newsfirstkannada.com

ದ್ರಾವಿಡ್​ ಕೋಚ್​​ ಹುದ್ದೆಗೇರಿದಾಗ ಇತ್ತು ದೊಡ್ಡ ವಿವಾದ; ಕೊಹ್ಲಿ-ರೋಹಿತ್ ಕೋಲ್ಡ್​ವಾರ್​ಗೆ ​ಬ್ರೇಕ್​ ಹಾಕಿದ ಕತೆ ರೋಚಕ..!

Share :

17-11-2023

    ಕಪ್​ ಗೆಲ್ಲಿಸಲು ರಾಹುಲ್​ ದ್ರಾವಿಡ್​ ಹೆಣೆದರು ರಣತಂತ್ರ

    ಜಂಟಲ್​ಮನ್​ ಗೇಮ್​ನ ರಿಯಲ್​ ಜಂಟಲ್​ಮನ್​

    ವಿವಾದಗಳನ್ನ ತಣ್ಣಗಾಗಿಸಲು ದಿ ವಾಲ್​ ಮಾಡಿದ್ದು ಏನು?

ಕ್ರಿಕೆಟ್​ನ ಜಂಟಲ್​ಮನ್​ ಗೇಮ್​ ಅನ್ನೋ ನಾವು ಈ ಗೇಮ್​ ರಿಯಲ್​ ಜಂಟಲ್​ ಮೆನ್​ ಅನ್ನೋ ದಿ ವಾಲ್​ ರಾಹುಲ್ ದ್ರಾವಿಡ್​ರನ್ನ. ಕಾಂಟ್ರವರ್ಸಿಗೂ ದ್ರಾವಿಡ್​ ಆಗಿ ಬರೋದೆಯಿಲ್ಲ.. ಆಡ್ತಾ ಇದ್ದ ದಿನಗಳಿಂದ ಈವರೆಗೆ ವಿವಾದಗಳಿಂದ ಸದಾ ಅಂತರವನ್ನ ಕಾಯ್ದುಕೊಂಡೆ ದ್ರಾವಿಡ್​ ಬಂದಿರೋದು. ಇಂಥ ದ್ರಾವಿಡ್​ ಕೋಚ್​​ ಹುದ್ದೆಗೇರಿದಾಗ ಟೀಮ್​ ಇಂಡಿಯಾದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಯ್ತು.. ಆ ವಿವಾದವನ್ನ ದ್ರಾವಿಡ್​ ತಣ್ಣಗಾಗಿಸಿದ ಕಥೆಯೇ ರೋಚಕ.

ನವೆಂಬರ್​ 17, 2021

ಆಗ ತಾನೇ ರವಿ ಶಾಸ್ತಿ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ 2021 ಟಿ20 ವಿಶ್ವಕಪ್​ನಲ್ಲಿ ಹೀನಾಯ ಸೋಲುಂಡು ಬಂದಿತ್ತು. ಆಗ ದ್ರಾವಿಡ್​ ಟೀಮ್​ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೇರಿದ್ರು. ನವೆಂಬರ್​ 17, 2021ರಲ್ಲಿ ನಡೆದ ನ್ಯೂಜಿಲೆಂಡ್​ ಸರಣಿಯೊಂದಿಗೆ ಜವಾಬ್ದಾರಿಯನ್ನ ದ್ರಾವಿಡ್​​ ತೆಗೆದುಕೊಂಡರು. ಅದಾಗಿ ಕೆಲವೇ ದಿನಕ್ಕೆ ದೊಡ್ಡ ಹೈ ಡ್ರಾಮಾ ನಡೆದು ಬಿಡ್ತು. ಕಿಂಗ್​ ಕೊಹ್ಲಿ vs ಬಿಸಿಸಿಐ ನಡುವೆ ದೊಡ್ಡ ವಾರ್​ ನಡೆದೇ ಬಿಡ್ತು. ಅಂದಿನ ಬಿಸಿಸಿಐ ಬಾಸ್​ ಸೌರವ್​ ಗಂಗೂಲಿ, ಅಂದಿನ ನಾಯಕ ವಿರಾಟ್​ ಕೊಹ್ಲಿ ನಡುವೆ ಬಹಿರಂಗಾವಾಗೇ ಟಾಕ್​ ವಾರ್​ ನಡೆಯಿತು.

ಜನವರಿ 15, 2022

ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಬಲವಂತವಾಗಿ ಏಕದಿನ ನಾಯಕತ್ವ ಕೊಕ್​ ಕೊಡ್ತು. ಆ ಬಳಿಕ ಬಿಸಿಸಿಐ ಬಾಸ್​ಗಳು, ಸೆಲೆಕ್ಷನ್​ ಕಮಿಟಿ ಹಾಗೂ ವಿರಾಟ್​ ಕೊಹ್ಲಿ ನಡುವೆ ಮಾತಿನ ಸಮರವೇ ನಡೆಯಿತು. ವಾರ್​ ದೊಡ್ಡವರ ನಡುವೆ ನಡೆದ್ರೂ ಇದರ ಎಫೆಕ್ಟ್​ ಡ್ರೆಸ್ಸಿಂಗ್​ ರೂಮ್​ಗೂ ತಟ್ಟಿತ್ತು. ಇದ್ರ ನಡುವೆಯೇ ಸೌತ್​ ಆಫ್ರಿಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ಸರಣಿ ಸೋತೆ ಬಿಡ್ತು. ಇದಕ್ಕಿದ್ದಂತೆ ವಿರಾಟ್​ ಟೆಸ್ಟ್​ ನಾಯಕತ್ವ ಗುಡ್​ ಬೈ ಹೇಳಿದರು.

