newsfirstkannada.com

ವಿಶೇಷ ಡೂಡಲ್​ ಗೇಮ್​ ರಚಿಸಿ ಪಾನಿಪುರಿಯನ್ನು ಸ್ಮರಿಸಿದ ಜನಪ್ರಿಯ ಗೂಗಲ್​!

Share :

12-07-2023

    ಗೂಗಲ್​ ಡೂಡಲ್​ ಪಾನಿಪುರಿಗಾಗಿ ಈ ದಿನವನ್ನ ಮೀಸಲಿಟ್ಟಿದೆ

    ಉತ್ತರ ಭಾರತದ ಜನಪ್ರಿಯ ಖಾದ್ಯ ಪಾನಿಪುರಿ ಗೇಮ್​ ರಚಿಸಿದ ಡೂಡಲ್​

    ಪಾನಿಪುರಿ ರಚಿಗೆ ಮಾರುಹೋದ ಡೂಡಲ್​.. ಏನು ಮಾಡಿದೆ ನೋಡಿ

ಭಾರತದ ಜನಪ್ರಿಯ ಖಾದ್ಯಗಳಲ್ಲಿ ಪಾನಿಪುರಿ ಕೂಡ ಒಂದು. ಸಖತ್​ ಟೇಸ್ಟ್​. ಯುವತಿಯರಿಗಂತೂ ಪಂಚಪ್ರಾಣ. ಎಲ್ಲೇ ಕಂಡರಂತೂ ಬಾಯಿ ಚಪ್ಪರಿಸದೆ ಇರಲಾರರು. ಆದರೀಗ ಭಾರತದ ಅದರಲ್ಲೂ ಉತ್ತರ ಭಾರತದ ಪ್ರಸಿದ್ಧ ಖಾದ್ಯ ಪಾನಿಪುರಿಯನ್ನು ಜನಪ್ರಿಯ ಗೂಗಲ್​ ಸ್ಮರಿಸಿದೆ.

ಹೌದು. ಗೂಗಲ್​ ಡೂಡಲ್​ ಪಾನಿಪುರಿಗಾಗಿ ಈ ದಿನವನ್ನು ಮೀಸಲಿಟ್ಟಿದೆ. ತನ್ನ ಡೂಡಲ್​ನಲ್ಲಿ ಪಾನಿಪುರಿಯನ್ನು ವಿಭಿನ್ನವಾಗಿ ಚಿತ್ರಿಸುವ ಮೂಲಕ ಗೇಮ್​ ಅನ್ನು ರಚಿಸಿದೆ. ಗೂಗಲ್​ ತೆರೆದಂತೆ ಕಾಣುವ ಈ ಪಾನಿಪುರಿ ಡೂಡಲ್​ ವಿನ್ಯಾಸ ಮಾತ್ರ ಸಖತ್ತಾಗಿದೆ.

ಇಂದಿನ ವಿಶೇಷ ಏನು?

ಮೊದಲೇ ಹೇಳಿದಂತೆ ಪಾನಿಪುರಿ. ಉತ್ತರ ಭಾರತದ ಜನಪ್ರಿಯ ಖಾದ್ಯ. ಇದಕ್ಕೆ ಗೋಲ್​ಗಪ್ಪ ಅಥವಾ ಪುಚ್ಕಾ ಎಂದು ಕರೆಯುತ್ತಾರೆ. ಅಂಗಡಿ ಮಳಿಗೆಗಳಲ್ಲಿ ಈ ಖಾದ್ಯ ಸಿಗೋದಕ್ಕಿಂತ ಹೆಚ್ಚು ರಸ್ತೆ ಬದಿಯ ಅಂಗಡಿಗಳಲ್ಲಿ ಹೆಚ್ಚಾಗಿ ಸಿಗುತ್ತದೆ.

ಅಂದಹಾಗೆಯೇ, ಇಂದು ಗೂಗಲ್​ ಡೂಡಲ್​ ಮೂಲಕ ಪಾನಿಪುರಿಯನ್ನು ನೆನೆಸಿಕೊಳ್ಳಲು ಕಾರಣವೊಂದಿದೆ. ಅದೇನೆಂದರೆ 2015ರಲ್ಲಿ ಇಂದೋರ್​ನ ರೆಸ್ಟೋರೆಂಟ್​​ವೊಂದು ಸುಮಾರು 51 ಪ್ಲೇವರ್​ನ ಪಾನಿಪುರಿಯನ್ನು ತಯಾರಿಸುವ ಮೂಲಕ ವರ್ಲ್ಡ್​ ರೆಕಾರ್ಡ್​​ ಮಾಡಿದೆ. ಇದೇ ವಿಚಾರವಾಗಿ ಪಾನಿಪುರಿ ಗೇಮ್​ ರಚಿಸುವ ಮೂಲಕ ಗೂಗಲ್​ ತನ್ನ ಡೂಡಲ್​ ಅನ್ನು ವಿಭಿನ್ನವಾಗಿ ಚಿತ್ರಿಸಿದೆ.

ಪಾನಿಪುರಿ ಡೂಡಲ್​ ಗೇಮ್ (ಲಿಂಕ್​ ಮೇಲೆ ಕ್ಲಿಕ್​ ಮಾಡಿ)

ಇನ್ನು ಬೇಯಿಸಿದ ಆಲುಗಡ್ಡೆ ಬಳಸಿ ಪಾನಿಪುರಿ, ಗೋಲ್​ಗಪ್ಪ ತಯಾರಿಸಲಾಗುತ್ತದೆ. ಇದರೊಂದಿಗೆ ಜಲಜೀರ ಪ್ಲೇವರ್​ ನೀರನ್ನು ಮಿಶ್ರಣ ಮಾಡಿ ಸೇವಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಡೂಡಲ್​ ಗೇಮ್​ ರಚಿಸಿ ಪಾನಿಪುರಿಯನ್ನು ಸ್ಮರಿಸಿದ ಜನಪ್ರಿಯ ಗೂಗಲ್​!

https://newsfirstlive.com/wp-content/uploads/2023/07/Google-Doodle.jpg

Load More