newsfirstkannada.com

Breaking News: ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿ ಅನಾಹುತ

Share :

05-06-2023

    ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿ ಅನಾಹುತ

    275 ಪ್ರಯಾಣಿಕರ ಬಲಿ ಪಡೆದ ದುರಂತ ಬೆನ್ನಲ್ಲೇ ಮತ್ತೊಂದು ದರಂತ

    ಒರಿಸ್ಸಾದ ಬರಘರ್​ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಅಪಘಾತ

275 ಪ್ರಯಾಣಿಕರ ಬಲಿ ಪಡೆದ ದುರಂತ ಬೆನ್ನಲ್ಲೇ ಒಡಿಶಾದಲ್ಲಿ ಮತ್ತೊಂದು ರೈಲು ಅವಘಡ ಸಂಭವಿಸಿದೆ. ಒರಿಸ್ಸಾದ ಬರಘರ್​ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಅಪಘಾತಕ್ಕೆ ಒಳಗಾಗಿದೆ.

ಹಳಿತಪ್ಪಿದ ಪರಿಣಾಮ ಗೂಡ್ಸ್​ ರೈಲಿನ ಐದು ಬೋಗಿಗಳು ಆಚೆ ಬಂದಿವೆ. ಗೂಡ್ಸ್ ರೈಲು ಲೈಂಮ್​ಸ್ಟೋನ್ (limestone) ಸಾಗಿಸುತ್ತಿತ್ತು ಎನ್ನಲಾಗಿದೆ. ದುರ್ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರಿಯಾಗಿಲ್ಲ. ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು, ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಜೂನ್ 2 ರಂದು ಬಾಲ್​ಸೋರ್​ನಲ್ಲಿ ಮೂರು ರೈಲುಗಳ ಸರಣಿ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ 275 ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. 1000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕ ಮಂದಿ ಸಾವು-ನೋವಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಗೂಡ್ಸ್​ ರೈಲು ಹಳಿ ತಪ್ಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿ ಅನಾಹುತ

https://newsfirstlive.com/wp-content/uploads/2023/06/2023-9.jpg

Load More