newsfirstkannada.com

ರಾಜ್ಯದ ಜನತೆಗೆ ಶಾಕ್​​; ಗ್ಯಾರಂಟಿಗೆ ಹಣ ಹೊಂದಿಸಲು ಸಿದ್ದು ಸರ್ಕಸ್​​; ಸರಕು & ಸೇವೆಗಳ ತೆರಿಗೆ ಏರಿಕೆ

Share :

08-07-2023

    14 ನೇ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ

    ಗ್ಯಾರಂಟಿಗಳು ಮಾತ್ರ ಗಟ್ಟಿ, ಉಳಿದವೆಲ್ಲವೂ ತುಟ್ಟಿ

    ಮದ್ಯಪ್ರಿಯರ ತಲೆಯ ಮೇಲೆ ಗ್ಯಾರಂಟಿಯ ಹೊರೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ಗ್ಯಾರಂಟಿಗಳಿಗೆ ಒತ್ತು ನೀಡಿ ಸರ್ವಸ್ಪರ್ಶಿ ಬಜೆಟ್‌ ಮಂಡಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ಹಣವನ್ನ ಯಥೇಚ್ಛವಾಗಿ ಹಂಚಿದ್ದಾರೆ. ಗ್ಯಾರಂಟಿಗಳ ಹೊರೆಯನ್ನ ಮದ್ಯ ಪ್ರಿಯರ ಮೇಲೆ ಹೊರೆಸಿದ್ದಾರೆ. ಅಲ್ಲದೆ, ವಾಣಿಜ್ಯ ತೆರಿಗೆ, ನೋಂದಣಿ, ಮುದ್ರಾಂಕ, ಸಾರಿಗೆ ಇಲಾಖೆಗೂ ಟಾರ್ಗೆಟ್​​​ ಹೆಚ್ಚಳ ಮಾಡಿದೆ.

ಯಾವೆಲ್ಲಾ ಸರಕು, ಸೇವೆಗಳ ತೆರಿಗೆ ಏರಿಕೆ ಆಗಿದೆ?

ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಈಗ ರಾಜ್ಯ ಸರ್ಕಾರ ತನ್ನ ತೆರಿಗೆ ಸಂಗ್ರಹ ಹೆಚ್ಚಿಸಿಕೊಳ್ಳಲು ಹೊಸ ಪ್ರಸ್ತಾವನೆ ಮುಂದಿಟ್ಟಿದೆ. 5 ಗ್ಯಾರಂಟಿಗಳ ಬಗ್ಗೆ ಸಿಎಂ ದೊಡ್ಡ ಹೇಳಿಕೆ ಏನೋ ಕೊಟ್ಟಿದ್ದಾರೆ. ಆದ್ರೆ, ಬಜೆಟ್​​ನಲ್ಲಿ ಅದರ ಪಾಲು ಬಹು ದೊಡ್ಡದು ಅನ್ನೋದು ಒಪ್ಪಲೇಬೇಕಾದ ಸತ್ಯ. ಹೀಗಾಗಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಕೆಗೆ ಸರ್ಕಾರ ಪ್ರಯಾಸ ಪಡ್ತೀರೋದು ಈ ಹೊಸ ತೆರಿಗೆ ಪ್ರಸ್ತಾವನೆಗಳು ಸಾಬೀತು ಪಡಿಸ್ತಿವೆ.

2023ನೇ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಹೊಸ ತೆರಿಗೆಗಳ ಪ್ರಸ್ತಾವನೆ ಮಾಡಿದ್ದಾರೆ. ಹಾಗಾದ್ರೆ ಯಾವ ಯಾವ ಕ್ಷೇತ್ರದಲ್ಲಿ ತೆರಿಗೆ ಹೆಚ್ಚಳವಾಗ್ತಿದೆ. ಯಾವ ಇಲಾಖೆಗೆ ಹೆಚ್ಚಿನ ತೆರಿಗೆ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ ಅನ್ನೋದನ್ನ ತೋರಿಸ್ತೀವಿ ನೋಡಿ. ಮುಖ್ಯವಾಗಿ ಅಬಕಾರಿ ತೆರಿಗೆ ಏರಿಕೆ ಮಾಡಲಾಗಿದ್ದು, ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಅಬಕಾರಿ ತೆರಿಗೆಯನ್ನ ಶೇ.20ರಷ್ಟು ಏರಿಕೆ ಮಾಡುವ ಮೂಲಕ ಮದ್ಯದ ದರ ಹೆಚ್ಚಿಸಿದ್ದಾರೆ. ಪ್ರತಿ ಸರ್ಕಾರಗಳು ಬಜೆಟ್ ಮಂಡಿಸಿದಾಗ ಅಬಕಾರಿ ಸುಂಕವನ್ನ ಏರಿಕೆ ಮಾಡುವುದು ಮಾಮೂಲಾಗಿದೆ.

