newsfirstkannada.com

ಫ್ರೀ ಬಸ್​ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ಕಾಂಗ್ರೆಸ್​ ಸರ್ಕಾರ; ಏನದು?

Share :

30-07-2023

  ನಾರಿಯರ ಫ್ರೀ ಬಸ್​​ ಬೆನ್ನಲ್ಲೇ ವಯಸ್ಕರ ಕಾಶಿ ಯಾತ್ರೆ..!

  ಮುಜರಾಯಿ ಇಲಾಖೆ ಕಾಶಿ ಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ

  ಮುಜರಾಯಿ ಇಲಾಖೆಯಿಂದ ರೈಲಿನಲ್ಲಿ ಏನೆಲ್ಲಾ ವ್ಯವಸ್ಥೆ?

ಬೆಂಗಳೂರು: 8 ದಿನ.. 4ನೇ ಯಾತ್ರೆ.. 403 ಮಂದಿ ಪ್ರಯಾಣಿಕರು ಕಾಶಿ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಹೊರಟಿದ್ದರು. ಅವರಿಗೆ ಅಷ್ಟು ಸುಲಭವಲ್ಲದ ದಾರಿಗೆ ದೀಪವಾಗಿದ್ದು ಮುಜರಾಯಿ ಇಲಾಖೆ. ನಾರಿಯರ ಫ್ರೀ ಬಸ್​​ ಬೆನ್ನಲ್ಲೇ ವಯಸ್ಕರ ಕಾಶಿ ಯಾತ್ರೆ ಕನಸಿಗೆ ರೆಕ್ಕೆ ಸಿಕ್ಕಿದೆ. ಜನರ ಬಹು ದಿನಗಳ ಕನಸು ನನಸು ಮಾಡೋದಕ್ಕೆ ರಾಜ್ಯದ ಮುಜರಾಯಿ ಇಲಾಖೆ ಕಾಶಿ ಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ. ಹೀಗಾಗಿ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ಒಟ್ಟು 403 ಪ್ರಯಾಣಿಕರನ್ನ ಹೊತ್ತು ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ಸಾಗಿತ್ತು. ಇದು ಒಟ್ಟು 8 ದಿನಗಳ ಪ್ರವಾಸವಾಗಿದ್ದು ಒಬ್ಬರಿಗೆ 20 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂಪಾಯಿ ಸರ್ಕಾರದಿಂದ ಸಿಗಲಿದೆ. ಅಂದರೆ ಒಬ್ಬರಿಗೆ 15 ಸಾವಿರ ರೂಪಾಯಿ ಖರ್ಚು ಪ್ರಯಾಣಿಕರಿಗೆ ಬರಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದ್ದು, 700 ಸೀಟ್ ಸಾಮರ್ಥ್ಯ ಹೊಂದಿರುವ ರೈಲಿನಲ್ಲಿ ಸದ್ಯ 403 ಸೀಟ್ ಬುಕ್ಕಿಂಗ್ ಆಗಿವೆ.

ಇನ್ನು, ಈ 8 ದಿನಗಳ ಪ್ರಯಾಣದಲ್ಲಿ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ರಾಜ್ಯ ಸರ್ಕಾರದ ವೆಚ್ಚದಲ್ಲೇ ಈ ಬೋಗಿಗಳನ್ನ ತಯಾರಿಸಲಾಗಿದ್ದು, ಆಗಸ್ಟ್ 15ಕ್ಕೆ 5ನೇ ಯಾತ್ರೆ ಶುರುವಾಗಲಿದೆ ಅಂತ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಈಗಾಗಲೇ ಕಾಶಿ ಯಾತ್ರೆಯ ಉಪಯೋಗವನ್ನ ಶೇ.80ರಷ್ಟು ಜನರು ಪಡೆದುಕೊಂಡಿದ್ದು, ಖುಷಿ ಖುಷಿಯಾಗೇ ತಮ್ಮ ಪ್ರಯಾಣವನ್ನ ಶುರು ಮಾಡಿದ್ದಾರೆ. ಮಹಿಳೆಯರ ಫ್ರೀ ಬಸ್​​ ಪಯಣದ ಬೆನ್ನಲ್ಲೇ ವಯಸ್ಕರಿಗೂ ರಾಜ್ಯ ಸರ್ಕಾರ ಇಂತಹದ್ದೊಂದು ಆಫರ್​ ಕೊಟ್ಟಿದ್ದು ಪ್ರಯಾಣಿಕರಂತೂ ಖುಷಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ಕಾಂಗ್ರೆಸ್​ ಸರ್ಕಾರ; ಏನದು?

https://newsfirstlive.com/wp-content/uploads/2023/06/RAMALINGAREDDY.jpg

Load More