newsfirstkannada.com

ಯುವ ಜನತೆಗೆ ಬಂಪರ್​ ಆಫರ್​; ಮದುವೆಯಾದ್ರೆ ಸರ್ಕಾರದಿಂದ ಬರೋಬ್ಬರಿ 31 ಲಕ್ಷ ಘೋಷಣೆ

Share :

Published August 31, 2024 at 7:23am

    ಯುವ ಜನತೆಗೆ ಮದುವೆಗೆ ಪ್ರೋತ್ಸಾಹಿಸಲು ಸರ್ಕಾರದಿಂದ ಭರ್ಜರಿ ಪ್ಲಾನ್​

    ದಯಮಾಡಿ ಮದುವೆ ಮಾಡಿಕೊಳ್ಳಿ ಅಂತ ಬೆನ್ನ ಹಿಂದೆ ಬಿದ್ದ ಸರ್ಕಾರ

    ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನ ತಪ್ಪಿಸಲು ಸರ್ಕಾರದಿಂದ ನಿರ್ಧಾರ

ಸಾಯೋಕೆ ಮುಂಚೆ ಮಕ್ಕಳ ಮದುವೆ ಮಾಡಬೇಕು. ಅವರ ಮಕ್ಕಳನ್ನ ಆಡಿಸಬೇಕು ಅನ್ನೋದು ಪ್ರತಿ ಪೋಷಕರ ಕನಸು ಇರುತ್ತೆ. ಕೆಲ ಪೋಷಕರಂತೂ ಹಠಕ್ಕೆ ಬಿದ್ದು ಮಕ್ಕಳಿಗೆ ಮದುವೆ ಮಾಡಿಸುತ್ತಾರೆ. ಇನ್ನು ಕೆಲವರು ಮಕ್ಕಳ ಆಸೆಗೆ ತಕ್ಕಂತೆ ಬಿಟ್ಟು ಬಿಡುತ್ತಾರೆ. ಆದ್ರೆ, ಇಲ್ಲೊಂದು ಸರ್ಕಾರ ಮದುವೆ ಮಾಡಿಕೊಳ್ಳಿ ದಮ್ಮಯ್ಯ ಅಂತಾ ಜನರ ಹಿಂದೆ ಬಿದ್ದಿದೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್​ ನಟಿ!

ಭಾರತದಲ್ಲಿ ಮದುವೆ ಅಂದ್ರೆ ಅದ್ಧೂರಿ ಅಷ್ಟೇ ಅಲ್ಲದೇ ಬಲು ದುಬಾರಿ. ಸಾಮಾನ್ಯ ಜನಕ್ಕೆ ಆದ್ರೆ ಲಕ್ಷ ಲಕ್ಷ ದುಡ್ಡು ಖರ್ಚು ಆಗುತ್ತೆ. ಕೋಟ್ಯಾಧೀಶರ ಮನೆಯ ಮದುವೆ ಕೇಳಬೇಕಾ. ಇತ್ತೀಚೆಗೆ ನಡೆದ ಅಂಬಾನಿ ಮಗನ ಮದುವೆಯಲ್ಲಿ ಕೋಟಿಗಳಿಗೆ ಲೆಕ್ಕವೇ ಇರಲಿಲ್ಲ. ಕೆಲವೊಂದಿಷ್ಟು ಮಂದಿಯಂತೂ ಮದುವೆ ಆಗಿ ಸಾಲ ಯಾರು ತೀರಿಸುತ್ತಾರಾಪ್ಪ ಅಂತಾ ಸುಮ್ನೆ ಆಗಿಬಿಡುತ್ತಾರೆ. ಅದೇ ರೀತಿ ದಕ್ಷಿಣ ಕೊರಿಯಾದಲ್ಲೂ ಕೂಡ ಮದುವೆಗೆ ಆಸಕ್ತಿನೇ ತೋರಿಸುತ್ತಿಲ್ವಂತೆ. ಅದಕ್ಕೆ ಅಲ್ಲಿನ ಸರ್ಕಾರ ಯುವ ಜನತೆಗೆ ಪ್ರೋತ್ಸಾಹಿಸಲು ಭರ್ಜರಿ ಆಫರ್ ಘೋಷಿಸಿದೆ.