ರೋಹಿತ್​ vs ಕೊಹ್ಲಿ ಕೋಲ್ಡ್​ವಾರ್​.. ದ್ರಾವಿಡ್​ಗೆ ಟೆನ್ಶನ್​..!

ಕೊಹ್ಲಿ ರಾಜೀನಾಮೆಯೊಂದಿಗೆ ಕಾಂಟ್ರವರ್ಸಿಗಳಿಗೆ ತೆರೆ ಬಿತ್ತು. ಅದಾಗಲೇ ಡ್ರೆಸ್ಸಿಂಗ್​ ರೂಮ್​ ಎರಡು ಬಣವಾಗಿ ಬಿಟ್ಟಿತ್ತು. ನಿರ್ಗಮಿತ ನಾಯಕ ಕೊಹ್ಲಿಯದ್ದು ಒಂದು ಬಣವಾದ್ರೆ ನೂತನ ನಾಯಕನ ರೋಹಿತ್​ದು ಇನ್ನೊಂದು ಬಣವಾಗಿತ್ತು. ಇದ್ರ ನಡುವೆ ಇಕ್ಕಟ್ಟಿಗೆ ಸಿಲುಕಿದ್ದು ಕೋಚ್​ ದ್ರಾವಿಡ್​. ಸೀನಿಯರ್​ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ನಡುವಿನ EGO ಫೈಟ್​​ನ ನೇರವಾದ ಪರಿಣಾಮ ಬಿದ್ದಿದ್ದು ಟೀಮ್​ ಇಂಡಿಯಾ ಪರ್ಫಾಮೆನ್ಸ್​ ಮೇಲೆ.. ಕೊನೆಗೆ ಇವರಿಬ್ಬರ ನಡುವೆ ಪ್ಯಾಚ್​ ಅಪ್​ ಮಾಡೋ ಜವಾಬ್ದಾರಿ ಹೊತ್ತಿದ್ದು ಕೋಚ್​ ರಾಹುಲ್​ ದ್ರಾವಿಡ್​.!

ಟಿ-20 ವಿಶ್ವಕಪ್-2022

2022ರ ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಸೀನಿಯರ್ ಆಟಗಾರ ಜೊತೆ ರಾಹುಲ್​ ದ್ರಾವಿಡ್​​ ಅತಿ ಹೆಚ್ಚು ಸಮಯ ಕಳೆದಿದ್ರು ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ. ಕೋಲ್ಡ್​ವಾರ್​ಗೆ ಬ್ರೇಕ್​ ಹಾಕಲು ಸುದೀರ್ಘ ಇಬ್ಬರೊಂದಿಗೆ ಚರ್ಚಿಸಿದ್ದ ದಿ ವಾಲ್, ಕೊನೆಗೂ ಸಂಧಾನ ಮಾಡಿದ್ರು. ಅದಕ್ಕೆ ರಿಸಲ್ಟ್​ ಕೂಡ ಸಿಗ್ತು. ಟಿ20 ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್​ ಕಟ್ಟಿದ ಕೊಹ್ಲಿಯನ್ನ ರೋಹಿತ್​ ಹೊತ್ತು ಮೆರೆಸಿದ್ರು. ಅದು ಕೇವಲ ಸಂಭ್ರಮಾಚರಣೆಯಾಗಿರಲಿಲ್ಲ. ಸಂಧಾನದ ದೊಡ್ಡ ಸಂದೇಶ.

ಏಕದಿನ ವಿಶ್ವಕಪ್​-2023

ಈ ವಿಶ್ವಕಪ್​ನಲ್ಲಿ ಎಲ್ಲವೂ ಬದಲಾಗಿದೆ. ರೋಹಿತ್-ಕೊಹ್ಲಿ ಹಿಂದೆಂದೂ ಇರದಷ್ಟು ಆತ್ಮೀಯರಾಗಿದ್ದಾರೆ. ಸೋಷಿಯಲ್​ ತುಂಬೆಲ್ಲಾ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಬ್ರೊ ಮ್ಯಾನ್ಸ್​ನ ಸಾಲು-ಸಾಲು ಪೋಸ್ಟ್​​​ಗಳು ಬರ್ತಿವೆ. ಅಷ್ಟರ ಮಟ್ಟಿಗೆ ಕಿಂಗ್​ ಕೊಹ್ಲಿ-ಹಿಟ್​ಮ್ಯಾನ್​ ರೋಹಿತ್​​ರ ಬಾಂಧವ್ಯ​ ಸೆನ್ಸೇಷನ್​ ಸೃಷ್ಟಿಸಿದೆ.

