newsfirstkannada.com

ಸರ್ಕಾರದಿಂದ ಮಹಿಳೆಯರಿಗೆ ಗುಡ್​​​ನ್ಯೂಸ್​​; 2 ಸಾವಿರ ಯಾವಾಗ ಸಿಗುತ್ತೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ!

Share :

24-06-2023

    ಲಕ್ಷ್ಮೀಯರ ಖಾತೆಗೆ ಸದ್ಯದಲ್ಲೇ ‘ಗೃಹಲಕ್ಷ್ಮೀ’ ಎಂಟ್ರಿ!

    ಜೂನ್ 27ಕ್ಕೆ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಮುಹೂರ್ತ

    1 ರೂಪಾಯಿ ಖರ್ಚಿಲ್ಲ.. ಅರ್ಜಿ ಸಲ್ಲಿಕೆಗೆ ಟೆನ್ಶನ್​ ಇಲ್ಲ!

ಮೈಸೂರು: ಸರ್ಕಾರದಿಂದ ಜನತೆಗೆ ಮತ್ತೊಂದು ಗ್ಯಾರಂಟಿ ಗುಡ್​ನ್ಯೂಸ್​ ಸಿಕ್ಕಿದೆ. ಮನೆ ಯಜಮಾನಿಯರ ಖಾತೆಗೆ ಲಕ್ಷ್ಮೀ ಸಂದಾಯ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆಂದೇ ಪ್ರತ್ಯೇಕ ಌಪ್​ ರಚಿಸಿದ್ದು ಎಲ್ಲಾ ಅಂದುಕೊಂಡಂತೆ ಆದ್ರೆ ಸ್ವಾತಂತ್ರೋತ್ಸವ ದಿನಕ್ಕೆ ಲಕ್ಷ್ಮೀಯರ ಖಾತೆಗೆ ಲಕ್ಷ್ಮೀಯ ಆಗಮನವಾಗಲಿದೆ.

ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್​ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್​ ಕೊಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್​ನಂತೆ ಓಡಾಡಿ ಅಂತ ನಾರಿಯರಿಗೆ ಫ್ರೀ ಬಸ್​ ಪ್ರಯಾಣ ಕಲ್ಪಿಸಿದ್ದ ಸರ್ಕಾರ ಈಗ ಖರ್ಚಿಗೆ ರಾಜ್ಯದ ಎಲ್ಲಾ ಗೃಹಗಳ ಲಕ್ಷ್ಮೀಯರ ಖಾತೆಗೆ ಹಣ ಹಾಕಲು ಮುಂದಾಗಿದೆ.

‘ಆಗಸ್ಟ್​ 16 ಅಥವಾ 17ರಂದು ಮನೆ ಯಜಮಾನಿ ಖಾತೆಗೆ ಹಣ’

ಜೂನ್ 27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ದಿನಾಂಕ ಘೋಷಿಸಲಾಗುತ್ತೆ ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಆಗಸ್ಟ್​ 16 ಅಥವಾ 17ರ ನಂತರ ಮನೆ ಯಜಮಾನಿ ಖಾತೆಗೆ ಹಣ ತಲುಪುತ್ತದೆ ಅಂತ ಹೇಳಿದ್ದಾರೆ.

‘ಅರ್ಜಿ ಸಲ್ಲಿಕೆಗೆ 1 ರೂಪಾಯಿ ಖರ್ಚು ಮಾಡಂಗಿಲ್ಲ’

ಇನ್ನು ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿದ್ದೇವೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ಆ್ಯಪ್ ತೋರಿಸುತ್ತೇವೆ. ನಂತರ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡುತ್ತೇವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರಲ್ಲ, ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ ಅಂತ ಸಚಿವೆ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಈಗಾಗಲೇ ಗೃಹ ಜ್ಯೋತಿಗಾಗಿ ಅರ್ಜಿ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ಕಚೇರಿಗಳ ಮುಂದೆ ಕಾಯುತ್ತಿದ್ದಾರೆ. ಹಲವು ದಿನಗಳಾದ್ರೂ ಸರ್ವರ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ಸರ್ಕಾರ ಗೃಹಲಕ್ಷ್ಮೀ ಯೋಜನೆಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುತ್ತಿದೆ. ಇದಕ್ಕಾದ್ರೂ ಸರ್ಕಾರ ಎಲ್ಲಾ ರೀತಿಯಲ್ಲಿ ಸನ್ನದ್ದವಾಗಿದೆಯಾ? ಅಥವಾ ಈ ಹೊಸ ಌಪ್​ ಕೂಡ ಅದೇ ಸಮಸ್ಯೆ ತಂದೊಡ್ಡುತ್ತಾ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದಿಂದ ಮಹಿಳೆಯರಿಗೆ ಗುಡ್​​​ನ್ಯೂಸ್​​; 2 ಸಾವಿರ ಯಾವಾಗ ಸಿಗುತ್ತೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ!

https://newsfirstlive.com/wp-content/uploads/2023/06/Gruha-Lakshmi-2.jpg

Load More