ಮದ್ಯ ಪ್ರಿಯರಿಗೆ ಕಿಕ್​​!

ಮದ್ಯದ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿದೆ. ಹಾಲಿ ಇರುವ ದರಗಳ ಮೇಲೆ ಶೇ. 20ರಷ್ಟು ಹೆಚ್ಚಿಸಲು ಈಗ ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ. ಇನ್ಮುಂದೆ ಬಿಯರ್‍ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 175ರಿಂದ ಶೇಕಡಾ 185ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಈ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ಒಟ್ಟು 36 ಸಾವಿರ ಕೋಟಿ ರೂಪಾಯಿಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ಈ ಕಾರಣಕ್ಕೆ ಮೊತ್ತೊಮ್ಮೆ ಮದ್ಯದ ಬೆಲೆ ಆಗಸದಲ್ಲಿ ತೇಲಿಸಲಿದೆ. ಜೊತೆಗೆ ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೂ ಹೆಚ್ಚುವರಿ ಟಾರ್ಗೆಟ್​​ ನೀಡಲಾಗಿದೆ.

ಯಾವುದೆಲ್ಲಾ ದುಬಾರಿ!

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಈ ಸಾಲಿನ ನೋಂದಣಿ & ಮುದ್ರಾಂಕ ಇಲಾಖೆಗೆ 25,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಗುರಿ ನೀಡಿದೆ. ಜೊತೆಗೆ ಸಾರಿಗೆ ಇಲಾಖೆಗೂ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಪ್ರಸ್ತುತ ಆಯ್ದ ವಾಹನ ವರ್ಗಗಳಿಗೆ ವಿಧಿಸುವ ತೆರಿಗೆ ಪರಿಷ್ಕರಣೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. 2023-24ನೇ ಆರ್ಥಿಕ ವರ್ಷಕ್ಕೆ ಸಾರಿಗೆ ಇಲಾಖೆಗೆ ಒಟ್ಟು 11,500 ಕೋಟಿ ರೂಪಾಯಿಯ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ವಾಹನ ನೋಂದಣಿ ದುಬಾರಿ ಆಗಲಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಾಜಸ್ವ ಸಂಗ್ರಹಣೆ ಹೆಚ್ಚಿಸಲು ಅವಶ್ಯಕ ಸುಧಾರಣೆಗೆ ಮುಂದಾಗಿದೆ. 9,000 ಕೋಟಿ ರೂಪಾಯಿ ರಾಜಸ್ವದ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

ಒಟ್ಟಾರೆ, ಸಿದ್ದರಾಮಯ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳಿಗೆ 53 ಸಾವಿರ ಕೋಟಿ ರೂ. ಮೀಸಲಿಟ್ಟಿಟ್ಟು, ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ. ವಾಣಿಜ್ಯ ತೆರಿಗೆ ಇಲಾಖೆಗೆ ಟಾರ್ಗೆಟ್ ಹೆಚ್ಚಳ ಮಾಡಿದೆ.. ರಾಜ್ಯದ ವ್ಯಾಪ್ತಿಗೆ ಬರುವ ಅಬಕಾರಿ ತೆರಿಗೆಯನ್ನ ಏರಿಸಿದೆ. ಇನ್ನು ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಾದರೆ ಸಹಜವಾಗಿಯೇ ಆಸ್ತಿಗಳ ನೋಂದಣಿ ಶುಲ್ಕ ಏರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನತೆಗೆ ಶಾಕ್​​; ಗ್ಯಾರಂಟಿಗೆ ಹಣ ಹೊಂದಿಸಲು ಸಿದ್ದು ಸರ್ಕಸ್​​; ಸರಕು & ಸೇವೆಗಳ ತೆರಿಗೆ ಏರಿಕೆ

https://newsfirstlive.com/wp-content/uploads/2023/07/Siddu_1234.jpg

Load More