ಆರಂಭದ 1 ತಿಂಗಳ ಶರವೇಗದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು
ಈ ರೈಲ್ವೆ ಮಾರ್ಗವನ್ನೇ ಅವಲಂಭಿಸಿರುವ ಜನರಿಗೆ ನಿತ್ಯ ನರಕ
ಕೇವಲ 10 ನಿಮಿಷದ ರಸ್ತೆಗೆ ಮುಕ್ಕಾಲು ಗಂಟೆ ಪ್ರಯಾಣಿಸಬೇಕು
ಬಿಬಿಎಂಪಿ ಯಾವಾಗಲೂ ಅರ್ಧ ಕೆಲಸ ಮಾಡೋದೆ ಹೆಚ್ಚು. ಇದಕ್ಕೆ ಉದಾಹರಣೆ ಎಂಬಂತೆ ಹಿಟಾಚಿಯಿಂದ ಹಗೆದು ಬಿಟ್ಟು ನಿರ್ಮಾಣ ಸಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಅಲ್ಲಿ ಓಡಾಡುವ ಜನರು ಹಿಡಿ ಶಾಪ ಹಾಕಿಕೊಂಡು ಹೋಗುತ್ತಿದ್ದಾರೆ. ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೋರಿಪಾಳ್ಯ ವಾರ್ಡ್ನ ಹೊಸಹಳ್ಳಿ ರೈಲ್ವೆ ಬ್ರಿಡ್ಜ್. ಈ ರೈಲ್ವೆ ಮೇಲ್ಸೆತುವೆ ಪುನರ್ ನಿರ್ಮಾಣ ಕಾಮಗಾರಿಯನ್ನ ಬಿಬಿಎಂಪಿ ಎರಡೂವರೆ ತಿಂಗಳ ಹಿಂದೆ ಕೈಗೆತ್ತಿಕೊಂಡಿತ್ತು. ಅವಾಗಿನಿಂದ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆರಂಭದ 1 ತಿಂಗಳ ಶರವೇಗದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು. ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಈ ರೈಲ್ವೆ ಮಾರ್ಗ ಅವಲಂಭಿಸಿರುವ ಜನರು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ವಿಜಯನಗರದಿಂದ-ಗೋರಿಪಾಳ್ಯ ಹಾಗೇ ಗೋರಿಪಾಳ್ಯದಿಂದ ವಿಜಯನಗರಕ್ಕೆ ಹೋಗುವ ಜನ ಪರ್ಯಾಯ ಮಾರ್ಗ ಅವಲಂಭಿಸಿದ್ದಾರೆ. ಕೇವಲ 10 ನಿಮಿಷದ ರಸ್ತೆಗೆ ಮುಕ್ಕಾಲು ಗಂಟೆ ಪ್ರಯಾಣಿಸಬೇಕಾಗಿದೆ. ಪೈಪ್ ಲೈನ್ ರಸ್ತೆ ಹಾಗೂ ಟಿಲಿಕಾಂ ಲೇಔಟ್ ಕಡೆಯಿಂದ ಮೈಸೂರು ರಸ್ತೆ ಕಡೆ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆ ಬಳಸ್ತಿದ್ದಾರೆ. ಇದರಿಂದ ಜಾಮ್ ಆಗಿ ಪಾಲಿಕೆಗೆ ಹಿಡಿಶಾಪ ಹಾಕ್ತಿದ್ದಾರೆ.
100 ಮೀಟರ್ ಕಾಮಗಾರಿಯಿಂದ ನಿತ್ಯ ಸಾವಿರಾರು ಜನ ಪರದಾಡುವಂತಾಗಿದೆ. ಅಧಿಕಾರಿಗಳ ಬೇಜಾಬ್ದರಿ ತನಕ್ಕೆ ಜನ ಗೋಳಾಡುವಂತಾಗಿದೆ. ಮಾತನಾಡಿದ್ರೆ ಹೈಟೆಕ್ ಟೆಕ್ನಲಾಜಿ. ಕೋಟಿ ಕತೆ ಹೇಳುವ ಬಿಬಿಎಂಪಿ ಈ ಚಿಕ್ಕ ಕೆಲಸ ಮುಗಿಸದೇ ಇರೋದೇ ನಾಚಿಕೆಗೇಡಿನ ವಿಚಾರ. ಈಗಾಗಲೇ ಸುತ್ತಮುತ್ತ ಜನ ಸಮಸ್ಯೆ ಅನುಭವಿಸ್ತಿದ್ದಾರೆ. ಇನ್ನಾದರೂ ಜನಪರ ಕಾಳಜಿ ಇದ್ರೆ ಈ ರಸ್ತೆ ಸರಿಪಡಿಸಿ ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