲ್ಲ ಎರಡಲ್ಲ.. ಮೂರು ಬಾರಿ ಬರೆಯಬಹುದು ಪರೀಕ್ಷೆ

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವತಿಯಿಂದ ಎಸ್.ಎಸ್.ಎಲ್. ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಈ ಪ್ರಕಾರ ಒಮ್ಮೆ ಫೇಲ್​ ಆದರೆ ಅಥವಾ ಕಡಿಮೆ ಅಂಕ ಬಂದ್ರೆ ಒಂದಲ್ಲ ಎರಡಲ್ಲ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಇತ್ತೀಚಿಗಷ್ಟೇ ಪಿಯುಸಿ ವಿದ್ಯಾರ್ಥಿಗಳಿಗೆ ಎರೆಡು ಪೂರಕ ಪರೀಕ್ಷೆ ಮಾಡಿ ಇಲಾಖೆ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. ಇದರ ಬೆನ್ನಲ್ಲೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೂ ಎರಡೆರಡು ಬಾರಿ ಪರೀಕ್ಷೆ ಮಾಡಲು ಮುಂದಾಗಿದೆ. ಈ ಬಗ್ಗೆ ಶಿಕ್ಷಕರ ದಿನದಂದೇ ಸಚಿವರು ಘೋಷಣೆ ಮಾಡಿದ್ದು, ಅಧಿಕೃತ ಆದೇಶವೂ ಹೊರಬಿದ್ದಿದೆ.

ಪೂರಕ ಪರೀಕ್ಷೆ ಅಂತ ಪರಿಗಣನೆ​ ಮಾಡಲ್ಲ
ವಾರ್ಷಿಕ ಪರೀಕ್ಷೆ 1,2,3 ಎಂದು ಮರುನಾಮಕಣ

ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು. ಯಾವುದನ್ನೂ ಪೂರಕ ಪರೀಕ್ಷೆ ಅಂತ ಹೇಳೋ ಹಾಗಿಲ್ಲ. ಎಲ್ಲವೂ ವಾರ್ಷಿಕ ಪರೀಕ್ಷೆ ಅಂತಲೇ ಪರಿಗಣಿಸಬೇಕು ಅಂತ ಇಲಾಖೆಗೆ ಸೂಚನೆ ಬಂದಿದೆ. ಅದನ್ನ ವಾರ್ಷಿಕ ಪರೀಕ್ಷೆ 1 ವಾರ್ಷಿಕ ಪರೀಕ್ಷೆ 2 ಮತ್ತು ವಾರ್ಷಿಕ ಪರೀಕ್ಷೆ ಮೂರು ಎಂದು ಕರೆಯಲಾಗುತ್ತೆ. ಅಷ್ಟೇ ಅಲ್ಲ ಈ ಮೂರು ಪರೀಕ್ಷೆಗಳಲ್ಲಿ ಯಾವ ವಿಷಯದಲ್ಲಿ ಒಳ್ಳೆಯ ಅಂಕ ಅಂತ ವಿದ್ಯಾರ್ಥಿ ಬಯಸುತ್ತಾನೋ ಅದನ್ನೇ ಅಂಕಪಟ್ಟಿಯಲ್ಲಿ ಮುದ್ರಿಸಲಾಗುವುದು.
ಎಸ್​ಎಸ್​​ಎಲ್​ಸಿಯ ಮೊದಲ ಪರೀಕ್ಷೆ ಮಾರ್ಚ್​​ 1ಕ್ಕೆ ಆರಂಭವಾಗಿ ಮಾರ್ಚ್​ 25ಕ್ಕೆ ಮುಗಿಯುತ್ತೆ. ಇದರ ಫಲಿತಾಂಶ ಏಪ್ರಿಲ್​​ 22ರಂದು ಬರಲಿದೆ. ಎರಡನೇ ಪರೀಕ್ಷೆ ಮೇ15ಕ್ಕೆ ಶುರುವಾದ್ರೆ ಜೂನ್ 5ಕ್ಕೆ ಮುಗಿಯಲಿದ್ದು ಜೂನ್ 21ರಂದು ಫಲಿತಾಂಶ ಬರಲಿದೆ. ಇನ್ನು ಮೂರನೇ ಪರೀಕ್ಷೆ ಜುಲೈ12 ರಿಂದ ಜುಲೈ 30ರವರೆಗೂ ನಡೆಯಲಿದ್ದು ಆಗಸ್ಟ್16 ರಂದು ರಿಸಲ್ಟ್​ ಬರಲಿದೆ.

ಮೊದಲ ಪರೀಕ್ಷೆ ಮಾರ್ಚ್​ 30ಕ್ಕೆ ಆರಂಭವಾಗಿ ಏಪ್ರಿಲ್​ 15ರಂದು ಮುಗಿದ್ರೆ, ಮೇ 8ಕ್ಕೆ ಫಲಿತಾಂಶ ಹೊರಬೀಳುತ್ತೆ. ಎರಡನೇ ಪರೀಕ್ಷೆ ಜೂನ್​ 12ಕ್ಕೆ ಆರಂಭವಾಗಿ ಜೂನ್​ 19ಕ್ಕೆ ಮುಗಿಯುತ್ತೆ. ಬಳಿಕ ಜೂನ್ 29ಕ್ಕೆ ಫಲಿತಾಂಶ ಹೊರಬೀಳಲಿದೆ. ಇನ್ನು ಮೂರನೇ ಪರೀಕ್ಷೆ ಜುಲೈ 29 ಕ್ಕೆ ಆರಂಭವಾದ್ರೆ ಆಗಸ್ಟ್​ 5ಕ್ಕೆ ಮುಗಿಯಲಿದೆ. ಆಗಸ್ಟ್ 19ಕ್ಕೆ ಫಲಿತಾಂಶ ಹೊರ ಬೀಳಲಿದೆ. ವಿದ್ಯಾರ್ಥಿಗಳಿಗೆ ಒತ್ತಡವಾಗಬಾರದು ಅನ್ನೋ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸಿದೆ. ಹಾಗೂ ಪೂರಕ ಪರೀಕ್ಷೆ ಅನ್ನೋ ಹಳೇ ಹೆಸರನ್ನ ತೆಗೆದುಹಾಕಿದೆ. ಇದ್ರಿಂದ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೆ ಸ್ವಲ್ಪ ರಿಲ್ಯಾಕ್ಸ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್.. 1 ಅಲ್ಲ, 2 ಅಲ್ಲ, ಬರೋಬ್ಬರಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ

https://newsfirstlive.com/wp-content/uploads/2023/07/school-1-2.jpg

Load More