newsfirstkannada.com

×

BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಕಂಟೆಸ್ಟೆಂಟ್ಸ್​; ಮುಂದೆ ಇದೆ ನಿಜವಾದ ಅಸಲಿ ಆಟ

Share :

Published September 29, 2024 at 6:25am

    ಫಿನಾಲೆ ಮಧ್ಯೆ ಬಿಗ್​ಬಾಸ್​ ಸ್ಪರ್ಧಿಗಳ ಪ್ರೋಮೋ ರಿಲೀಸ್

    ಹೊಸ ಅಧ್ಯಾಯದೊಂದಿಗೆ ಬರುತ್ತಿದೆ ಬಿಗ್​ಬಾಸ್​ ಸೀಸನ್ 11

    ಐದನೇ ಸ್ಪರ್ಧಿಯಾಗಿ ಬಿಗ್​ ಮನೆಗೆ ಎಂಟ್ರಿ ಕೊಟ್ಟವರು ಯಾರು?

ಕನ್ನಡದ ಬಿಗ್​ಬಾಸ್​ ಸೀಸನ್​ 11 ಇಂದು ಗ್ರ್ಯಾಂಡ್​ ಓಪನಿಂಗ್​ ಇದೆ. ಇಷ್ಟು ದಿನ ವೀಕ್ಷಕರು ಕಾತುರದಿಂದ ಕಾಯುತ್ತಿದ್ದ ಸಮಯ ಬಂದು ಬಿಟ್ಟಿದೆ. ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಓಪನಿಂಗ್​ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು ಶೋ ಗ್ರ್ಯಾಂಡ್​ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿತ್ತು.

ಇದನ್ನೂ ಓದಿ: BIGG BOSS 11ಗೆ ಎಂಟ್ರಿ ಕೊಡಲಿದ್ದಾರೆ ಸಖತ್​ ಸ್ಟ್ರಾಂಗ್ ಕಂಟೆಸ್ಟೆಂಟ್ಸ್; ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

ನಿನ್ನೆ ನಡೆದ ರಾಜಾರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಒಟ್ಟು ಐದು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯ ನಡು ನಡುವೆ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳ ಪ್ರೋಮೋ ರಿಲೀಸ್​ ಆಗಿತ್ತು. ಮೊದಲ ಪ್ರೋಮೋದಲ್ಲಿ ಮೊದಲ ಸ್ಪರ್ಧಿಯಾಗಿ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದರು. ಎರಡನೇ ಸ್ಪರ್ಧಿಯಾಗಿ ಅಚ್ಚರಿಯ ರೀತಿಯಲ್ಲಿ ಲಾಯರ್​ ಜಗದೀಶ್​ ಅವರು ಎಂಟ್ರಿ ಕೊಟ್ಟಿದ್ದಾರೆ.

ಇನ್ನೂ ಯಾರು ಕೂಡ ಗೆಸ್​ ಮಾಡದ ರೀತಿಯಲ್ಲಿ ಚೈತ್ರಾ ಕುಂದಾಪುರ ಅವರು ಎಂಟ್ರಿ ಕೊಟ್ಟಿದ್ದರು. ಇದೀಗ 4ನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ ಈ ಗೋಲ್ಡ್​ ಸುರೇಶ್. ಐದನೇ ಸ್ಪರ್ಧಿಯಾಗಿ ಬಿಗ್​ ಮನೆಗೆ ಯಾರು ಎಂಟ್ರಿ ಕೊಡಲಿದ್ದಾರೆ ಎಂದು ಇಂದಿನ ಗ್ರ್ಯಾಂಡ್ ಓಪನಿಂಗ್​ನಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK11: ದೊಡ್ಮನೆಗೆ​ ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟ ವಕೀಲ ಜಗದೀಶ್​

ಸದ್ಯ ಇಂದಿನಿಂದ ಬಿಗ್​ಬಾಸ್​ ಸೀಸನ್​ 11 ಶುರುವಾಗಲಿದೆ. ಇಂದು ಸಂಜೆ 6 ಗಂಟೆಗೆ ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ ಓಪನಿಂಗ್​ ಇದೆ. ಕಿಚ್ಚ ಸುದೀಪ್​ ಅವರು ಒಬ್ಬರಾದ ಮೇಲೆ ಒಬ್ಬರನ್ನು ವೇದಿಕೆ ಮೇಲೆ ಸ್ವಾಗತಿಸಿ ಬಿಗ್ ಬಾಸ್ ಮನೆಗೆ ಎಲ್ಲಾ ಸ್ಪರ್ಧಿಗಳನ್ನು ಕಳಿಸಲಿದ್ದಾರೆ. ಇದಾದ ಬಳಿಕ ಪ್ರತಿ ರಾತ್ರಿ 9:30 ಗಂಟೆಗೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಕಂಟೆಸ್ಟೆಂಟ್ಸ್​; ಮುಂದೆ ಇದೆ ನಿಜವಾದ ಅಸಲಿ ಆಟ

https://newsfirstlive.com/wp-content/uploads/2024/09/bbk-111-1.jpg

Load More