ಈ ಹಿಂದೆ ಜಪಾನ್ ದೇಶದಲ್ಲಿಯೂ ಜನರು ಮದುವೆ ಹಿಂದೇಟು ಹಾಕಿದ್ದ ವಿಷಯ ಕೇಳಿದ್ದೇವೆ. ಈಗ ದಕ್ಷಿಣ ಕೊರಿಯಾದ ಸರದಿ. ಇಲ್ಲಿ ಯುವ ಜನತೆ ಮದುವೆ ಹಾಗೂ ಮಕ್ಕಳ ಬಗ್ಗೆ ಆಸಕ್ತಿಯನ್ನೇ ತೋರಿಸುತ್ತಿಲ್ವಂತೆ. ಹೀಗಾಗಿ ದೇಶದಲ್ಲಿ ಜನನ ಪ್ರಮಾಣ ಕುಸಿದಿದ್ದು, ಅದನ್ನು ಸಮ ಪ್ರಮಾಣದಲ್ಲಿ ತರೋದಕ್ಕೆ ದಕ್ಷಿಣ ಕೊರಿಯಾ ಸರ್ಕಾರ ಹೆಣಗಾಡುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನ ತಪ್ಪಿಸಲು ಅಲ್ಲಿನ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಪ್ರಮಾಣ ಇಳಿಕೆಯಾಗಿದ್ದು, ದೇಶದಲ್ಲಿ ಜನನ ಪ್ರಮಾಣ ಕೇವಲ 0.72ರಷ್ಟು ಮಾತ್ರವಿದೆ.

ಇದನ್ನೂ ಓದಿ: ಈ ಇಬ್ಬರಿಗೆ ರಾಖಿ ಕಟ್ಟಿದ ನಟಿ ನಮ್ರತಾ ಗೌಡ; ಯಾರು ಇರಬಹುದು ಗೆಸ್​ ಮಾಡಿ ನೋಡೋಣ!

ವಿದೇಶಿ ಪ್ರಜೆಗಳನ್ನ ಹೊರತುಪಡಿಸಿದ್ರೆ ಕೇವಲ 49.84 ಮಿಲಿಯನ್ ಜನಸಂಖ್ಯೆ ಇದೆ. ಕಳೆದ ವರ್ಷ 1 ಲಕ್ಷದ 94 ಸಾವಿರ ಮದುವೆ ಮಾತ್ರ ಆಗಿರೋದು. 10 ವರ್ಷಕ್ಕೆ ಹೋಲಿಸಿದ್ರೆ ಶೇಕಡಾ 40ರಷ್ಟು ಮದುವೆ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಮದುವೆ ಆಗಿ ಮಕ್ಕಳು ಮಾಡಿಕೊಂಡ್ರೆ ಸರ್ಕಾರ 31 ಲಕ್ಷ ನೀಡೋದಾಗಿ ಘೋಷಿಸಿದೆ. ಜನಸಂಂಖ್ಯೆ ಬೆಳವಣಿಗೆಗೆ ಹಾಗೂ ಜನನ ಪ್ರಮಾಣ ಹೆಚ್ಚಿಸಲು ದಕ್ಷಿಣ ಕೊರಿಯಾ ಸರ್ಕಾರ ಅನೇಕ ಕಾರ್ಯಕ್ರಮಗಳನ್ನ ಪ್ರಾರಂಭಿಸಿದೆ. ಇದರ ಭಾಗವಾಗಿ ಯುವಜನತೆ ಮದುವೆ ಆಗಬೇಕು ಅಂತಾ ಅವರನ್ನ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನ ಘೋಷಣೆ ಮಾಡ್ತಿದೆ. ಆದ್ರೆ ಅಲ್ಲಿನ ಯುವ ಜನತೆ ಇದನ್ನ ಯಾವ ರೀತಿ ತೆಗೆದುಕೊಳ್ತಾರೋ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ಜನತೆಗೆ ಬಂಪರ್​ ಆಫರ್​; ಮದುವೆಯಾದ್ರೆ ಸರ್ಕಾರದಿಂದ ಬರೋಬ್ಬರಿ 31 ಲಕ್ಷ ಘೋಷಣೆ

https://newsfirstlive.com/wp-content/uploads/2024/08/marriage1.jpg

Load More