ಸಕ್ಸಸ್​, ಫೇಲ್ಯೂರ್​​.. ಎಲ್ಲದರಲ್ಲೂ ನಾವು ಒಂದೇ

ವಿಶ್ವಕಪ್​ ಟೂರ್ನಿಯ ಆರಂಭಿಕ ಪಂದ್ಯದಿಂದ ಇವರೆಗೆ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಒಟ್ಟಾಗಿ ಹೆಜ್ಜೆ ಹಾಕ್ತಿದ್ದಾರೆ. ಸಕ್ಸಸ್​ ಹಾಗೂ ಫೇಲ್ಯೂರ್​ ಎರಡರಲ್ಲೂ ಜೊತೆಯಾಗಿ ನಿಲ್ತಿದ್ದಾರೆ. ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸ್ತಿದ್ದಾರೆ. ರೋಹಿತ್​ ಸೆಂಚುರಿ ಹೊಡೆದ್ರೆ ಕೊಹ್ಲಿ ಖುಷಿ ಪಡ್ತಾರೆ. ಶತಕದ ಅಂಚಿನಲ್ಲಿ ಕೊಹ್ಲಿ ಔಟಾದ್ರೆ ರೋಹಿತ್​ ಬೇಸರ ಹೊರ ಹಾಕ್ತಿದ್ದಾರೆ. ಸಂಕಷ್ಟ ಎದುರಾದಾಗ ರೋಹಿತ್​, ಕೊಹ್ಲಿಯ ಮೊರೆ ಹೋಗ್ತಿದ್ದಾರೆ. ಕೊಹ್ಲಿ ಕೂಡ ಅಷ್ಟೇ ಉತ್ಸಾಹದಿಂದ ನಾಯಕನ ಬೆನ್ನಿಗೆ ನಿಂತಿದ್ದಾರೆ. ದೇಶಕ್ಕಾಗಿ ಕಪ್​ ಗೆಲ್ಲಬೇಕು ಎಂಬ ಹಂಬಲ ಇಬ್ಬರಲ್ಲೂ ಜೋರಾಗಿದೆ.

ಟೀಮ್​ ಇಂಡಿಯಾದ ಬಲವೇ ಜೋಡೆತ್ತುಗಳ ಆಟ

ಆಟದ ವಿಚಾರದಲ್ಲೂ ರೋಹಿತ್​ ಶರ್ಮಾ-ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ಬಲವಾಗಿ ನಿಂತಿದ್ದಾರೆ. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಾ ಇರೋ ಇವರಿಬ್ಬರು ರನ್​ ಕೊಳ್ಳೆ ಹೊಡೀತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಂಡದ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸ್ತಿದ್ದಾರೆ.
ಟಿ20 ವಿಶ್ವಕಪ್​ನಲ್ಲಿ ರೋಹಿತ್-ಕೊಹ್ಲಿ ಒಂದಾದ್ರೂ ವಿಶ್ವಕಪ್​ ನಮ್ಮದಾಗಲಿಲ್ಲ. ಈ ಬಾರಿ ವಿಶ್ವಕಪ್​ ಗೆದ್ದೆ ಗೆಲ್ಲುವ ಹುಮ್ಮಸ್ಸು ತಂಡದಲ್ಲಿದೆ. ಭಾರತೀಯ ಕನಸನ್ನ ನನಸು ಮಾಡಲು ಕೊಹ್ಲಿ-ರೋಹಿತ್​ ಕೂಡ ಕಟ್ಟಿ ನಿಂತಿದ್ದಾರೆ. ಮೈದಾನದಲ್ಲಿ ಜೋಡೆತ್ತುಗಳಂತೆ ಹೋರಾಡುತ್ತಿದ್ದಾರೆ. ಇಂದು ಇವರಿಬ್ಬರ ಹೋರಾಟವನ್ನ ಸಂಭ್ರಮಿಸೋ ನಾವು ಇವರಿಬ್ಬರನ್ನ ನಡುವೆ ಬೆಸುಗೆ ಹಾಕಿದ ದ್ರಾವಿಡ್​ಗೆ ಸಲಾಂ ಅನ್ನಲೇಬೇಕಲ್ವೇ?
ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದ್ರಾವಿಡ್​ ಕೋಚ್​​ ಹುದ್ದೆಗೇರಿದಾಗ ಇತ್ತು ದೊಡ್ಡ ವಿವಾದ; ಕೊಹ್ಲಿ-ರೋಹಿತ್ ಕೋಲ್ಡ್​ವಾರ್​ಗೆ ​ಬ್ರೇಕ್​ ಹಾಕಿದ ಕತೆ ರೋಚಕ..!

https://newsfirstlive.com/wp-content/uploads/2023/11/DRAVID-1.jpg

Load More