newsfirstkannada.com

ಮಹಿಳೆಯರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ಸಿಎಂ ಸಿದ್ದರಾಮಯ್ಯ; ಏನದು..?

Share :

16-08-2023

    ಶಕ್ತಿ ಸ್ಕೀಮ್​​, ಗೃಹಲಕ್ಷ್ಮೀ ಬೆನ್ನಲ್ಲೇ ಮತ್ತೊಂದು ಗುಡ್​ನ್ಯೂಸ್​

    ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್​ ಸರ್ಕಾರದಿಂದ ಸಿಹಿಸುದ್ದಿ

    ಮುಂದಿನ ತಿಂಗಳಿನಿಂದಲೇ ಈ ಕೆಲಸ ಮಾಡಲಿರೋ ಸರ್ಕಾರ

ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಕೊನೆಗೂ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದೆ. ಈ ಪೈಕಿ ಮೊದಲು ಜಾರಿ ಮಾಡಿದ್ದೇ ಶಕ್ತಿ ಯೋಜನೆ.

ಯೆಸ್​, ಕಾಂಗ್ರೆಸ್​ ಸರ್ಕಾರ ಜಾರಿಗೊಳಿಸಿದ ಶಕ್ತಿ ಸ್ಕೀಮ್​​ಗೆ ಇಡೀ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಹೆಣ್ಣುಮಕ್ಕಳು ಫ್ರೀ ಬಸ್​ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮಿಷ್ಟದ ಪ್ರವಾಸಿ ತಾಣಗಳಿಗೆ ವೀಕೆಂಡ್​ ಬಂದರೆ ಹೋಗಿ ಬರುತ್ತಾರೆ. ಇದರ ಮಧ್ಯೆ ಗೃಹಲಕ್ಷ್ಮೀ ಯೋಜನೆ ಕೂಡ ಜಾರಿ ಆಗುತ್ತಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಮಹಿಳೆಯರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಕಾಂಗ್ರೆಸ್​ ಕರ್ನಾಟಕ, ಹೆಣ್ಣು ಮಕ್ಕಳಿಗೆ ಅನುಕೂಲಕರವಾಗಿದ್ದ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಶುಚಿ ಯೋಜನೆಗೆ ಬಿಜೆಪಿ ಆಡಳಿತದಲ್ಲಿ ಗ್ರಹಣ ಹಿಡಿದಿತ್ತು. ಮಹಿಳೆಯರ ಬಗ್ಗೆ ಗೌರವ, ಕಾಳಜಿ ಇಲ್ಲದ ಬಿಜೆಪಿ ಶುಚಿ ಯೋಜನೆಯನ್ನು ನಿರ್ಲಕ್ಷಿಸಿತ್ತು. ಈಗ ನಮ್ಮ ಸರ್ಕಾರ ಶುಚಿ ಯೋಜನೆಗಿದ್ದ ಅಡೆತಡೆಗಳನ್ನು ನಿವಾರಿಸಿ ಶಾಲಾ ಕಾಲೇಜಿನ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಬರೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ಸಿಎಂ ಸಿದ್ದರಾಮಯ್ಯ; ಏನದು..?

https://newsfirstlive.com/wp-content/uploads/2023/08/Siddu_1234.jpg

Load More